ಮೈಸೂರಲ್ಲಿ ಸಿಕ್ಕರು ಅಂತರರಾಜ್ಯ ಕಳ್ಳರು

ಮೈಸೂರು, ಏ. 13 : ಮದುವೆಗಳಿಗೆ ಮಕ್ಕಳನ್ನು ಕಳಿಸಿ ಕಳ್ಳತನ ಮಾಡಿಸುತ್ತಿದ್ದ 9 ಅಂತರರಾಜ್ಯ ಕಳ್ಳರನ್ನು ಮೈಸೂರಿನ ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 60 ಸಾವಿರ ಹಣ, ಒಂದು ಲಕ್ಷ ರೂ.ಗಳ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಧ್ಯಪ್ರದೇಶ ಮೂಲದವರಾದ ನೀರಜ್, ಸವಿತಾ, ಜಯಪ್ರಕಾಶ್, ಬೀಸನ್ ದೇವಿ, ಜುವೆಲ್ ಪ್ರಸಾದ್, ನಂದಿನಿ ಮತ್ತು ಮೂವರು ಮಕ್ಕಳು ಬಂಧಿತ ಆರೋಪಿಗಳಾಗಿದ್ದಾರೆ. ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಮಕ್ಕಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಗುಂಪು ಸಿಕ್ಕಿಬಿದ್ದಿದೆ.

arrest

ಬಂಧಿತರಿಂದ 60 ಸಾವಿರ ನಗದು, 9 ಮೊಬೈಲ್ ಫೋನ್, 1 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಮೂವರು ಮಹಿಳೆಯರು ಮತ್ತು ಮಕ್ಕಳು ತಂಡದಲ್ಲಿ ಸಕ್ರಿಯರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. [ಎಟಿಎಂ ವಾಹನ ಅಪಹರಣ : ವ್ಯಾನ್ ಸಿಕ್ತು, ಹಣ ಎಲ್ಲಿ?]

ಸಿಸಿಟಿವಿಯಲ್ಲಿ ದಾಖಲಾಗಿತ್ತು : ಮಾ.29ರಂದು ಈ ಗುಂಪಿನ ಇಬ್ಬರು ಮಕ್ಕಳು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಕಳ್ಳತನ ನಡೆಸಿ ಪರಾರಿಯಾಗುವ ದೃಶ್ಯ ಸಿಸಿಟಿಯಲ್ಲಿ ದಾಖಲಾಗಿತ್ತು. ಏ.11ರಂದು ಹುಣಸೂರು ರಸ್ತೆಯ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಕದಿಯಲು ಬಂದಾಗ ಸಿಕ್ಕಿಬಿದ್ದಿದ್ದರು. [ಮೈಸೂರು : ಕಳುವಾದ ವಾಹನ ಪತ್ತೆಗೆ ಬಂತು ಆಪ್]

ಕಲ್ಯಾಣ ಮಂಟದಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ವಿಜಯನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಮಕ್ಕಳ ವಿಚಾರಣೆ ನಡೆಸಿದಾಗ ಮೂವರು ಮಹಿಳೆಯರ ಹೆಸರು ಹೇಳಿದ್ದರು. ಅವರನ್ನು ಕರೆತಂದು ವಿಚಾರಣೆ ನಡೆಸಿ, ಸೋಮವಾರ ತಂಡದಲ್ಲಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+