ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತರಾಷ್ಟ್ರೀಯ ಯೋಗ ದಿನಾಚರಣೆ: ಸಾಂಸ್ಕೃತಿಕ ನಗರಿ ಮೈಸೂರಿಗೆ ಮೋದಿ ಭೇಟಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು ಮೇ 21: ಯೋಗ ದಿನಾಚರಣೆಯಂದು ಸಾಂಸ್ಕೃತಿಕ ನಗರಿ‌ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ.

ತೀವ್ರ ಕುತೂಹಲ ಕೆರಳಿಸಿರುವ ಪ್ರಧಾನಿ ನೇತೃತ್ವದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರು ಅಥವಾ ಕಾಶ್ಮೀರದ ಲಡಾಕ್ ನಲ್ಲಿ ನಡೆಯುವುದು ಬಹುತೇಕ ಫೈನಲ್ ಆಗಿತ್ತು. ಮೈಸೂರು ಯೋಗ ಹಬ್ ಆಗಿರುವುದರಿಂದ ಮೋದಿ ಅವರು ಅಂತಿಮವಾಗಿ ಮೈಸೂರಿಗೆ ಬರುವುದನ್ನು ಖಚಿತಪಡಿಸಿದ್ದಾರೆ.

International Yoga Day 2022: PM Narendra Modi to Visit Mysuru

ಈ ಬಾರಿ ಸಂಸದ ಪ್ರತಾಪಸಿಂಹ ಅವರು ಯೋಗದಿನ ದಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರುವಂತೆ ಖುದ್ದ ದೆಹಲಿಗೆ ತೆರಳಿ ಆಹ್ವಾನಿಸಿದ್ದರು. ಇತ್ತ ಸ್ಥಳೀಯ ಶಾಸಕರೂ ಮೋದಿ ಅವರನ್ನು ಕರೆಯಲು ಪ್ರಯತ್ನಿಸುತ್ತಿದ್ದರು. ಕೇಂದ್ರದ ಆಯುಷ್ ತಂಡವೂ ಏ.29ರಂದು ಮೈಸೂರಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿ ಹೋಗಿತ್ತು. ಸದ್ಯ ಈ ಎಲ್ಲಾ ಪ್ರಯತ್ನ ಗಳಿಂದ ಮೈಸೂರಿಗೆ ಮೋದಿ ಬರುವುದು ಖಚಿತಗೊಂಡಿದೆ.

ಕೇಂದ್ರ ಆಯುಷ್ ಸಚಿವಾಲಯವು 2015ರಿಂದ ಜೂ.21ರಂದು ಯೋಗ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷ ಒಂದೊಂದು ರಾಜ್ಯದ ನಗರಕ್ಕೆ ತೆರಳಿ ಯೋಗ ಆಸನಗಳನ್ನು ಮಾಡುವ ಮೂಲಕ ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಕೆಲಸ ಮಾಡುತ್ತಿದ್ದಾರೆ. 2015ರಲ್ಲಿ ದೆಹಲಿಯ ರಾಜಪಥದಲ್ಲಿ ಮೋದಿ ಯೋಗ ಸಂದೇಶ ಸಾರಿದ್ದರು. 2016ರಲ್ಲಿ ಚಂಡೀಗಢ, 2017ರಲ್ಲಿ ಲಕ್ಷ್ಮೀ, 2018ರಲ್ಲಿ ಉತ್ತರಾಖಂಡದ ಡೆಹ್ರಾಡೂನ್, 2019ರಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆದಿತ್ತು. ಇಲ್ಲೆಲ್ಲಾ ನರೇಂದ್ರ ಮೋದಿ ಅವರು ಭಾಗವಹಿಸಿ ಸ್ವತಃ ಯೋಗಾಸನ ಗಳನ್ನು ಮಾಡಿ ಯೋಗದ ಪ್ರಾಮುಖ್ಯತೆ ಯನ್ನು ಪ್ರಚುರಪಡಿಸಿದ್ದರು. ಸಾವಿರಾರು ಜನರು ಈ ಕಾಠ್ಯಕ್ರಮದಲ್ಲಿ ಭಾಗವಹಿಸಿ ಯೋಗ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಕೋವಿಡ್ ಕಾರಣದಿಂದ ಯಾವ ರಾಜ್ಯದಲ್ಲೂ ಯೋಗ ದಿನಾಚರಣೆ ನಡೆದಿಲ್ಲ.

International Yoga Day: Modi visits the cultural city of Mysore

ರೇಸ್‌ಕೋರ್ಸ್ ಅಥವಾ ಅರಮನೆ?

ಈಗಾಗಲೇ ಯೋಗ ಫೆಡರೇಶನ್, ಅಸೋಸಿಯೇಷನ್‌ ಹಾಗೂ ಎಲ್ಲಾ ಸಂಘಸಂಸ್ಥೆಗಳು ಮೈಸೂರಿನಲ್ಲಿ ಯೋಗ ದಿನಾಚರಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿವೆ. ಅರಮನೆ ಎದುರು ಅಥವಾ ರೇಸ್‌ಕೋರ್ಸ್‌ನಲ್ಲಿ ಕಾರಕ್ರಮ ನಡೆಸಲು ಜಿಲ್ಲಾಡಳಿತ ಉದ್ದೇಶಿಸಿದ್ದು, ಜಾಗ ಇನ್ನೂ ಅಂತಿಮವಾಗಿಲ್ಲ. ಆದರೆ, ಒಂದೂವರೆ ಲಕ್ಷಜನರನ್ನು ಸೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ.

Recommended Video

ಬೆಂಗಳೂರಿನಲ್ಲಿ ಭಾರೀ ಮಳೆ , ಸಿದ್ದರಾಮಯ್ಯ ಹೇಳಿದ್ದೇನು | OneIndia Kannada

ಮೈಸೂರು ಯೋಗಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಎಷ್ಟೋ ಯೋಗ ತಜ್ಞರು ಮೈಸೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ವಿದೇಶಿ ಪ್ರಜೆಗಳು ಮೈಸೂರಿಗೆ ಆಗಮಿಸಿ ಯೋಗ ಕಲಿಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿ ಆಗಮಿಸಲು ಓಕೆ ಎಂದಿದ್ದಾರೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.

English summary
Prime Minister Narendra Modi will coming to mysore to celebrate yoga day. the necessary arrangements have been made by the sheriff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X