ಕೋವಿನ್-ಕಾರ್; 24 ಗಂಟೆ ಮೊದಲೇ ಲಸಿಕೆ ಮಾಹಿತಿ ಮೊಬೈಲ್‌ಗೆ
ಮೈಸೂರು, ಜುಲೈ 30; ಕರ್ನಾಟಕ ಸರ್ಕಾರ ಹೊಸದಾಗಿ ಲಸಿಕೆ ಪಡೆಯುವವರು ಮತ್ತು 2ನೇ ಡೋಸ್ ಲಸಿಕೆ ಪಡೆಯಬೇಕಾಗಿರುವವರ ಅನುಕೂಲಾಕ್ಕಾಗಿ ಕೋವಿನ್-ಕಾರ್ ಎಂಬ ತಂತ್ರಾಶವನ್ನು ಅಭಿವೃದ್ಧಿಗೊಳಿಸಿದೆ. ಮೈಸೂರು ನಗರದಲ್ಲಿ ಇದನ್ನು ಪ್ರಾಯೋಗಿಕವಾಗಿ ಜುಲೈ 26ರಿಂದ ಜಾರಿಗೊಳಿಸಲಾಗಿದೆ.
ಲಸಿಕೆ ಪಡೆಯಬೇಕಾದ ವ್ಯಕ್ತಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ;ಕೋವಿನ್-ಕಾರ್' ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ.
ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿಕವಾಗಿ ಈ ಯೋಜನೆ ಆರಂಬಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೂ ಈ ಯೋಜನೆ ವಿಸ್ತರಣೆಯಾಗಲಿದೆ.

24 ಗಂಟೆ ಮೊದಲೇ ಮಾಹಿತಿ; ಲಸಿಕೆ ಬಗ್ಗೆ ಮಾಹಿತಿ ಪಡೆಯಲು ಜನರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೋವಿನ್ ತಂತ್ರಾಶ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವ cowin.karnataka.gov.in ಹಾಗೂ ಮೈಸೂರು ಜಿಲ್ಲಾಡಳಿತ ವೆಬ್‌ಸೈಟ್ ಮೂಲಕವೂ ಸ್ವಯಂ ಪ್ರೇರಿತವಾಗಿ ಹೆಸರು ದಾಖಲಿಸಿಕೊಳ್ಳಬಹುದು.
ನೋಂದಣಿ ಮಾಡಿಕೊಂಡ ವ್ಯಕ್ತಿಗೆ ಲಸಿಕೆಯ ಲಭ್ಯತೆ ಆಧರಿಸಿ ಲಸಿಕಾ ದಿನ, ಸರ್ಕಾರಿ ಆರೋಗ್ಯ ಕೇಂದ್ರದ ಹೆಸರು ಮತ್ತು ಸಮಯದ ಬಗ್ಗೆ 24 ಗಂಟೆಗಳ ಮೊದಲು ನೋಂದಣಿ ವೇಳೆ ನೀಡಿರುವ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಬರಲಿದೆ.
ಬದಲಾವಣೆಗೆ ಅವಕಾಶವಿದೆ; ಲಸಿಕೆ ಪಡೆಯಬೇಕಾದ ಫಲಾನುಭವಿಗಳು ಆದ್ಯತೆ ಮೇರೆಗೆ ಲಸಿಕೆ ಮತ್ತು ನಿಗದಿತ ದಿನಾಂಕವನ್ನು ಆಯ್ಕೆ ಮಾಡುವ ಸ್ವಾತಂತ್ರ‍್ಯ ಹೊಂದಿರುತ್ತಾರೆ. ತಮ್ಮ ಲಸಿಕೆ ದಿನವನ್ನು ಒಂದು ಬಾರಿ ಬದಲಾವಣೆ ಮಾಡಿಕೊಳ್ಳಲು ಸಹ ಅವಕಾಶವನ್ನು ಈ ತಂತ್ರಾಂಶದ ಮೂಲಕ ನೀಡಲಾಗಿದೆ.
ಜನರು ಮೊದಲ ಡೋಸ್ ಲಸಿಕೆಗೆ ಹಾಗೂ ಮೊದಲನೇ ಡೋಸ್ ಪಡೆದವರು ಎರಡನೇ ಡೋಸ್ ಲಸಿಕೆಗೆ 'ಕೋವಿನ್-ಕಾರ್' ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.












Click it and Unblock the Notifications