ನೋಟಿಸ್ ನೀಡುವ ಬದಲು ಪಕ್ಷದಿಂದಲೇ ತೆಗೆದುಬಿಡಿ ಎಂದ ವಿಶ್ವನಾಥ್

ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್ ವಿಶ್ವನಾಥ್ ಅವರಿಗೆ ಕಾಂಗ್ರೆಸ್ ನಿಂದ ನೋಟಿಸ್ ನೀಡಲಾಗಿದೆ. ಇದರಿಂದ ಕೆಂಡಾಮಂಡಲರಾಗಿರುವ ಅವರು, ಮೈಸೂರಿನಲ್ಲಿ ಸಭೆ ನಡೆಸಿ, ಪಕ್ಷದ ವರಿಷ್ಠರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ

ಮೈಸೂರು, ಫೆಬ್ರವರಿ 25: ಕಾಂಗ್ರೆಸ್ ನಿಂದ ನೋಟಿಸ್ ಕೊಟ್ಟಿರೋದು ನನಗೆ ತೀವ್ರ ಮುಜುಗರ ಮಾಡಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಶನಿವಾರ ಮೈಸೂರಿನಲ್ಲಿ ಹೇಳಿದ್ದಾರೆ. ಇಲ್ಲಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ ಅವರು, ವಾಟ್ಸ್ ಅಪ್ ನಲ್ಲಿ ಶುಕ್ರವಾರ ನನಗೆ ಪಕ್ಷದ ನೋಟಿಸ್ ಬಂದಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಜನರೇ ಮಾಲೀಕರು ಎಂದು ಹೇಳಿರುವುದು ಪಕ್ಷ ವಿರೋಧಿ ಹೇಳಿಕೆ ಆಗುತ್ತದಾ? ಶಾಸಕಾಂಗ ಸಭೆಯಲ್ಲಿ ನಮ್ಮ ವಿರುದ್ಧ ಶಾಸಕರಿಂದ ಮಾತನಾಡಿಸುತ್ತೀರಾ? ನಿಮಗೆ ಕಾಮನ್ ಸೆನ್ಸ್ ಇದೆಯಾ, ತಲೆ ಇದೆಯಾ, ನೋಟಿಸ್ ಕೊಡುವುದಾದರೆ ಕೊಡಿ. ಆದರೆ ಅದನ್ನು ಹೇಳಿಕೊಂಡು ತಿರುಗುತ್ತಾ ಏಕೆ ನಮಗೆ ಅವಮಾನ ಮಾಡ್ತೀರಾ ಎಂದು ಪ್ರಶ್ನಿಸಿದರು.['ಕಾಂಗ್ರೆಸ್ ಗೆ ಕಪ್ಪ' ವಿಚಾರದಲ್ಲಿ ವಿವಾದದ ಕಿಡಿ ಹೊತ್ತಿಸಿದ ವಿಶ್ವನಾಥ್]

Instead of issuing notice, sack me from the congress

ಪಕ್ಷದಿಂದ ತೆಗೆಯಬೇಕಾದರೆ ತೆಗೆದುಬಿಡಿ. ಯಾಕೆ ಹೀಗೆ ಅವಮಾನ ಮಾಡ್ತೀರಾ? ದ್ವೇಷ ಮನೋಭಾವದಿಂದ ಏಕೆ ನೋಟಿಸ್ ಕೊಡ್ತೀರಾ ಎಂದ ಅವರು, ಶಾಸಕಾಂಗ ಸಭೆಯಲ್ಲಿ ರಾಜ್ಯದ ಬರದ ಬಗ್ಗೆ ಚರ್ಚೆ ಆಗಬೇಕಿತ್ತು. ನೀವು ನಮಗೆ ನೋಟಿಸ್ ಕೊಡುವ ಬಗ್ಗೆ ಚರ್ಚೆ ಮಾಡುತ್ತೀರಿ, ನಮಗೆ ಅಧಿಕಾರ ಕೊಡಿ ಅಂತ ಕೇಳುತ್ತಿಲ್ಲ. ಹಿರಿಯರಿಗೆ ಗೌರವ ಕೊಡಿ ಅಂತಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಲೀ ಅಥವಾ ಸಿಎಂ ಆಗಲಿ ಒಂದು ಬಾರಿ ನಮ್ಮ ಹೇಳಿಕೆ ಬಗ್ಗೆ ಮಾತಾಡಿದ್ದಾರಾ? ನನ್ನನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದವರು ಇವತ್ತು ಪಕ್ಷದಲ್ಲಿ ಅಧಿಕಾರದಲ್ಲಿ ಇಲ್ವಾ? ಅದು ಪಕ್ಷ ವಿರೋಧಿ ಅಲ್ಲವೇ? ಪಕ್ಷದ ಕಾರ್ಯಕರ್ತರು ಮಾತಾಡದೇ ಹೋದರೆ ಪಕ್ಷ ಮರೆತು ಬಿಡಬೇಕು. ಹಾಳಾಗಿ ಬಿಡಲಿ ಅನ್ನೋ ಮನೋಭಾವ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.['ಡೊನೇಶನ್ ಗೇಟ್' ಹಗರಣದ ಕೇಂದ್ರ ಬಿಂದು, ಯಾರು ಈ ಗೋವಿಂದರಾಜ್?]

ಪಕ್ಷದ ಬಗ್ಗೆ ಮಾತಾಡುವ ನನ್ನನ್ನು 'ಹುಚ್ಚ ಬಿಡಿ ಮಾತಾಡುತ್ತಾರೆ' ಅಂತಾರೆ. ನಾನು ಪಕ್ಷದಲ್ಲಿ ಉಳಿಯಬೇಕಾ, ಅವಮಾನ ಸಹಿಸಿಕೊಂಡು ಇರಬೇಕಾ? ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ಕಷ್ಟ ಹೇಳೋಕೆ ಹೋದರೆ ಅವರೇ ತಮ್ಮ ಕಷ್ಟನಾ ನನ್ನ ಹತ್ತಿರ ಹೇಳುತ್ತಾ ಕುಳಿತರು. ನನಗಿಂತಾ ಅವರಿಗೇ ಕಷ್ಟ ಜಾಸ್ತಿ ಇದೆ ಎಂದು ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+