ಸುತ್ತೂರು ಸಾಮೂಹಿಕ ವಿವಾಹದಲ್ಲಿ ತಮ್ಮ ಸಿಂಪಲ್ ಮ್ಯಾರೇಜ್ ನೆನಪಿಸಿಕೊಂಡ ಸುಧಾಮೂರ್ತಿ
ಮೈಸೂರು, ಫೆಬ್ರವರಿ 2 : ಸುತ್ತೂರಿನಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಮದುವೆಯ ಕ್ಷಣಗಳನ್ನು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ನೆನಪಿಸಿಕೊಂಡಿದ್ದಾರೆ.
ಇಂದಿನ ಯುವಪೀಳಿಗೆ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಮದುವೆ ಖರ್ಚು ಉಳಿಸಿ ಎಂದು ಸುಧಾಮೂರ್ತಿ ಅವರು ಕರೆ ನೀಡಿದರು. 1978ರಲ್ಲಿ ನಾನು ಮತ್ತು ನಾರಾಯಣಮೂರ್ತಿ ಅವರು ಸರಳ ವಿವಾಹವಾಗಿದ್ದವು. ಅಂದು ನಮ್ಮ ವಿವಾಹ ಕೇವಲ 800 ರೂ.ನಲ್ಲಿ ನೆರವೇರಿತು. ನಾನು ಕರಿಮಣಿ ಹಾಕಿಕೊಂಡೇ ಮದುವೆಯಾದೆ. ನಮ್ಮ ಮದುವೆ ಅರ್ಧಗಂಟೆಯಲ್ಲಿ ನೆರವೇರಿತು ಎಂದು ಡಾ. ಸುಧಾಮೂರ್ತಿ ಅವರ ತಮ್ಮ ವಿವಾಹ ಸಂದರ್ಭವನ್ನ ಸ್ಮರಿಸಿಕೊಂಡರು.

ಇದೇ ವೇಳೆ ಸುಧಾಮೂರ್ತಿ ಅವರು ನವ ಜೋಡಿಗಳಿಗೆ ಮಾಂಗಲ್ಯ ವಿತರಿಸಿದರು. ನವ ವಧು- ವರರಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಜ್ಞಾ ವಿಧಿ ಪೂಜಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರು ಪ್ರಮಾಣ ಪತ್ರ ವಿತರಿಸಿದರು. ನವದಂಪತಿಗಳಿಗೆ ಸುಧಾ ಮೂರ್ತಿ ಅವರು ಇದೇ ವೇಳೆ ವಿಶೇಷ ಉಡುಗೊರೆಯೊಂದನ್ನು ನೀಡಿದರು.












Click it and Unblock the Notifications