ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ತಿ.ನರಸೀಪುರದ ಮಹಾಕುಂಭ ಮೇಳದ ಸಿದ್ಧತೆ

|
Google Oneindia Kannada News

ಮೈಸೂರು, ಫೆಬ್ರವರಿ 11 : ಮೈಸೂರಿನ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ 11ನೇ ಕುಂಭಮೇಳಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಫೆ.17, 18 ಮತ್ತು 19ರಂದು ಕುಂಭಮೇಳ ನಡೆಯಲಿದೆ.

ಶ್ರೀ ಕ್ಷೇತ್ರ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯಲಿದೆ. ಸಂಗಮದ ಮಧ್ಯ ಭಾಗದಲ್ಲಿ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ನದಿಯ ಮಧ್ಯ ಭಾಗಕ್ಕೆ ತೆರಳಲು ಚೀಲಗಳಿಗೆ ಮರಳು ತುಂಬಿ ಮೂಟೆಯಗಳನ್ನು ಜೋಡಿಸಿ ರಸ್ತೆ ವ್ಯವಸ್ಥೆ ಮಾಡಲಾಗುತ್ತಿದೆ.

ತಿ.ನರಸೀಪುರ ಕುಂಭಮೇಳಕ್ಕೆ ಸಕಲ ಸಿದ್ಧತೆತಿ.ನರಸೀಪುರ ಕುಂಭಮೇಳಕ್ಕೆ ಸಕಲ ಸಿದ್ಧತೆ

ನದಿ ಬಳಿ ಮತ್ತು ಎರಡೂ ದೇವಸ್ಥಾನಗಳ ಬಳಿ ಬಟ್ಟೆ ಬದಲಿಸುವ ತಾತ್ಕಾಲಿಕ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಭಕ್ತರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಅಗಸ್ತ್ಯೆಶ್ವರ ದೇವಾಲಯಕ್ಕೆ 10 ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಕುಂಭ ಮೇಳಕ್ಕೆ6 ದಿನ ಮಾತ್ರ ಬಾಕಿ, ತ್ರಿವೇಣಿ ಸಂಗಮದಲ್ಲಿ ಭರ್ಜರಿ ಸಿದ್ಧತೆಕುಂಭ ಮೇಳಕ್ಕೆ6 ದಿನ ಮಾತ್ರ ಬಾಕಿ, ತ್ರಿವೇಣಿ ಸಂಗಮದಲ್ಲಿ ಭರ್ಜರಿ ಸಿದ್ಧತೆ

ತಿ.ನರಸೀಪುರದಲ್ಲಿ ನಡೆಯುವ 11ನೇ ಕುಂಭಮೇಳದಲ್ಲಿ ನಡೆಯುತ್ತಿದ್ದು, 10 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಲಕ್ಷಾಂತರ ಭಕ್ತರಿಗೆ ಬಡಿಸಲು ಸಿದ್ಧವಾದ ಆಹಾರವನ್ನು ಪರೀಕ್ಷಿಸಿದ ನಂತರ ವಿತರಣೆ ಮಾಡಿ ಎಂದು ಸೂಚನೆ ನೀಡಲಾಗಿದೆ.

ಘನತೆ ಹೆಚ್ಚಿಸುವಂತೆ ಕುಂಭಮೇಳ ಆಯೋಜನೆ: ಕುಮಾರಸ್ವಾಮಿಘನತೆ ಹೆಚ್ಚಿಸುವಂತೆ ಕುಂಭಮೇಳ ಆಯೋಜನೆ: ಕುಮಾರಸ್ವಾಮಿ

3 ವರ್ಷಕ್ಕೊಮ್ಮೆ ಕುಂಭಮೇಳ

3 ವರ್ಷಕ್ಕೊಮ್ಮೆ ಕುಂಭಮೇಳ

ಕಾವೇರಿ, ಕಪಿಲಾ ಹಾಗೂ ಗುಪ್ತ ಗಾಮಿನಿ ಸ್ಫಟಿಕ ಸರೋವರ ಕೂಡುವ ಸ್ಥಳದಲ್ಲಿ 1989ರಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಕುಂಭಮೇಳ ಆಯೋಜನೆ ಮಾಡಲಾಗುತ್ತದೆ. 11ನೇ ಕುಂಭಮೇಳ ಫೆ.17, 18 ಮತ್ತು 19ರಂದು ನಡೆಯಲಿದೆ. ಸುಮಾರು 10 ಲಕ್ಷ ಭಕ್ತರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮರಳು ಚೀಲಗಳ ಬಳಕೆ

ಮರಳು ಚೀಲಗಳ ಬಳಕೆ

ವ್ಯಾಸರಾಜ ಮಠದಿಂದ ಧಾರ್ಮಿಕ ಸಭಾಂಗಣಕ್ಕೆ ತೆರಳಲು ನದಿಗೆ ಮರಳು ಚೀಲ ಹಾಕಿ, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಹಳೇ ತಿರಕೂಡಲಿನ ವ್ಯಾಸರಾಜ ಮಠದ ಮುಂದೆ 12 ಅಡಿ ಅಗಲ, 120 ಮೀಟರ್ ಉದ್ದದ ವರೆಗೆ ಸಾವಿರಾರು ಮರಳು ಚೀಲ ಹಾಕಿ, ಸಭಾ ಮಂಟಪಕ್ಕೆ ಸಾರ್ವಜನಿಕರು ಓಡಾಡಲು ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ.

ಭಕ್ತರಿಗೆ ಅಗತ್ಯ ವ್ಯವಸ್ಥೆ

ಭಕ್ತರಿಗೆ ಅಗತ್ಯ ವ್ಯವಸ್ಥೆ

ಕುಂಭಮೇಳದಲ್ಲಿ 10 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕುಡಿಯುವ ನೀರಿಗಾಗಿ 15 ಕಡೆ ನಲ್ಲಿಗಳಿರುವ ಫ್ಲಾಟ್‌ ಫಾರಂ ನಿರ್ಮಾಣ ಮಾಡಲಾಗಿದೆ. ಗುಂಜನರಹಿಂಹಸ್ವಾಮಿ ದೇಗುಲ ಹಾಗೂ ಅಗಸ್ತ್ಯೆಶ್ವರ ದೇವಾಲಯದ ಬಳಿ 150 ತಾತ್ಕಾಲಿಕ ಶೌಚಾಲಯ ಸ್ಥಾಪನೆ ಮಾಡಲಾಗಿದೆ.

ಮರಳು ಚೀಲ ಹಾಕಿ ಸಮತಟ್ಟು

ಮರಳು ಚೀಲ ಹಾಕಿ ಸಮತಟ್ಟು

ಸಭಾ ಮಂಟಪದಿಂದ ನಡುವಳೆ ಬಸಪ್ಪ ಬಳಿ ಯಾಗ ಸ್ಥಳ ಗುರುತಿಸಲಾಗಿದೆ. ನಡುವಳೆ ಬಸಪ್ಪನಿಗೆ ಭಕ್ತರು ಪೂಜೆ ಸಲ್ಲಿಸಲು ಅನುಕೂಲವಾಗುವಂತೆ ಸುತ್ತ ಮರಳು ಚೀಲಗಳನ್ನು ಹಾಕಿ ಸಮತಟ್ಟು ಮಾಡಿ, ನದಿ ಒಳಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.

English summary
In pics : Preparation for T.Narasipura Kumbh mela 2019 in full swing. Maha Kumbh Mela will be held from February 17 to 19, 2019. At least 10 lakh devotees are expected to take part.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X