ಮೈಸೂರು: ಪ್ರತಾಪ್ ಸಿಂಹ ಜತೆ ಸೋಮನಹಳ್ಳಿ ಕೃಷ್ಣ
ಮೈಸೂರು, ಏ.14: ಇಲ್ಲಿನ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ತಮ್ಮ ಚುನಾವಣಾ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಎಸ್ .ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಕೃಷ್ಣ ಅವರ ಜತೆಗಿನ ಭೇಟಿ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಕೂಡಾ ಮಾಡಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ನಂತರ ಪ್ರತಾಪ್ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ, ಸಚಿವ ಅಂಬರೀಷ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಕಾದು ಕುಳಿತಿರುವಾಗ ಎಸ್ಸೆಂ ಕೃಷ್ಣ ಅವರು ಮೈಸೂರಿನಲ್ಲಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ತಕ್ಷಣಕ್ಕೆ ಓದುಗರ ಮನಸ್ಸಿನಲ್ಲಿ ಸುಳಿಯುವುದು ಸಹಜ. ಆದರೆ, ಸಂಜೆ ವೇಳೆಗೆ ಕೃಷ್ಣ ಅವರು ಮಂಡ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಂದನ್ ನಿಲೇಕಣಿ ಪರ ಪ್ರಚಾರ ಮಾಡುವಾಗ ಮಾತನಾಡಿದ ಕೃಷ್ಣ ಅವರು ಮಂಡ್ಯದಲ್ಲಿ ರಮ್ಯಾ ಈಗಾಗಲೇ ಗೆದ್ದಾಗಿದೆ ಎಂದು ಘೋಷಿಸಿದ್ದರು. ಜತೆಗೆ ಏ.14 ರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿದ್ದರು. ಆದರೆ, ಸೋಮವಾರ ಬೆಳಗ್ಗೆ ಹೇಳಿಕೆ ಬದಲಾಯಿಸಿ ಪೂರ್ವ ನಿಗದಿಯಂತೆ ಮೈಸೂರಿಗೆ ತೆರಳುತ್ತಿರುವುದರಿಂದ ಮಂಡ್ಯ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಕಷ್ಟವಾಗಲಿದೆ ಎಂದಿದ್ದರು.
ಹೀಗೆ ಅರಮನೆ ನಗರದಲ್ಲಿ ಪ್ರತಾಪ್ ಸಿಂಹ ಎದುರಾಳಿ ಎ.ಎಚ್. ವಿಶ್ವನಾಥ್ ಅವರ ಪರ ಮತಯಾಚಿಸಲು ಬಂದಿದ್ದ ಎಸ್.ಎಂ ಕೃಷ್ಣ ಅವರಿಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಎದುರಾಗಿದ್ದಾರೆ. ಇಬ್ಬರು ಪರಸ್ಪರ ವಿಶ್ ಮಾಡುತ್ತಾ ಆತ್ಮೀಯವಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಕೃಷ್ಣ ಅವರ ಜತೆಗಿನ ಭೇಟಿ ಚಿತ್ರ
ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಜತೆಗಿನ ಭೇಟಿ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಕೂಡಾ ಮಾಡಿದ್ದಾರೆ.

ರಮ್ಯಾ ಈಗಾಗಲೇ ಗೆದ್ದಾಗಿದೆ ಎಂದು ಘೋಷಿಸಿದ್ದರು
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಂದನ್ ನಿಲೇಕಣಿ ಪರ ಪ್ರಚಾರ ಮಾಡುವಾಗ ಮಾತನಾಡಿದ ಕೃಷ್ಣ ಅವರು ಮಂಡ್ಯದಲ್ಲಿ ರಮ್ಯಾ ಈಗಾಗಲೇ ಗೆದ್ದಾಗಿದೆ ಎಂದು ಘೋಷಿಸಿದ್ದರು.

ಮಂಡ್ಯದಲ್ಲಿರಬೇಕಾದ ಕೃಷ್ಣ ಮೈಸೂರಲ್ಲಿ
ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ, ಸಚಿವ ಅಂಬರೀಷ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಕಾದು ಕುಳಿತಿರುವಾಗ ಎಸ್ಸೆಂ ಕೃಷ್ಣ ಅವರು ಮೈಸೂರಿನಲ್ಲಿ ಏನು ಮಾಡುತ್ತಿದ್ದಾರೆ

ಹೀಗೊಂದು ಫೇಸ್ ಬುಕ್ ಪೋಸ್ಟ್
ಪ್ರತಾಪ್ ಅವರು ಸ್ಪರ್ಧೆಗಿಳಿದ ಬಳಿಕ ಹಿರಿಯ ನಾಯಕ ಪ್ರತಿಸ್ಪರ್ಧಿ ಎಚ್. ವಿಶ್ವನಾಥ್ ಅವರ ಕಾಲಿಗೆರದಿದ್ದರು. ತಕ್ಷಣವೇ ಪ್ರತಾಪ್ ಪರ ಒಂದು ಪೋಸ್ಟ್ ಫೇಸ್ ಬುಕ್ ತುಂಬಾ ಹರಿದಾಡಿತ್ತು. ಈ ಹಿಂದೆ ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ನಳೀನ್ ಕುಮಾರ್ ಕಟೀಲ್ ನಮಸ್ಕರಿಸಿದ್ದರು. ಆಗ ಪೂಜಾರಿ ಸೋಲು ಕಂಡಿದ್ದರು. ಈಗ ವಿಶ್ವನಾಥ್ ಕಾಲಿಗೆ ಪ್ರತಾಪ್ ನಮಸ್ಕರಿಸಿದ್ದಾರೆ ಎಂದರೆ... ಫಲಿತಾಂಶ ನೀವೇ ಅರ್ಥ ಮಾಡಿಕೊಳ್ಳಿ..

ಪ್ರತಾಪ್ ರಿಂದ ಅಂಬೇಡ್ಕರ್ ಜಯಂತಿ ಆಚರಣೆ
ಮೈಸೂರಿನ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಮಾಜಿ ಸಚಿವ ರಾಮದಾಸ್, ಸ್ನೇಕ್ ಶ್ಯಾಮ್ ಮುಂತಾದವರು ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.












Click it and Unblock the Notifications