ಮೈಸೂರು: ಸಂಗೀತ ವಿಶ್ವವಿದ್ಯಾಲಯಕ್ಕೆ ಇದೆಂಥ ದುಸ್ಥಿತಿ!?

ಮೈಸೂರು, ಜೂನ್.20: ನಗರದಲ್ಲಿ ಗಂಗೂಬಾಯಿ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯ ಸ್ಥಾಪಿಸಿದಾಗ ಅದಕ್ಕೆ ಹಲವಾರು ವಿಶೇಷಣಗಳನ್ನು ಸೇರಿಸಲಾಗಿತ್ತು. ದೇಶದ ಮೊತ್ತ ಮೊದಲ ಸಂಗೀತ ವಿಶ್ವವಿದ್ಯಾನಿಲಯ ಎಂಬ ಹಿರಿಮೆ ಇತ್ತು.

ಆದರೆ ವಿಚಿತ್ರವೆಂದರೆ ಈ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ವರ್ಷ 8 ಕಳೆದರೂ ಇನ್ನೂ ಒಂದೇ ಒಂದು ಡಾಕ್ಟರೇಟ್ ಕೊಡಲಾಗಿಲ್ಲ. ಕಾರಣವೆಂದರೆ ಅಲ್ಲಿ ಡಾಕ್ಟರೇಟ್ ಮಾಡಲು ವಿದ್ಯಾರ್ಥಿಗಳಿದ್ದಾರೆ. ಆದರೆ ಮಾರ್ಗದರ್ಶಕರೇ ಇಲ್ಲ.

23 ವಿದ್ಯಾರ್ಥಿಗಳು ಪಿಎಚ್ ಡಿ ಪ್ರವೇಶ ಪರೀಕ್ಷೆ ಬರೆದು, ಕೋರ್ಸ್ ವರ್ಕ್ ಮಾಡಿದರೂ ಇನ್ನೂ ಅವರ ನೋಂದಣಿ ನಡೆದಿಲ್ಲ. ಹೀಗೆ ಏಳು ಸುದೀರ್ಘ ವರ್ಷದಿಂದ ಕಾಯುತ್ತಿರುವವರ ಪೈಕಿ ಸಂಗೀತ ದಂತ ಕತೆ ಗಂಗೂಬಾಯಿ ಹಾನಗಲ್ ಮೊಮ್ಮಗಳಾದ ವೈಷ್ಣವಿ ಹಾನಗಲ್ ಕೂಡ ಸೇರಿದ್ದಾರೆ.

In music university there is no system

ಈ 23 ವಿದ್ಯಾರ್ಥಿಗಳ ವ್ಯಥೆ-ಕಥೆ ಯಾರಿಗೂ ಬೇಕಿಲ್ಲ. 2011ರಲ್ಲಿ ವಿಶ್ವವಿದ್ಯಾನಿಲಯ ಪಿಎಚ್ ಡಿ ಕೋರ್ಸ್ ಗೆ ಅರ್ಜಿ ಕರೆದಾಗ ಇವರೆಲ್ಲ ಅರ್ಜಿ ಸಲ್ಲಿಸಿದ್ದರು. ವಿವಿಯವರು ಪ್ರವೇಶ ಪರೀಕ್ಷೆ ನಡೆಸಿದರು ಜತೆಗೆ ಕೋರ್ಸ್ ವರ್ಕ್ ಕೂಡ ಸಂಘಟಿಸಿದ್ದರು.

ಆದರೆ ಶುಲ್ಕ ಕಟ್ಟಿಸಿಕೊಂಡ ಬಳಿಕ ಮಾರ್ಗದರ್ಶಕರಿಲ್ಲ ಎಂಬ ಕಾರಣದಿಂದ ಇವರ ಪಿಎಚ್ ಡಿ ಅಧ್ಯಯನ ಇನ್ನೂ ಆರಂಭವಾಗಿಲ್ಲ. ಸ್ವಂತ ಕಟ್ಟಡವಿಲ್ಲ, ಒಬ್ಬನೇ ಒಬ್ಬ ಖಾಯಂ ಉಪನ್ಯಾಸಕನಿಲ್ಲ ಹೀಗೆ ಸಾಗುತ್ತದೆ ವಿವಿಯ ದುರವಸ್ಥೆಗಳ ಚಿತ್ರಣ.

ವಿವಿಯ ಹಂಗಾಮಿ ಉಪಕುಲಪತಿ ರಾಜೇಶ್ ಪ್ರಕಾರ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಮಾರ್ಗದರ್ಶಕರಿಲ್ಲದಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ.

ಇಂತಹ ಅವ್ಯವಸ್ಥಿತ ವಿವಿಯನ್ನು ಹುಟ್ಟು ಹಾಕಿ, ಅದಕ್ಕೆ ಗಂಗಜ್ಜಿಯ ಹೆಸರಿಟ್ಟು ಸರ್ಕಾರ ಸಲ್ಲಿಸುತ್ತಿರುವುದು ಗೌರವವೋ -ಅಗೌರವವೋ ಎಂಬುದು ಸಂಗೀತ ಪ್ರಿಯರಿಗೆ ಇನ್ನೂ ತಿಳಿಯದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+