ಕಾರಾಪುರದಲ್ಲಿ ಗಿಳಿಗಳ ಅಕ್ರಮ ಮಾರಾಟಕ್ಕೆ ಯತ್ನಿಸಿದ ಆರೋಪಿಯ ಬಂಧನ
ಮೈಸೂರು, ಏಪ್ರಿಲ್ 01: ಹೋಟೆಲ್‌ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 9 ಜೊತೆ ಗಿಳಿಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಬಂಧಿಸಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕಾರಾಪುರ ಗ್ರಾಮದಲ್ಲಿ ನಡೆದಿದೆ.
ಕಾರಾಪುರ ಗ್ರಾಮದ ನಿವಾಸಿ ಅಬ್ದುಲ್ ರಶೀದ್ ಎಂಬುವವರ ಪುತ್ರ ನೂರ್‌ಉಲ್ಲಾ (45) ಬಂಧಿತ ಆರೋಪಿಯಾಗಿದ್ದಾನೆ. ಈತ ಡಿಸ್ಕವರಿ ಹೋಟೆಲ್‌ನಲ್ಲಿ ರೋಸರಿಂಗ್ ಪ್ಯಾರಾಕಿಟ್ ಎಂಬ ಜಾತಿಯ 9 ಗಿಳಿಗಳನ್ನು ಮಾರಾಟ ಮಾಡುವ ಸಲುವಾಗಿ ಬಚ್ಚಿಟ್ಟಿದ್ದನಲ್ಲದೆ, ಮಾರಾಟ ಮಾಡಲು ವ್ಯವಹಾರ ಕುದುರಿಸುತ್ತಿದ್ದನು ಎನ್ನಲಾಗಿದೆ.
ಈ ಕುರಿತಂತೆ ಅರಣ್ಯ ಸಂಚಾರಿ ದಳದ ಪ್ರಭಾರ ಪಿಎಸ್ಐ ಎಂ.ಬಿ.ರಮೇಶ್ ಅವರಿಗೆ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದು ಆರೋಪಿ ನೂರ್ ಉಲ್ಲಾನನ್ನು ಬಂಧಿಸಿ ಆತನ ಬಳಿಯಿದ್ದ ಗಿಳಿಗಳನ್ನು ವಶಕ್ಕೆ ಪಡೆಯಲಾಗಿದೆ.

ಅಲ್ಲದೇ ಆರೋಪಿ ವಿರುದ್ಧ ವನ್ಯ ಜೀವಿ ಕಾಯಿದೆ 1972 ರ ಅಡಿ ಪ್ರಕರಣ ದಾಖಲಿಸಿಕೊಂಡು ಎಚ್.ಡಿ.ಕೋಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣವನ್ನು ಅಂತರಸಂತೆ ವನ್ಯ ಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ವರ್ಗಾಯಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾರ್ಯಾಚರಣೆಯಲ್ಲಿ ವೆಂಕಟಾಚಾಲಯ್ಯ, ನರಸಿಂಹಮೂರ್ತಿ, ಟಿ.ಆರ್. ರಘು, ಚೆಲುವರಾಜು, ಮಂಜುನಾಥ್, ಪ್ರದೀಪ್ ಭಾಗವಹಿಸಿದ್ದರು.












Click it and Unblock the Notifications