ಮೈಸೂರಿನಲ್ಲಿ ಹಿರಿಯರ ಅಂತಾರಾಷ್ಟ್ರೀಯ ಸಮಾವೇಶ
ಮೈಸೂರು, ಜ. 22: ಸಾಂಸ್ಕೃತಿಕ ನಗರ ಎಂದೇ ಖ್ಯಾತಿಗೊಂಡಿರುವ ಹಾಗೂ ಐತಿಹಾಸಿಕ ಮಹತ್ವ ಪಡೆದಿರುವ ಮೈಸೂರಿನಲ್ಲಿ ಹಿರಿಯರ 5ನೇ ಅಂತಾರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗಿದೆ. ಜ. 31ರಿಂದ ಫೆಬ್ರವರಿ 5ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಇದೊಂದು ಜಾಗತಿಕ ಮಟ್ಟದ ಸಮಾವೇಶವಾಗಿದ್ದು, 100ಕ್ಕೂ ಹೆಚ್ಚಿನ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಾವೇಶದಲ್ಲಿ ಪ್ರದರ್ಶಿಸಲಾಗುವುದು. ಜ. 31ರಂದು ಕಾರ್ಯಕ್ರಮ ಉದ್ಘಾಟಿಸಲಾಗುವುದು. ಫೆಬ್ರವರಿ 1ರಂದು ಜಾಗತಿಕಮಟ್ಟದ ವಿವಿಧ ರಾಜಕೀಯ ಚಟುವಟಕೆಗಳು, ಫೆ. 2ರಂದು ತಾಂತ್ರಿಕತೆ ಹಾಗೂ ಫೆ. 3ರಂದು ನಾಯಕತ್ವ ಕುರಿತು ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಈ ಕಾರ್ಯಕ್ರಮದ ಮೊದಲ ಸಮಾವೇಶ ಮುಂಬೈನಲ್ಲಿ 2003ರಲ್ಲಿ ಜರುಗಿತ್ತು. 2ನೇ ಸಮಾವೇಶ 2006ರಲ್ಲಿ ಜೈಪುರದಲ್ಲಿ, 3ನೇ ಸಮಾವೇಶ 2009ರಲ್ಲಿ ನಾಗಪುರದಲ್ಲಿ ಹಾಗೂ 4ನೇ ಸಮಾವೇಶ 2012ರಲ್ಲಿ ಹರಿದ್ವಾರದಲ್ಲಿ ಜರುಗಿತ್ತು.












Click it and Unblock the Notifications