ಸಿ.ಟಿ ರವಿ ಅಕ್ರಮ ಆಸ್ತಿಗಳ ಬಗ್ಗೆ ಸಿಡಿ ಸಮೇತ ದಾಖಲೆ ಬಿಡುಗಡೆ ಮಾಡುತ್ತೇನೆ: ಎಂ ಲಕ್ಷ್ಮಣ್

ಮೈಸೂರು, ಅಕ್ಟೋಬರ್‌ 27: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಕಿಡಿಕಾರಿದ್ದು, ಸಿ.ಟಿ ರವಿ ಅವರನ್ನು ಬಹಿರಂಗವಾಗಿ ಹುಚ್ಚು ನಾಯಿ ಎಂದು ಕರೆದಿದ್ದಾರೆ.

ಸಿ.ಟಿ.ರವಿ ಅವರನ್ನು ಲೂಟಿ ರವಿ ಎನ್ನಬಾರದು, ಇನ್ನು ಮುಂದೆ ಸಿ.ಟಿ.ರವಿ ಅವರನ್ನು ಹುಚ್ಚು ನಾಯಿ‌ ರವಿ ಎಂದು ಕರೆಯಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಜಿಲ್ಲೆಯ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಸಿ.ಟಿ.ರವಿ ಹಗುರವಾಗಿ ಮಾತನಾಡಿದ್ದಾರೆ. ಹಾಗಾದರೇ ಸಿ.ಟಿ.ರವಿ ಅವರೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವವರನ್ನು ಚುನಾವಣಾ ಮೂಲಕ ಆಯ್ಕೆ ಮಾಡಿದ್ದಾರಾ..? ಎಂದು ಪ್ರಶ್ನಿಸಿದ್ದಾರೆ.

Mysore: I will release the document with CD about CT Ravi illegal assets: M Laxman

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಚುನಾವಣಾ ಮೂಲಕ‌ ಆಯ್ಕೆಯಾದರಾ..? ಹಿಂದೆ ಇದ್ದ ಅಧ್ಯಕ್ಷರು ಚುನಾವಣಾ ಮೂಲಕ ಆಯ್ಕೆಯಾದಾರಾ..? ಆದರೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರನ್ನು ಚುನಾವಣಾ ಮೂಲಕ ಆಯ್ಕೆ ಮಾಡುತ್ತದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಮುನ್ನ ಸಿ.ಟಿ.ರವಿ ಯೋಚಿಸಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಗುಡುಗಿದರು.

ಸಿ.ಟಿ.ರವಿ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಅಕ್ರಮವಾಗಿ ಆಸ್ತಿ ಮಾಡಿದ್ದಾರೆ. ಅದರ ಬಗ್ಗೆ ಮುಂದಿನ‌ ದಿನಗಳಲ್ಲಿ ಸಿ.ಡಿ ಸಮೇತ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ಮುಖಂಡ ಸಿ.ಟಿ ರವಿಗೆ ಎಚ್ಚರಿಕೆ ನೀಡಿದ್ದಾರೆ.

Mysore: I will release the document with CD about CT Ravi illegal assets: M Laxman

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ ಮಾಡಿರುವ ಬಗ್ಗೆ ಮಾತನಾಡಿದ್ದ ಸಿ.ಟಿ.ರವಿ, ನಮ್ಮ ರಾಜ್ಯದ ಒಬ್ಬರು ಐವತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಾನು ಅವರಿಗೆ, ಅವರ ಹಿರಿಯ ಅನುಭವವನ್ನು ಗಮನದಲ್ಲಿಟ್ಟುಕೊಂಡು ಕಿರಿಯನಾಗಿ ಒಂದು ಮಾತು ಹೇಳಲು‌ ಬಯಸುತ್ತೇನೆ. ಯಾವ ಕಾರಣಕ್ಕೂ ಸೋನಿಯಾ, ರಾಹುಲ್ ರಿಮೋಟ್ ಪರದಿ ಒಳಗೆ ಇರಿ, ಹಾಗಿದ್ದರೆ ಮಾತ್ರ ನಿಮ್ಮನ್ನು ಉಳಿಸುತ್ತಾರೆ. ನೀವು ಸ್ವಂತಿಕೆ ತೋರಿಸುವ ಪ್ರಯತ್ನ ಮಾಡಿದರೆ, ಆ ಗಳಿಗೆ ಅಪಮಾನ ಮಾಡಿ ಕಿತ್ತುಹಾಕುತ್ತಾರೆ. ನಿಮ್ಮ ಸ್ವತಂತ್ರ ಅಸ್ತಿತ್ವವನ್ನು ಯಾವುದೇ ಕಾರಣಕ್ಕೂ ತೋರಿಸಲು ಹೋಗಬೇಡಿ. ಮಲ್ಲಿಕಾರ್ಜುನ ಖರ್ಗೆ ಸೋತು ನೆಲಕಚ್ಚಿ, ಸೋಲಿನ ಮೇಲೆ ಸೋಲಿನ ಅನುಭವಿಸುತ್ತಿರುವ ಕಾಂಗ್ರೆಸ್‌ಗೆ ಮುಳುಗುವ ಹಡಗಿಗೆ ಕ್ಯಾಪ್ಟನ್ ಆಗಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+