• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಚುನಾವಣೆಯಲ್ಲಿ ಸೋತಿರಬಹುದು, ಇನ್ನೂ ಸತ್ತಿಲ್ಲ: ಎಚ್‌ ವಿಶ್ವನಾಥ್

|

ಹುಣಸೂರು, ಡಿಸೆಂಬರ್ 18: ನಾನು ಚುನಾವಣೆಯಲ್ಲಿ ಸೋತಿರುವುದು ಆದರೆ ಇನ್ನೂ ಸತ್ತಿಲ್ಲ ಎಂದು ಹುಣಸೂರು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್ ತಿಳಿಸಿದ್ದಾರೆ.

ಬಿಜೆಪಿಗೆ ಸೇರ್ಪಡೆಯಾಗಲು ಬಿಜೆಪಿಗರಿಂದ ಹಣ ಪಡೆದಿದ್ದೇನೆ ಎಂದು ಸಾಕಷ್ಟು ಮಂದಿ ಅಪಪ್ರಚಾರ ಮಾಡಿದ್ದಾರೆ.ಟಿಪ್ಪು ಜಯಂತಿ ವಿಚಾರದಲ್ಲಿ ಈ ಹಿಂದೆ ಕ್ಷೇತ್ರದಲ್ಲಿ ಅನಾವಶ್ಯಕವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಅವರ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯಲು ಸರ್ಕಾರ ಮುಂದಾಗಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಅಘಾತ ನೀಡಿದ ಯಡಿಯೂರಪ್ಪ

ಸತ್ಯವಂತರಂತೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹಣ ತಿಂದವನಲ್ಲ. ತಿನ್ನಿಸಿದವನು. ಯಾರ ಅನ್ನಕ್ಕೂ ಕೈ ಹಾಕಿಲ್ಲ ಎಂದು ಗುಡುಗಿದರು.

ನಾನು 85 ಲಕ್ಷ ಮಕ್ಕಳಿಗೆ ಅನ್ನ ನೀಡಿದ್ದೇನೆ, ಯಶಸ್ವಿನಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ನೀಡಿದ್ದೇನೆ. ಹುಣಸೂರನ್ನು ನಾನು ಬೇರೆ ರೀತಿ ಅಭಿವೃದ್ಧಿ ಮಾಡಬೇಕು ಎನ್ನುವ ಆಸೆ ಇದೆ . ಸೋತಿದ್ದೇನೆ ಹೌದು ಅಭಿವೃದ್ಧಿ ಕಾರ್ಯ ಮಾತ್ರ ಬಿಡುವುದಿಲ್ಲ ಎಂದು ಹೇಳಿದರು.

English summary
H Vishwanath Said that I May Have Lost The Election Not Dead Yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X