ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಮಂತ್ರಿಯಾಗುವುದು ಖಚಿತ : ಜಿ ಟಿ. ದೇವೇಗೌಡ ಸಂದರ್ಶನ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜೂನ್ 1 : ಮೈಸೂರಿನ ಹೈ ವೋಲ್ಟೇಜ್ ಕ್ಷೇತ್ರವೆಂದೇ ಹೆಸರಾಗಿದ್ದ ಚಾಮುಂಡೇಶ್ವರಿಯಲ್ಲಿ 36,000 ಮತಗಳ ಅಂತರದಿಂದ ಗೆದ್ದ ಜಿ.ಟಿ. ದೇವೇಗೌಡರು ಫುಲ್ ಖುಷ್ ಆಗಿದ್ದಾರೆ. ಆದರೆ ಇತ್ತ ಜಿಟಿಡಿಯವರನ್ನು ನಂಬಿ ಮತ ಹಾಕಿದ ಮತದಾರರು ಅವರಿಗೆ ಹಿಡಿಶಾಪ ಹಾಕಿದ್ದಾರೆ.
ನಾವು ಯಾರನ್ನು ತಿರಸ್ಕರಿಸಿದ್ದೆವು ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಜಿ.ಟಿ. ದೇವೇಗೌಡರು ಉತ್ತರ ನೀಡಿದ್ದು, ಒನ್ ಇಂಡಿಯಾ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ನಿಮಗೆ ಗೆಲ್ಲುವ ವಿಶ್ವಾಸವಿತ್ತಾ?
ಖಂಡಿತ ಇತ್ತು. ಆದರೆ ಇಷ್ಟೊಂದು ಅಂತರದಿಂದ ಗೆಲ್ಲುತ್ತೇವೆಂದು ಯೋಚಿಸಿರಲಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ನಾನೂ ಶ್ರಮಿಸಿದ್ದೇನೆ. ನನ್ನಿಂದ ಅವರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕಾಗಿ ಅವರು ಗೆಲ್ಲಿಸಿದ್ದಾರೆ. ಅದಕ್ಕೆ ನಾನು ಋಣಿ.

Im sure I will be a minister: GT. Deve Gowda Interview

ಇದು ಎಷ್ಟು ಸರಿ?
ನಾನು ಈ ಹಿಂದೆ ಸಿದ್ದರಾಮಯ್ಯ ಅವರನ್ನು ಬೈದಿದ್ದು ನಿಜ. ಅದು ಚುನಾವಣಾ ಪೂರ್ವದ್ದು. ಈಗ ನಾನು ಅವರ ವಿರುದ್ಧವೇ ಗೆಲುವು ಸಾಧಿಸಿದ್ದೇನೆ. ನಮ್ಮ ಗೆಲುವು ಕೇವಲ ವ್ಯಕ್ತಿಯದ್ದಲ್ಲ. ಕುಮಾರಸ್ವಾಮಿಯವರನ್ನು ಸಿಎಂ ಮಾಡಬೇಕೆಂಬುದು ನಮ್ಮ ಆಸೆ. ಅವರ ಆಡಳಿತ ಜನಪರವಾದದ್ದು. ಹಾಗಾಗಿ ಮೈತ್ರಿ ಸರ್ಕಾರಕ್ಕೆ ನಾವೆಲ್ಲರೂ ಅಸ್ತು ಎಂದೆವು.

ಈ ನಿರ್ಧಾರ ಏಕೆ ?
ಕಾರ್ಯಕರ್ತರಲ್ಲಿ ಕೆಲವರಲ್ಲಿ ಮಾತ್ರ ಅಸಮಾಧಾನವಿದೆ ಅಷ್ಟೇ. ನಾವು ಅಧಿಕಾರಕ್ಕೆ ಬಂದಾಯ್ತು. ಜನಪರ ಯೋಜನೆಗಳನ್ನು ಜಾರಿಗೆ ತಂದೇ ತರುತ್ತೇವೆ. ಈಗ ಎಲ್ಲಾ ಸರಿ ಹೋಗುತ್ತದೆ ಎಂಬ ವಿಶ್ವಾಸ ಖಂಡಿತ ಇದೆ. ಇದೆಲ್ಲಾ ಅಲ್ಪಕಾಲಿಕ ಅಷ್ಟೇ.

ಯಾವ ಖಾತೆ ಸಿಗಬಹುದೆಂಬ ನಿರೀಕ್ಷೆಯಿದೆ ?
ಕುಮಾರಸ್ವಾಮಿಯವರು ಹೇಳಿದಂತೆ ನಡೆದುಕೊಳ್ಳುತ್ತಾರೆ. ಅವರು ಯಾವ ಖಾತೆ ಕೊಟ್ಟರು ನನಗೆ ಬೇಸರವಿಲ್ಲ. ಆದರೆ ನನಗೊಂದು ವಿಶೇಷ ಖಾತೆ ನೀಡಿಯೇ ತೀರುತ್ತಾರೆಂಬ ದೃಢ ನಂಬಿಕೆ ಇದೆ. ಅದು ಸಾಲ ಮನ್ನಾ ವಿಚಾರದಲ್ಲೂ ಕೂಡ. ಅವರು ನುಡಿದಂತೆ ನಡೆಯುತ್ತಾರೆ ಕೂಡ.

ಒಳಜಗಳ ಮಾತು ಕೇಳಿಬರುತ್ತಿದೆ ?
ಇಲ್ಲ. ಖಾತೆ ಹಂಚಿಕೆ ವಿಚಾರವಾಗಿ ಕೆಲ ಗೊಂದಲಗಳು ಇರುವುದು ನಿಜ. ನಮ್ಮದು ಮೈತ್ರಿ ಸರ್ಕಾರ. ಸುಲಭವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದಿಲ್ಲ. ಆದ್ದರಿಂದ ಉಭಯ ಪಕ್ಷದ ನಾಯಕರು ಕೂತು ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ. ಎಲ್ಲವೂ ಸುಗಮವಾಗಿ ಮುಂದಿನ 5 ವರ್ಷಗಳ ಕಾಲ ಮೈತ್ರಿ ಸರ್ಕಾರ ಆಡಳಿತ ನಡೆಸಲಿದೆ.

English summary
JDS MLA G T Devegowda exclusive interview to oneindia kannada. He said that, I will become one of the minister in coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X