Get Updates
Get notified of breaking news, exclusive insights, and must-see stories!

ಮೈಸೂರಿನಲ್ಲಿ ಚಾಮುಂಡಿ ದರ್ಶನ ಪಡೆದು I LOVE SOUTH CINEMA ಎಂದ ಖ್ಯಾತ ಬಾಲಿವುಡ್‌ ನಟ

ಮೈಸೂರು, ಜುಲೈ, 18: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಚಾಮುಂಡಿ ಬೆಟ್ಟಕ್ಕೆ ಬಾಲಿವುಡ್‌ ನಟ ಸಂಜಯ್ ದತ್ ಹಾಗೂ ಕೆ.ಡಿ. ಚಿತ್ರ ತಂಡ ಭೇಟಿ ನೀಡಿ ನಾಡದೇವತೆ ದರ್ಶನ ಪಡೆದಿದ್ದಾರೆ. ಹಾಗೆಯೆ ಇದೆ ವೇಳೆ ಸಂಜಯ್ ದತ್ ಅವರು ಸೌತ್‌ ಸಿನಿಮಾದ ಬಗ್ಗೆ ಹಾಡಿ ಹೊಗಳಿದ್ದಾರೆ.

ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಭಕ್ತಸಾಗರವೆ ನರೆದಿತ್ತು. ವಾರಾಂತ್ಯವೂ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗಿರಲಿಲ್ಲ. ಸದ್ಯ ಕೆಡಿ ಚಿತ್ರ ತಂಡದ ಬಾಲಿವುಡ್ ನಟ ಸಂಜಯ್ ದತ್, ನಿರ್ದೇಶಕ ಪ್ರೇಮ್ ಹಾಗೂ ನಟ ಶೋಭಾರಾಜ್ ಚಾಮುಂಡಿ ತಾಯಿಯ ಆಶೀರ್ವಾದ ಪಡೆದು ಪುನೀತರಾದರು.

I Love South cinema says famous Bollywood actor Sanjay Dutt in Mysuru

ಮೈಸೂರಿನಲ್ಲೇ ಕೆಡಿ ಚಿತ್ರ ಚಿತ್ರೀಕರಣ ನಡೆಯುತ್ತಿದ್ದು, ಹಾಗಾಗಿ ಚಿತ್ರ ತಂಡ ತಾಯಿ ದರ್ಶನಕ್ಕೆ ಆಗಮಿಸಿತ್ತು. ಚಾಮುಂಡಿ ತಾಯಿಯ ದರ್ಶನ ಪಡೆದ ಬಳಿಕ ಬಾಲಿವುಡ್ ನಟ ಸಂಜಯ್ ದತ್ ಮಾತನಾಡಿ, ಹಲವು ಬಾರಿ ಮೈಸೂರಿಗೆ ಬಂದಿದ್ದೇನೆ. ತಾಯಿಯ ಆಶೀರ್ವಾದ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಚಾಮುಂಡಿ ತಾಯಿಯ ದರ್ಶನವಾಗಿದೆ ಎಂದರು.

Bhuvan: 'ಪುಣ್ಯವತಿ' ಹೀರೊಗೆ ಮಹಿಳಾ ಅಭಿಮಾನಿಗಳೇ ಜಾಸ್ತಿ.. ಹುಡುಗಿಯರ ಮನ ಗೆದ್ದ ಭುವನ್!

ಹಾಗೆಯೇ ತಾಯಿಯ ಆಶೀರ್ವಾದ ಸಿಕ್ಕಿದೆ. ನನಗೆ ದಕ್ಷಿಣ ಭಾರತದ ಸಿನಿಮಾ ಅಂದರೆ ಬಹಳ ಇಷ್ಟ. ನಟ ಯಶ್ ಅವರ ಜೊತೆ ಕೆ.ಜಿ.ಎಫ್‌ ಚಿತ್ರದಲ್ಲಿ ನಟಿಸಿದ್ದೆ. ಇದೀಗ ಕೆಡಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. I LOVE SOUTH CINEMA ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಕ್ರಮ

ಈ ಬಾರಿಯ ಮೈಸೂರು ದಸರಾಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆ ದಸರಾ ಪ್ರಾರಂಭವಾಗುವ ಮುಂಚೆ ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಎಲ್ಲಾ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು
ರಾಷ್ಟ್ರೀಯ ಹಸಿರು ನ್ಯಾಯಾಧಿಕಣದ ಮುಖ್ಯಸ್ಥರು ಹಾಗೂ ನ್ಯಾಯಮೂರ್ತಿಗಳಾದ ಸುಭಾಷ್ ಬಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಸ ವಿಲೇವಾರಿ ಕುರಿತು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂಧ್ರಕ್ಕೆ ತಿರುಪತಿ ಹೇಗೆ ಪ್ರಮುಖವೋ, ಕರ್ನಾಟಕದಲ್ಲಿ ಚಾಮುಂಡಿ ಬೆಟ್ಟವೂ ಅಷ್ಟೇ ಪ್ರಮುಖವಾಗಿದೆ. ಇಲ್ಲಿನ ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಚಾಮುಂಡಿ ಬೆಟ್ಟಕ್ಕೆ ಎಂಟ್ರಿ ಆಗುವ ಪ್ರದೇಶದಲ್ಲಿಯೇ ಪ್ಲಾಸ್ಟಿಕ್ ಕೊಂಡ್ಯೋಯ್ಯದಂತೆ ಪರಿಶೀಲಿಸಬೇಕು. ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್‌ಗಳ ಬಳಕೆ ನಿಷೇಧಿಸಿ 20 ಲೀಟರ್‌ನ ಕ್ಯಾನ್ ನೀರನ್ನು ಪೇಪರ್ ಕಪ್‌ನಲ್ಲಿ ಬಳಸಬೇಕು ಎಂದರು.

ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ಅಲ್ಲಿನ ಗ್ರಾಮ ಪಂಚಾಯಿತಿ ಹಾಗೂ ದೇವಸ್ಧಾನ ಮಂಡಳಿ ಸೇರಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು. ಬಳಸಿದರೆ ದಂಡ ವಿಧಿಸುವ ಕೆಲಸ ಆಗಬೇಕು. ಕಾನೂನು ಪಾಲನೆ ಮಾಡದ್ದರೆ ಪರವಾನಗಿ ರದ್ದು ಪಡಿಸಿ, ದೇವಸ್ಧಾನದ ಪ್ರವೇಶದಲ್ಲಿ ಪ್ಲಾಸ್ಟಿಕ್ ತರದಂತೆ ಪರಿಶೀಲಿಸಬೇಕು ಎಂದರು.

ಇನ್ನು ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಸದಂತೆ ಅರಿವು ಮೂಡಿಸಿ. ಬೀದಿ ಬದಿ ವ್ಯಾಪಾರಿಗಳು ಏಕ ಬಳಕೆಯ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಬೇಕು. ಕಾನೂನು ಪಾಲಿಸದಿದ್ದರೆ ದಂಡ ಹಾಕಿ. ಈ ಮೂಲಕ ಮೈಸೂರನ್ನು ಸ್ವಚ್ಛ ನಗರಿಯಾಗಿ ಇಟ್ಟುಕೊಳ್ಳಬೇಕು. ಹೀಗೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ ಮೊದಲ ನಗರ ಮೈಸೂರು ಆಗಿದೆ.

ಎಲ್ಲಾ-ಶಾಲಾ ಕಾಲೇಜುಗಳಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಸರಿಯಾಗಿ ನಿರ್ವಹಣೆ ಮಾಡಬೇಕು. ಹಸಿ ಕಸವನ್ನು ಘನ ತಾಜ್ಯ ವಿಲೇವಾರಿ ಘಟಕಗಳಲ್ಲಿ ಗೊಬ್ಬರವಾಗಿ ತಯಾರಿಸಿ ಅದನ್ನು ಮರು ಬಳಕೆ ಮಾಡಬೇಕು. ರಸ್ತೆಗಳನ್ನು ಯಾವುದಾದರೂ ಉದ್ದೇಶಕ್ಕೆ ಅನುಮತಿ ಪಡೆದು ಆಗೆದರೆ, ಅವರೇ ರಸ್ತೆಯನ್ನು ದುರಸ್ಥಿ ಮಾಡಬೇಕು ಎಂದರು.

ಮದುವೆ ಹಾಗೂ ಇತರೆ ಮೆರವಣೆಗೆ ಅಥವಾ 100ಕ್ಕಿಂತ ಹೆಚ್ಚಿನ ಜನ ಸೇರುವ ಸಭೆ-ಸಮಾರಂಭಗಳಲ್ಲಿ ಆಗುವ ಕಸ ನಿರ್ವಹಣೆಗೆ ಶುಲ್ಕ ವಿಧಿಸಬೇಕು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಸವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಮಿಕಲ್ ಹಾಗೂ ಬಾಯೋಮೆಡಿಕಲ್ ವೆಸ್ಟ್ ಅನ್ನು ಸರಿಯಾಗಿ ಏಜೆನ್ಸಿಗಳು ಸಂಗ್ರಹಿಸಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ. ರಾಜೇಂದ್ರ ಅವರು ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದ್ದು, ಬಳಕೆದಾರರಿಗೆ ದಂಡ ವಿಧಿಸಲಾಗುತ್ತಿದೆ. ಆಷಾಡ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಇದನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಸಿಲಾಗಿದೆ ಎಂದರು.

ಹಾಗೆಯೇ ಚಾಮುಂಡಿ ಬೆಟ್ಟಕ್ಕೆ ಲಲಿತ ಮಹಲ್ ಪ್ಯಾಲೇಸ್ ಬಳಿಯಿಂದ ಉಚಿತ ಬಸ್ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಅಲ್ಲದೆ ವಿಶೇಷ 5 ತಂಡಗಳನ್ನು ರಚಿಸಿ ಪ್ಲಾಸ್ಟಿಕ್ ಅನ್ನು ಚಾಮುಂಡಿ ಬೆಟ್ಟಕ್ಕೆ ಏಕ ಬಳಕೆಯ ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ತಡೆಯಲಾಗಿದೆ. ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರನ್ನು ಬಳಸದೆ ಪೇಪರ್ ಅಥವಾ ಗಾಜಿನ ಲೋಟದಲ್ಲಿ ನೀರನ್ನು ನೀಡಲಾಗುತ್ತಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+