ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರನ್ನೂ ಸೋಲಿಸುವ ತಾಕತ್ತು ನನಗಿದೆ'

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ಯಡಿಯೂರಪ್ಪ ಕುಮಾರಸ್ವಾಮಿ ಇಬ್ಬರನ್ನು ಸೋಲಿಸಲು ನಂಗೆ ತಾಕತ್ತಿದೆ ಎಂದ ಸಿದ್ದು | Oneindia Kannada

ಮೈಸೂರು, ಏಪ್ರಿಲ್ 6 : ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಂತೆ. ಒಂದಲ್ಲವಂತೆ ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ. ಬಾದಾಮಿಯಿಂದ ಸ್ಪರ್ಧೆ ಮಾಡುವುದಾಗಿ ಅಲ್ಲಿನ ಕಾರ್ಯಕರ್ತರ ಎದುರಿಗೆ ಹೇಳಿದ್ದಾರಂತೆ. ಕೊಪ್ಪಳದ ಪಕ್ಕದ 'ಗೋಡಂಬಿ'ಯಲ್ಲಿ ನಿಲ್ಲುತ್ತಾರಂತೆ...

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

-ಹೀಗೆ ಸಿದ್ದರಾಮಯ್ಯ ಅವರ ವಿಧಾನಸಭೆ ಚುನಾವಣೆ ಬಗ್ಗೆ ಕ್ಷಣಕ್ಕೊಂದು ಸುದ್ದಿ ಗುದ್ದಿಕೊಂಡು ಬರುತ್ತಿದೆ. ಇದರ ಜತೆಗೆ ಮೈಸೂರಿನ ವರುಣಾ ಕ್ಷೇತ್ರವೋ ಅಥವಾ ಚಾಮುಂಡೇಶ್ವರಿಯೋ ಎಂಬುದರ ಬಗ್ಗೆಯೂ ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಆದರೆ ಸ್ವತಃ ಸಿದ್ದರಾಮಯ್ಯ ಒಂದಲ್ಲ ಮೂರು ಸಲ ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಹೇಳಿಕೊಂಡಿದ್ದಾರೆ.

ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

"ನಾನು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬೇರೆಲ್ಲೂ ಸ್ಪರ್ಧಿಸುವುದಿಲ್ಲ. ನನ್ನ ಸ್ಪರ್ಧೆ ಚಾಮುಂಡೇಶ್ವರಿಯಿಂದಲೇ. ನಿಮಗೆ ಎಷ್ಟು ಬಾರಿ ಸ್ಪಷ್ಟನೆ ನೀಡಬೇಕು ಹೇಳಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರ ಪ್ರಶ್ನೆಗೆ ತುಸು ಖಾರವಾಗಿಯೇ ಉತ್ತರವನ್ನು ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ಚು.ಆಯೋಗಕ್ಕೆ ದೂರುಸಿದ್ದರಾಮಯ್ಯ ವಿರುದ್ಧ ದೇವೇಗೌಡರಿಂದ ಚು.ಆಯೋಗಕ್ಕೆ ದೂರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟರೆ ಬೇರೆ ಎಲ್ಲೂ ಸ್ಪರ್ಧೆ ಮಾಡಲ್ಲ, ಮಾಡಲ್ಲ ಮಾಡಲ್ಲ ಎಂದು ಮೂರು ಬಾರಿ ನುಡಿದರು. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಇಬ್ಬರನ್ನೂ ಸೋಲಿಸುವ ತಾಕತ್ತು ನನಗಿದೆ. ಅದನ್ನು ಮಾಡಿ ತೋರಿಸುತ್ತೇನೆ. ಎಚ್.ಡಿ.ಕುಮಾರಸ್ವಾಮಿಯನ್ನು ಸೋಲಿಸಲು ಅವರು ಸ್ಪರ್ಧೆ ಮಾಡಿರುವ ಕ್ಷೇತ್ರದಲ್ಲಿ ಒಂದು ದಿನ ಪ್ರಚಾರ ನಡೆಸಿದರೆ ಸಾಕು ಗೆಲ್ಲುತ್ತೇವೆ ಎಂದರು.

ದೇವೇಗೌಡರ ಕುಟುಂಬದವರು, ಯಡಿಯೂರಪ್ಪ ನನ್ನನ್ನು ಸೋಲಿಸಲು ಪ್ರಯತ್ನಪಟ್ಟರು

ದೇವೇಗೌಡರ ಕುಟುಂಬದವರು, ಯಡಿಯೂರಪ್ಪ ನನ್ನನ್ನು ಸೋಲಿಸಲು ಪ್ರಯತ್ನಪಟ್ಟರು

ಇನ್ನು ರೆಸಾರ್ಟ್ ನಲ್ಲಿ ಕುಳಿತು ಹಣ ಹಂಚಿಕೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹಣ ಹಂಚಿಕೆ ಮಾಡಬಹುದು. ಅದಕ್ಕೆ ಅವರು ಹಾಗೆ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ದೇವೇಗೌಡರ ಕುಟುಂಬ ಹಾಗೂ ಯಡಿಯೂರಪ್ಪ ಪ್ರಯತ್ನಪಟ್ಟರು. ಆದರೆ ಅದು ಆಗಿಲ್ಲ. ಇನ್ನು ಮಾಜಿ ಸಂಸದ ಎಚ್ ವಿಶ್ವನಾಥ್ ಹಾಗೂ ಶ್ರೀನಿವಾಸ ಪ್ರಸಾದ್ ಆಗ ನನ್ನ ಜೊತೆ ಇದ್ದರು. ಅವರ ವಿಧಾನಸಭಾ ಕ್ಷೇತ್ರವೇ ಬೇರೆ ಇತ್ತು. ನನ್ನ ಗೆಲುವಿಗೆ ವಿಶ್ವನಾಥ್ ಹಾಗೂ ಶ್ರೀನಿವಾಸ ಪ್ರಸಾದ್ ಕಾರಣವಲ್ಲ. ನನ್ನನ್ನು ಗೆಲ್ಲಿಸಿರುವುದು ನನ್ನ ಜನತೆ ಎಂದರು.

ನಮ್ಮ ಅಪ್ಪನನ್ನು ಗುತ್ತಿಗೆ ಪಡೆದುಕೊಂಡಿದ್ದಾರಾ?

ನಮ್ಮ ಅಪ್ಪನನ್ನು ಗುತ್ತಿಗೆ ಪಡೆದುಕೊಂಡಿದ್ದಾರಾ?

ಸಿದ್ದರಾಮಯ್ಯ ಅವರಪ್ಪನಾಣೆ ಗೆಲ್ಲಲ್ಲ ಎಂದು ಕುಮಾರಸ್ವಾಮಿ ಅಂದ್ದೀದಾರಲ್ಲ, ಏನು ಕುಮಾರಸ್ವಾಮಿ ಅವರು ನಮ್ಮ ಅಪ್ಪನನ್ನು ಗುತ್ತಿಗೆ ಪಡೆದುಕೊಂಡಿದ್ದಾರಾ? ಅವರಪ್ಪನಾಣೆಗೂ ಈ ಬಾರಿ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲ್ಲಲ್ಲ ಎಂದು ಮತ್ತೆ ಅವರಪ್ಪನ ಮೇಲೆ ಆಣೆ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಪರವಾಗಿದ್ದಾರೆ

ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಪರವಾಗಿದ್ದಾರೆ

ನನ್ನನ್ನು ಸೋಲಿಸಲು ಯಡಿಯೂರಪ್ಪ - ಕುಮಾರಸ್ವಾಮಿ ಇಬ್ಬರೂ ಒಂದಾಗಿದ್ದಾರಾ ಎಂಬ ಪ್ರಶ್ನೆಗೆ, "ಇಬ್ಬರನ್ನೂ ನಾನು ಸೋಲಿಸುತ್ತೇನೆ. ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಪರವಾಗಿದ್ದಾರೆ. ನಾನು ಗೆದ್ದೇ ಗೆಲ್ಲುತ್ತೇನೆ. ಹಿಂದೆ ಹೇಳಿದ ಹೇಳಿಕೆಗೆ ಕಟಿಬದ್ಧವಾಗಿದ್ದು, ಈಗಾಗಲೇ ಹಲವು ಬಾರಿ ಚುನಾವಣೆ ಪ್ರಚಾರ ಮಾಡಿದ್ದೇನೆ. ಇಲ್ಲಿಯೇ ಚುನಾವಣೆ ಸ್ಪರ್ಧಿಸಲಿದ್ದೇನೆ. ಈ ಬಾರಿಯೂ ಜನ ನನ್ನ ಕೈ ಹಿಡಿಯುತ್ತಾರೆ" ಎಂದರು.

ಸುತ್ತೂರು ಶಾಖಾ ಮಠಕ್ಕೆ ಮಗ ಯತೀಂದ್ರ ಜತೆಗೆ ಭೇಟಿ

ಸುತ್ತೂರು ಶಾಖಾ ಮಠಕ್ಕೆ ಮಗ ಯತೀಂದ್ರ ಜತೆಗೆ ಭೇಟಿ

ಇದೇ ವೇಳೆ ಸುತ್ತೂರು ಶಾಖಾ ಮಠಕ್ಕೆ ಮಗ ಯತೀಂದ್ರ ಜೊತೆ ಸಿದ್ದರಾಮಯ್ಯ ಭೇಟಿ ಮಾಡಿ, ಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರಿಗೆ ಈಚೆಗೆ ತಲೆಗೆ ಪೆಟ್ಟಾಗಿತ್ತು. ಈ ವೇಳೆ ಶ್ರೀಗಳು ಆರೋಗ್ಯ ವಿಚಾರಿಸಿದರು. ಸ್ಕ್ಯಾನಿಂಗ್ ಮಾಡಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

English summary
Karnataka Assembly Elections 2018: I will contest from Chamundeshwari constituency only, Siddaramaiah said thrice to media in Mysuru. While media persons question about contest, Siddaramaiah confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X