ಮಾತಿನ ಭರಾಟೆಯಲ್ಲಿ ಪೇಚಿಗೆ ಸಿಲುಕಿದರೆ ಪ್ರತಾಪ್ ಸಿಂಹ?
Recommended Video

ಮೈಸೂರು, ಫೆಬ್ರವರಿ 20 : ಬಿಜೆಪಿ ಸಮಾವೇಶದಲ್ಲಿ ಸೋಮವಾರ ಪಕ್ಷದ ನಾಯಕರು ಮೋದಿಯ ಗುಣಗಾನ ಮಾಡಲು ಸಜ್ಜಾದ ವೇದಿಕೆಯಂತಿತ್ತು. ಅಲ್ಲಿ ಮತ ಯಾಚನೆ ಆಲೋಚನೆ ಒಂದೆಡೆಯಾದರೆ, ಮತ್ತೊಂದೆಡೆ ಮೋದಿಯವರನ್ನು ಹೊಗಳುವುದು ಮತ್ತೊಂದೆಡೆ ನಡೆದಿತ್ತು.
ಇದೇ ವೇಳೆ ಮೋದಿಯವರನ್ನು ಹೊಗಳುತ್ತಾ ಪ್ರತಾಪ್ ಸಿಂಹ ಪೇಚಿಗೆ ಸಿಲುಕಿದ ಪ್ರಸಂಗ ಕೂಡ ನಡೆಯಿತು. ಕಾರ್ಯಕ್ರಮದ ಸ್ವಾಗತ ಭಾಷಣದ ವೇಳೆ ಸಂಸದ ಪ್ರತಾಪ್ ಸಿಂಹ, 2014ರ ಮೇ ನಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ. ಈಗ ಮೈಸೂರು - ಕೊಡಗು ಸಂಸದನಾಗಿ ನಿಂತಿದ್ದೀನಿ. ಅದು ಪ್ರಧಾನಿ ಮೋದಿ ಕೊಟ್ಟ ದಯಾಭಿಕ್ಷೆ ಎಂದಾಗ ಎಲ್ಲರೂ ಶಿಳ್ಳೆ, ಚಪ್ಪಾಳೆಗಳನ್ನೇನೋ ಹೊಡೆದರು.
ಆದರೆ, ಆ ನಂತರ ಆಗಿದ್ದು ಮಾತ್ರ ಬೇರೆ. ಕೆಲ ಕಾರ್ಯಕರ್ತರು ಮೋದಿಯವರೇನೋ ಇವರಿಗೆ ಮತ ಹಾಕಿ ಗೆಲ್ಲಿಸಿಲ್ಲ. ಓಟು ಹಾಕಿದ್ದು ನಾವು. ನಮಗೆ ಕೃತಜ್ಞತೆ ತಿಳಿಸದೆ ಮೋದಿ ಭಿಕ್ಷೆ ಎನ್ನುತ್ತಿದ್ದಾರೆ. ಹಾಗಾದರೆ ನಾವೇಕೇ ಇವರನ್ನು ಗೆಲ್ಲಿಸಬೇಕು? ಎಂಬ ಮಾತುಗಳು ಕೇಳಿ ಬಂತು. ಈ ಹೇಳಿಕೆಯಿಂದಾಗಿ ಸಂಸದರು ಪೇಚಿಗೆ ಸಿಲುಕಿದ್ದು ಮಾತ್ರ ಸತ್ಯ.

ಪ್ರತಾಪ್ ಸಿಂಹರನ್ನು ಹೊಗಳಿದ ಮೋದಿ
ಮೋದಿಯನ್ನು ಸಂಸದರು ಹೊಗಳಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪ್ರತಾಪ್ ಸಿಂಹರನ್ನು ಪ್ರದಾನಿ ಮೋದಿ ಹೊಗಳಿದರು. ಸಿಂಹ ಯಾವಾಗಲೂ ಯಾವುದಾದರೂ ಒಂದು ಯೋಜನೆ ಹಿಡಿದು ಬರುತ್ತಾರೆ. ನಮ್ಮನ್ನು ನೆಮ್ಮದಿಯಿಂದ ಕೂರಲು ಬಿಡುವುದಿಲ್ಲ ಎಂದು ಸಂಸದರನ್ನು ಹೊಗಳಿದರು.












Click it and Unblock the Notifications