• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪ ಮುಖ್ಯಮಂತ್ರಿಯಾಗಲೆಂದು 1001 ಮೆಟ್ಟಿಲೇರಿದ ಶೋಭಾ ಕರಂದ್ಲಾಜೆ

|
   Karnataka Crisis : ಮೈಸೂರಿನಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ

   ಮೈಸೂರು, ಜುಲೈ 19:ಯಡಿಯೂರಪ್ಪನವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಪ್ರಾರ್ಥಿಸಿ ಚಾಮುಂಡಿ ಬೆಟ್ಟದ 1001 ಮೆಟ್ಟಿಲುಗಳನ್ನು ಏರಿದರು ಶೋಭಾ ಕರಂದ್ಲಾಜೆ.

   ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕಾಗಿ ಚಾಮುಂಡೇಶ್ವರಿಯನ್ನು ಬೇಡಿಕೊಂಡ ಅವರು, "ರಾಜ್ಯದಲ್ಲಿ ಜನವಿರೋಧಿ ಶಾಸಕ ವಿರೋಧಿ ಸರ್ಕಾರ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬರದಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಇದ್ಯಾವ ಕಷ್ಟವನ್ನೂ ಸರ್ಕಾರ ಕೇಳುತ್ತಿಲ್ಲ. ಇಂತಹ ಸರ್ಕಾರವನ್ನು ತೊಲಗಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿ ಎಂದು ದೇವಿಯಲ್ಲಿ ಕೇಳಿಕೊಳ್ಳುತ್ತೇನೆ" ಎಂದರು.

   ಇದೇ ಸಂದರ್ಭದಲ್ಲಿ, ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಹಾಗೂ ಸರ್ಕಾರದ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

   ವಿಶ್ವಾಸಮತ LIVE: ಮೈತ್ರಿ ಸರ್ಕಾರದ ಅಳಿವು-ಉಳಿವು ಇಂದೇ ನಿರ್ಧಾರ?

   ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಾಸಕರು ರಾಜೀನಾಮೆ ಕೊಟ್ಟಾಗ ಸ್ಪೀಕರ್ ಅದನ್ನು ಪರಿಗಣಿಸಬೇಕು. ವಿನಾಕಾರಣ ತಡ ಮಾಡುತ್ತಾ ಸ್ಪೀಕರ್ ಕಾಂಗ್ರೆಸ್ ಹಾಗೂ ಸರ್ಕಾರಕ್ಕೆ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ. ಕುಮಾರಸ್ವಾಮಿ ಮೊದಲಿಗೆ ಬಹುಮತ ಸಾಬೀತು ಮಾಡುವುದಾಗಿ ಪ್ರಸ್ತಾಪ ಮಾಡಿದ್ದರು.

   ಈಗ ಬಹುಮತ ಸಾಬೀತು ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಎಷ್ಟು ದಿನ ಈ ಡ್ರಾಮಾ ಮಾಡಲು ಸಾಧ್ಯ? ಸುಪ್ರೀಂಕೋರ್ಟ್ ಗೂ ಬೆಲೆ ಕೊಡುತ್ತಿಲ್ಲ, ರಾಜ್ಯಪಾಲರಿಗೂ ಬೆಲೆ ಕೊಡುತ್ತಿಲ್ಲ" ಎಂದು ಕಿಡಿಕಾರಿದರು.

   ಬಿಜೆಪಿಯಿಂದ ಶಾಸಕರ ಕಿಡ್ನಾಪ್ ಆರೋಪಕ್ಕೆ ಪ್ರತಿಕ್ರಿಯಿಸಿ, "ಶಾಸಕರೇನು ಚಿಕ್ಕ ಮಕ್ಕಳಲ್ಲ ಕಿಡ್ನಾಪ್ ಮಾಡಲು. ಅವರು ಮಾಧ್ಯಮದ ಮುಂದೆ ಬಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅವರೇ ಸ್ವತಃ ಸರ್ಕಾರದ ವಿರುದ್ಧ ದನಿ ಎತ್ತಿ ಬಂದಿರುವುದು" ಎಂದರು.

   ತಪ್ಪಿದ ಬಿಜೆಪಿ ಲೆಕ್ಕಾಚಾರ ; 1 ದಿನ ಸರ್ಕಾರ ಉಳಿಸಿದ ಸಿದ್ದರಾಮಯ್ಯ!

   English summary
   Till how many days you will continue this political drama ask mp Shobha Karandlaje to CM in Mysuru. Speaker is also working as an agent to cm and government she angered.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X