ಜುಲೈ 21ಕ್ಕೆ ಮೈಸೂರಿನಲ್ಲಿ 'ಹೌಸ್ ಆಫ್ ಬರ್ನಾಡಾ ಅಲ್ಬಾ' ನಾಟಕ

ಮೈಸೂರು, ಜುಲೈ 19: ಮೈಸೂರು ರಂಗಾಯಣವು ಇದೇ ಜುಲೈ 21ರಂದು ಮುಸ್ಲಿಂ ಮಹಿಳೆಯರ ಬದುಕಿನ ಮೇಲೆ ಬೆಳಕು ಚೆಲ್ಲುವ 'ಹೌಸ್ ಆಫ್ ಬರ್ನಾಡಾ ಅಲ್ಬಾ' ನಾಟಕ ಪ್ರದರ್ಶನಕ್ಕೆ ಸಜ್ಜಾಗಿದೆ.

ನಾಟಕಕಾರ ಫೆಡ್ರಿಕೋ ಗಾರ್ಸಿಯ ಲೋರ್ಕಾ ರಚನೆಯ 'ಹೌಸ್ ಆಫ್ ಬರ್ನಾಡಾ ಅಲ್ಬಾ' ನಾಟಕ ಜುಲೈ 21, ಭಾನುವಾರ ರಂಗಾಯಣದ ಭೂಮಿಗೀತದಲ್ಲಿ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.

ನಾಟಕದ ಕುರಿತು ನಿರ್ದೇಶಕರಾದ ಭಾಗೀರಥಿ ಬಾಯಿ ಕದಂ ಮಾತನಾಡಿ, "ನಾಟಕವನ್ನು ಕನ್ನಡಕ್ಕೆ ಚಂದ್ರಕಾಂತ ಕುಸನೂರ ತಂದಿದ್ದಾರೆ. ಪುರುಷ ಸಮಾಜದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ನಾಟಕ ಬೆಳಕು ಚೆಲ್ಲಲಿದೆ. ಸರಂಜಾಮಶಾಹಿ ವ್ಯವಸ್ಥೆಯ ಕೊನೆಯ ದಿನಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ, ಹಾಗೆಯೇ ಪಾರಂಪರಿಕ ಮೌಲ್ಯವನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುವಂತಹ ಒಂದು ಮನೆತನದ ಕಥೆಯಾಗಿದ್ದು, ಮನೆಯ ಒಡತಿ ಹಾಗೂ ವಯಸ್ಸಿಗೆ ಬಂದ ಆಕೆಯ ಮಕ್ಕಳ ವಯೋಸಹಜ ಭಾವನೆಗಳನ್ನು ನಾಟಕ ಮನೋಜ್ಞವಾಗಿ ಬಿಂಬಿಸುತ್ತದೆ. ಹೆಣ್ಣು ಮಕ್ಕಳ ಮೇಲೆ ಹೇರಲ್ಪಟ್ಟ ಮನೆತನದ ಗೌರವ, ಘನತೆ ಎಂಬ ಹುಸಿ ನಂಬಿಕೆಗಳಿಗೆ ಜೋತು ಬಿದ್ದ ಕುಟುಂಬದೊಳಗೆ ಅವೆಲ್ಲವನ್ನೂ ಮೀರಿ ಬಿಡುಗಡೆಗೊಳ್ಳಲು ತಹತಹಿಸುವ ಹೆಣ್ಣುಮಕ್ಕಳ ತಾಕಲಾಟವನ್ನು ಅತ್ಯಂತ ಪರಿಣಾಮಕಾರಿಯಾಗಿ ತರಲಾಗಿದೆ" ಎಂದರು.

house of bernada alba drama held on July 21 at Rangayana mysuru

ಎಚ್.ಕೆ.ದ್ವಾರಕಾನಾಥ್ ರಂಗವಿನ್ಯಾಸ, ರಾಮಚಂದ್ರ ಜಿ ಹಡಪದ ಸಂಗೀತ, ಸಂತೋಷ್ ಕುಮಾರ್ ಕುಸನೂರ ವಸ್ತ್ರವಿನ್ಯಾಸ, ಕೃಷ್ಣಕುಮಾರ್ ನಾರ್ಣಕಜೆ ಬೆಳಕಿನ ವಿನ್ಯಾಸ, ವಿನಾಯಕ್ ಭಟ್ ಹಾಸಣಗಿ ರಂಗ ನಿರ್ವಹಣೆ ಮಾಡಿದ್ದಾರೆ. ನಾಟಕದ ಪ್ರವೇಶ ಶುಲ್ಕ 50 ರೂಪಾಯಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+