Yaduveer wadiyar: ಮೈಸೂರು ಅರಮನೆಯಲ್ಲಿ ಯುದುವೀರ್ ಒಡೆಯರ್- ತ್ರಿಷಿಕಾ ಜಗಳ ಆಡ್ತಾರಾ?
ಬೆಂಗಳೂರು, ಅಕ್ಟೋಬರ್ 19: ಈ ಬಾರಿ ನಾಡಹಬ್ಬ ದಸರಾದ ಸಂಭ್ರಮದ ಜೊತೆಗೆ ಮತ್ತೊಂದು ಸಂತೋಷ ಮನೆ ಮಾಡಿತ್ತು. ಮೈಸೂರು ಒಡೆಯರ್ ರಾಜಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಸದ್ಯ ಅರಮನೆಯಲ್ಲಿ ಮಗು ಆಗಮನದ ಸಂತೋಷ ತುಂಬಿದೆ.
ಮೈಸೂರಿನ ಅರಮನೆಯ ಮಹಾರಾಜ ಸದ್ಯ ಸಂಸದರಾಗಿರುವ ಯದುವೀರ್ ಒಡೆಯರ್ ಅವರ ಕೆಲವು ವೈಯಕ್ತಿಕ ಮಾಹಿತಿ ಇಲ್ಲಿದೆ. ಈ ಬಗ್ಗೆ ಸ್ವತಃ ಯದುವೀರ್ ಒಡೆಯರ್ ನ್ಯೂಸ್‌ಫಸ್ಟ್ ವಾಹಿನಿ ಜೊತೆ ಮಾತನಾಡಿದ್ದಾರೆ.

ಅರಮನೆಯಲ್ಲಿ ಮಹರಾಜರು ಹಾಗೂ ಅವರ ಪತ್ನಿ ಜಗಳ ಆಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯುದುವೀರ್ ಒಡೆಯರ್, ಸಾಮಾನ್ಯವಾಗಿ ನಾವು ಜಗಳ, ಗಲಾಟೆ ಮಾಡಲ್ಲ ಅನಿಸುತ್ತದೆ. ಆದರೆ ಇದ್ದೇ ಇರುತ್ತದೆ. ಎಲ್ಲಾ ಮನೆಗಳಲ್ಲಿ ಅದು ಸಹಜ. ಅರಮನೆ ಇರಬಹುದು, ಸಾಮಾನ್ಯರ ಮನೆ ಇರಬಹುದು, ಶ್ರೀಮಂತರಿರಬಹುದು, ಬಡವರಿರಬಹುದು ಯಾರೇ ಇರಬಹುದು ಮನೆಯಲ್ಲಿ ಸಂಕಷ್ಟ, ಸಂಘರ್ಷ ಇಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ ಎಂದರು.
ತಮ್ಮ ಇಷ್ಟದ ಆಹಾರದ ಬಗ್ಗೆ ಮಾತನಾಡಿದ ಯುದುವೀರ್, ನನಗೆ ಸಾಮಾನ್ಯವಾಗಿ ಹುರುಳಿ ಸಾರು ತುಂಬಾನೇ ಇಷ್ಟ. ಅಂದರೆ ಹುರುಳಿ ಸಾರು ಅನ್ನ, ಹುರುಳಿ ಸಾರು ರಾಗಿ ಮುದ್ದೆ ಬಹಳ ಇಷ್ಟ. ಆದರೆ ದಸರಾ ಸಮಯದಲ್ಲಿ ಹುರುಳಿ ಸಾರನ್ನು ಹೆಚ್ಚು ಮಾಡುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಊಟಗಳು, ಎಲ್ಲಾ ಆಹಾರ ಪದ್ಧತಿಗಳೂ ನನಗೆ ಇಷ್ಟ. ಊಟದಲ್ಲಿ ನನಗೆ ಅದು-ಇದು ಅಂತಾ ಏನಿಲ್ಲ. ಆದರೆ ಒಂದೇ ಒಂದು ಊಟ ತಿನ್ನಲು ಅವಕಾಶ ಎಂದರೆ ನಾನು ಹುರುಳಿ ಸಾರನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದರು.

ನನಗೆ ಅಡುಗೆ ಮಾಡಲು ಹೆಚ್ಚಾಗಿ ಬರುವುದಿಲ್ಲ. ಅಡುಗೆ ಭಟ್ಟರಾಗಿ ನನಗೆ ಅಡುಗೆ ಮಾಡಲು ಗೊತ್ತಿಲ್ಲ. ಆದರೆ ನಾನು ಯುಎಸ್‌ನಲ್ಲಿ ಇರುವಾಗ ಸ್ವಲ್ಪ ಆದ್ರೂ ಕಲಿತಿರಲೇ ಬೇಕಿತ್ತು. ಅಲ್ಲಿ ಕಲಿತಿರುವುದು ಗೊತ್ತಿದೆ ನನಗೆ. ಇಲ್ಲಿಗೆ ಬಂದ ಮೇಲೆ ನಾನು ಜಾಸ್ತಿ ಮಾಡಿಲ್ಲ. ಬಹುಶಃ ಎರಡು ಮೂರು ಸರಿ ಮಾಡಿರಬಹುದು ಎಂದರು.
ತಮ್ಮ ಹವ್ಯಾಸದ ಬಗ್ಗೆ ಮಾತನಾಡಿದ ಯುದುವೀರ್, ಹಿಂದೆ ಎಲ್ಲಾ ನಾನು ಟೆನ್ನಿಸ್ ಆಡುತ್ತಿದೆ. ರನ್ನಿಂಗ್, ವರ್ಕ್ಔಟ್ ಎಲ್ಲಾ ಮಾಡುತ್ತಿದೆ ಆದರೆ ಈಗ ಅದಕ್ಕೆಲ್ಲಾ ಸಮಯ ಇಲ್ಲ. ಈಗ ಫ್ರೀ ಸಮಯ ಇದ್ದರೂ ಕೂಡ ಸುದ್ದಿ ಫಾಲೋ ಅಪ್ ಮಾಡುವುದರಲ್ಲಿಯೇ ಕಳೆದು ಹೋಗುತ್ತದೆ. ಏನಾದರೂ ನಿರಂತರ ಕೆಲಸ ನಡೆಯುತ್ತಲೇ ಇರುತ್ತದೆ. ಆಫೀಸ್ ಕೆಲಸ, ಆಫೀಸ್ ಇಲ್ಲ ಅಂದರೆ ಪ್ರವಾಸ, ಪ್ರವಾಸ ಇಲ್ಲ ಅಂದರೆ ಕಾರ್ಯಕ್ರಮ ಇರುತ್ತದೆ. ಹೀಗೆ ನಿರಂತರವಾಗಿ ಬ್ಯೂಸಿಯಾಗಿರುತ್ತೇನೆ ಎಂದು ಹೇಳಿದರು.












Click it and Unblock the Notifications