• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈದ್ಯರ ನಿಗಾದಲ್ಲಿ ಆರೆಂಜ್ ಕೌಂಟಿಯಲ್ಲಿ ಎಚ್ ಡಿಕೆ- ಅನಿತಾ ವಿಶ್ರಾಂತಿ

|
   ಆರೆಂಜ್ ಕೌಂಟಿ ರೆಸಾರ್ಟ್ ನಲ್ಲಿ ವಿಶ್ರಾಂತಿಯಲ್ಲಿದ್ದಾರೆ ಎಚ್ ಡಿ ಕೆ ಹಾಗು ಅನಿತಾ ಕುಮಾರಸ್ವಾಮಿ | Oneindia Kannada

   ಮೈಸೂರು, ನವೆಂಬರ್ 10: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪತ್ನಿ ಶಾಸಕಿ ಅನಿತಾ ಅವರು ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಆರೆಂಜ್ ಕೌಂಟಿ ಲಾಡ್ಜ್ ನಲ್ಲಿ ವಿಶ್ರಾಂತಿಗಾಗಿ ವಾಸ್ತವ್ಯ ಹೂಡಿದ್ದಾರೆ.

   ಇತ್ತೀಚೆಗಷ್ಟೆ ರಾಜ್ಯದಲ್ಲಿ ನಡೆದ ಪಂಚ ಕ್ಷೇತ್ರಗಳ ಉಪ ಚುನಾವಣೆ ಹಾಗೂ ರಾಜಕೀಯ ಸೆಣಸಾಟದಲ್ಲಿ ಜೆಡಿಎಸ್ ಸಮಾಧಾನಕರವಾದ ಗೆಲುವು ಪಡೆದಿತ್ತು. ಆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅನಿತಾ ಕುಟುಂಬ ಸಮೇತರಾಗಿ ಕಬಿನಿ ಹಿನ್ನೀರಿನಲ್ಲಿ ಇರುವ ಆರೆಂಜ್ ಕೌಂಟಿ ರೆಸಾರ್ಟ್ ನಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆಯೊಂದಿಗೆ, ವೈದ್ಯರ ನಿಗಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

   ಟಿಪ್ಪು ಜಯಂತಿಗೆ ಗೈರು: ವಿಶ್ರಾಂತಿಯಲ್ಲಿರುವ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದೇನು?

   ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಸೇರಿದಂತೆ ಅನೇಕ ಮುಖಂಡರು ಇಲ್ಲಿಗೆ ಭೇಟಿ ನೀಡಿದ್ದಾರೆ. ಶನಿವಾರದಂದು ಕುಮಾರಸ್ವಾಮಿ ಕುಟುಂಬ ಸಮೇತ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಮಾಡುವ ಸಾಧ್ಯತೆಗಳಿವೆ.

   ಕಾರಾಪುರ ಜಂಗಲ್ ಲಾಡ್ಜ್ ‍ನಲ್ಲಿ ಕುಮಾರಸ್ವಾಮಿ ಮಗ ನಿಖಿಲ್ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತಿದೆ. ಯಾರಿಗೂ ಬೇಡವಾಗಿರುವ ಜಯಂತಿ ಆಚರಿಸಿದರೆ ಮೈತ್ರಿ ಸರಕಾರ ಬಹಳ ದಿನ ಉಳಿಯಲ್ಲ. ಮುಖ್ಯಮಂತ್ರಿ ಪಾಲ್ಗೊಂಡರೆ ಹಾಳಾಗಿ ಹೋಗುತ್ತಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

   ಪತ್ನಿ ಜೊತೆ ವಿಧಾನಸಭೆ ಪ್ರವೇಶಿಸಿ ಇತಿಹಾಸ ನಿರ್ಮಿಸಲಿರುವ ಕುಮಾರಸ್ವಾಮಿ!

   ಇಂಥ ಆಕ್ಷೇಪಗಳು ಹಾಗೂ ನಂಬಿಕೆಗಳ ಹಿನ್ನೆಲೆಯಲ್ಲೇ ಅನಾರೋಗ್ಯದ ನೆಪವೊಡ್ಡಿ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ.

   English summary
   Karnataka chief minister H.D.Kumaraswamy and Anitha in relaxing mood at Orange county under doctor supervision on Saturday, in H.D.Kote, Mysuru. November 10th Tipu jayanti celebrating by state government. Some people assuming that, intentionally he skip the function.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X