ಎಚ್.ಡಿ.ಕೋಟೆ: ಚೋಳರ ಕಾಲಘಟ್ಟದ ದೇಗುಲದ ರಾಜಗೋಪುರದಲ್ಲಿ ಬಿರುಕು, ಭಕ್ತರಿಗೆ ಆತಂಕ
ಮೈಸೂರು, ಅಕ್ಟೋಬರ್, 17: ಅದೊಂದು ದೇಗುಲದ ರಾಜಗೋಪುರದಲ್ಲಿ ಕಾಣಿಸಿಕೊಂಡಿರುವ ಬಿರುಕು ಇದೀಗ ಭಕ್ತರಲ್ಲಿ ಆತಂಕವನ್ನುಂಟು ಮಾಡಿದೆ. ಹಾಗಾದರೆ ಆ ದೇಗುಲ ಯಾವುದು? ಅಲ್ಲಿ ಆಗಿದ್ದೇನು? ಎಂಬ ಪ್ರಶ್ನೆಗಳು ಭಕ್ತರಲ್ಲಿ ಮೂಡದಿರದು.
ಎಚ್.ಡಿ.ಕೋಟೆ ಪಟ್ಟಣದ ಮೊದಲನೇ ಮುಖ್ಯ ರಸ್ತೆಯಲ್ಲಿರುವ 800 ವರ್ಷಗಳಷ್ಟು ಹಳೆಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ವರದರಾಜಸ್ವಾಮಿ ದೇವಸ್ಥಾನ ಮುಖ್ಯದ್ವಾರದಲ್ಲಿ ಕೆಲ ವರ್ಷಗಳ ಹಿಂದೆ 1 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಗೋಪುರ ನಿರ್ಮಿಸಲಾಗಿತ್ತು. ಆದರೆ ಇದೀಗ ಆ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಈಗ ದೇವಸ್ಥಾನ ಸಮಿತಿಯವರು ರಾತ್ರೋರಾತ್ರಿ ಬೃಹತ್ ಗ್ರಾತ್ರದ ಕಬ್ಬಿಣದ ಕೃತಕ ಪಿಲ್ಲರ್‌ಗಳನ್ನು ಅಳವಡಿಸಿರುವುದು ಕಂಡುಬಂದಿದೆ.

ಚೋಳರ ಕಾಲಘಟ್ಟದ ದೇಗುಲ
ಹಾಗೆನೋಡಿದರೆ ಶ್ರೀ ವರದರಾಜಸ್ವಾಮಿ ದೇವಸ್ಥಾನವು ಎಚ್.ಡಿ.ಕೋಟೆ ಪಟ್ಟಣಕ್ಕೆ ಕಳಸದಂತಿದ್ದು, ಇದು ಚೋಳರ ಕಾಲಘಟ್ಟದಲ್ಲಿ ನಿರ್ಮಾಣವಾಗಿದ್ದು, ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿದ್ದರೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಅಭಿವೃದ್ದಿ ಕಂಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ.
ನೂತನ ರಾಜಗೋಪುರ ನಿರ್ಮಾಣ
ಈ ಹಿಂದೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ಕಾಲದಲ್ಲಿ ಕ್ಷೇತ್ರದ ಶಾಸಕರಾಗಿದ್ದ ಕೋಟೆ ಎಂ.ಶಿವಣ್ಣ ಅವರು ಹಣಕಾಸು ಸಚಿವರಾಗಿದ್ದಾಗ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ದಾರ ಭಾಗ್ಯ ಕಂಡಿತ್ತು. ಆಗ ದೇವಸ್ಥಾನ ಸಮಿತಿ ಶಾಸಕ ಗಮನ ಸೆಳೆದು ರಾಜಗೋಪುರ ನಿರ್ಮಾಣಕ್ಕೆ ಮುಂದಾಗಿ ಪುರಾತತ್ವ ಇಲಾಖೆ ನೀಡಿದ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿಸಿದ್ದರು.
ಆ ಹಣದ ಜೊತೆಗೆ ಸಾರ್ವಜನಿಕರು, ದಾನಿಗಳಿಂದ ಸಂಗ್ರಹಿಸಿದ 75ಲಕ್ಷ ಸೇರಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ತಮಿಳುನಾಡು ಮೂಲಕ ಶಿಲ್ಪಿಗಳಿಂದ ದೇವಸ್ಥಾನದ ಮುಖ್ಯದ್ವಾರದ ಹಳೆಯ ಛಾವಣಿಯ ಮೇಲೆ ನೂತನವಾಗಿ ರಾಜಗೋಪುರವನ್ನು ಸುಂದರವಾಗಿ ನಿರ್ಮಾಣ ಮಾಡಲಾಗಿತ್ತು. ರಾಜಗೋಪುರದಲ್ಲಿ ಈಗ ಇದ್ದಕ್ಕಿದ್ದಂತೆ ಬಿರುಕು ಕಾಣಿಸಿಕೊಂಡಿದ್ದು, ದೇವಸ್ಥಾನ ಸಮಿತಿಯವರು ಇದನ್ನು ಯಾರ ಗಮನಕ್ಕೂ ತಾರದೆ ಒಳಗೊಳಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಾವೇ ದುರಸ್ತಿ ನೆಪದಲ್ಲಿ ಗೋಪುರ ಕುಸಿಯದಂತೆ ಭಾರೀ ಗಾತ್ರದ ಕಬ್ಬಿಣದ ಪಿಲ್ಲರ್‌ಗಳನ್ನು ಅಳವಡಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಕೃತಕ ಪಿಲ್ಲರ್ ಅಳವಡಿಕೆ ಏಕೆ?
ದೇವಸ್ಥಾನ ಪುರಾತತ್ವ ಇಲಾಖೆ ಅಧೀನದಲ್ಲಿ ಬಂದರೂ ಅವರ ಗಮನಕ್ಕೂ ತಾರದೆ ದೇವಸ್ಥಾನ ಸಮಿತಿ ಅವರು ರಾಜಗೋಪುರಕ್ಕೆ ತೊಂದರೆಯಾಗದಂತೆ ಕೃತಕ ಪಿಲ್ಲರ್ ಅಳವಡಿಕೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ‍್ನೆಗಳು ಹುಟ್ಟಿಕೊಂಡಿವೆ. ಇನ್ನು ಈ ದೇಗುಲದ ಗೋಪುರದಲ್ಲಿ ವ್ಯತ್ಯಾಸ ಉಂಟಾಗಲು ಹಲವು ಕಾರಣಗಳನ್ನು ಜನ ಹೇಳುತ್ತಿದ್ದಾರೆ.
ಅದು ಏನೆಂದರೆ, ದೇವಸ್ಥಾನ ಮುಖ್ಯದ್ವಾರಕ್ಕೆ ರಾಜಗೋಪುರ ನಿರ್ಮಾಣಕ್ಕೂ ಮುನ್ನ ಗೋಪುರ ಕೆಳಭಾಗ ಇರುವ ಮುಖ್ಯದ್ವಾರದಲ್ಲಿ ಮಣ್ಣು ಪರೀಕ್ಷೆಗೆ ಪುರಾತತ್ವ ಇಲಾಖೆಯವರು ಬರುವುದಾಗಿ ತಿಳಿಸಿದ್ದರಿಂದ ಅವರು ಬಂದು ಸ್ಥಳ ಗುರುತು ಮಾಡುವ ಮುನ್ನವೇ ಜೆಸಿಬಿ ಯಂತ್ರ ಬಳಸಿ ದೇವಸ್ಥಾನದ ಹಳೆಯ ಮುಖ್ಯ ದ್ವಾರದ ಗೋಡೆಯ ಪಕ್ಕದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಂಡಿ ತೋಡಲಾಗಿತ್ತಂತೆ.
ತದನಂತರ ಮಣ್ಣು ಪರೀಕ್ಷೆಗೆ ಬಂದ ಅಧಿಕಾರಿಗಳು ದೇವಸ್ಥಾನ ಬಳಿ ಯಂತ್ರದಿಂದ ಹಳ್ಳ ತಗೆದಿದ್ದರ ಪ್ರಮಾದ ತಿಳಿಸಿ ಗುಂಡಿ ಮುಚ್ಚಿಸಿದ್ದರಂತೆ. ಅದರಿಂದಲೇ ಇಂದು ರಾಜಗೋಪುರದಲ್ಲಿ ದೋಷ ಕಾಣಿಸಿಕೊಂಡು ತಳಪಾಯದ ಗೋಪುರ ಎರಡು ಕಡೆ ಭಾಗಿದಂತೆ ಭಾಸವಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಆದರೆ ಶ್ರೀ ವರದರಾಜಸ್ವಾಮಿ ದೇವಸ್ಥಾನ ಸಮಿತಿ ಹೇಳುವುದೇ ಬೇರೆ ಮಣ್ಣು ಪರೀಕ್ಷೆಗೆ ತೋಡಿದ ಗುಂಡಿಗೂ ರಾಜಗೋಪುರದಲ್ಲಿ ಕಾಣಿಸಿಕೊಂಡಿರುವ ಬಿರುಕಿಗೂ ಯಾವುದೇ ಸಂಬಂಧವಿಲ್ಲ. ದೇವಸ್ಥಾನ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಿತ್ಯ ನೂರಾರು ಬಸ್ ಗಳು ಸೇರಿದಂತೆ ಇನ್ನಿತರ ಭಾರೀ ವಾಹನಗಳು ಸಂಚಾರ ಮಾಡುತ್ತಿವೆ.
ಸಂಬಂಧಿಸಿದವರು ಇತ್ತ ಗಮನಿಸಿ
ವಾಹನಗಳ ಸಂಚಾರದಿಂದ ಅಲುಗಾಡಿ ರಾಜಗೋಪುರದ ಎರಡು ಕಡೆ ಬಿರುಕು ಕಾಣಿಸಿಕೊಂಡಿದ್ದು, ಹೀಗಾಗಿ ನಾವು ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದವು. ಅವರು ಬಂದು ನೋಡಿದ ಬಳಿಕ ಕಬ್ಬಿಣದ ಪಿಲ್ಲರ್‌ಗಳನ್ನು ಅಳವಡಿಸಿದ್ದಾಗಿ ಹೇಳಲಾಗುತ್ತಿದೆ.
ಅದು ಏನೇ ಇರಲಿ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಸಂಬಂಧಿಸಿದ ರಾಜಗೋಪುರದಲ್ಲಿ ಕಾಣಿಸಿಕೊಂಡಿರುವ ದೋಷದ ಬಗ್ಗೆ ಗಮನಹರಿಸಿ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಭಕ್ತರು ಆಗ್ರಹಿಸುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ ಎಂದಿ ಕಾದುನೋಡಬೇಕಾಗಿದೆ.
-
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications