ನಮ್ಮ ತಂದೆಗೆ ಹೃದಯಾಘಾತವಾಗಿಲ್ಲ: ಸ್ಪಷ್ಟನೆ ಕೊಟ್ಟ ಎಚ್ .ವಿಶ್ವನಾಥ್ ಪುತ್ರ
ಮೈಸೂರು, ಮಾರ್ಚ್ 17: ಶಾಸಕ ಅಡಗೂರು ವಿಶ್ವನಾಥ್ ಅವರಿಗೆ ಲಘು ಹೃದಯಾಘಾತವಾಗಿದೆ ಎಂದು ವದಂತಿ ಹಬ್ಬಿದೆ. ಆದರೆ ಅವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆಯುರಿ ಕಾಣಿಸಿಕೊಂಡಿತ್ತು. ಸದ್ಯ ಚಿಕಿತ್ಸೆ ನಂತರ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್‌ಗೆ ಲಘು ಹೃದಯಾಘಾತ
ಹೈದರಾಬಾದ್ ನಲ್ಲಿ ಕುರುಬ ಸಮುದಾಯದ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವಿಶ್ವನಾಥ್ ಅವರಿಗೆ ಲಘು ಹೃದಯಾಘಾತವಾಗಿದೆ. ಹೈದರಾಬಾದ್ ನ ಆಸ್ಪತ್ರೆಯೊಂದರಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಡಿತ್ತು.
ಈ ಬಗ್ಗೆ ಮಾತನಾಡಿದ ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ, ನಮ್ಮ ತಂದೆಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆಯುರಿ ಕಾಣಿಸಿಕೊಂಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.ಈಗ ಅವರ ಆರಾಮಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ವಿಶ್ವನಾಥ್ ಅವರಿಗೆ ಲಘು ಹೃದಯಾಘಾತ ಎಂಬ ಬಗ್ಗೆ ಪ್ರಸಾರವಾಗಿರುವ ಸುದ್ದಿ ಸುಳ್ಳು. ಅವರಿಗೆ ಯಾವುದೇ ಆರೋಗ್ಯ ತೊಂದರೆ ಇಲ್ಲ. ಯಾವುದೇ ಊಹಾಪೋಹಗಳನ್ನು ಹರಡಿಸಬೇಡಿ ಎಂದು ಸ್ಪಷ್ಟಪಡಿಸಿದರು.












Click it and Unblock the Notifications