ಮೈಸೂರು ದಸರಾದ ಖರ್ಚಿನ ಲೆಕ್ಕ ಕೊಡಿ; ಎಚ್. ವಿಶ್ವನಾಥ್ ಆಗ್ರಹ
ಮೈಸೂರು, ಅಕ್ಟೋಬರ್ 09: ಈ ಬಾರಿ ದಸರಾ ಮಹೋತ್ಸವದಲ್ಲಿ ಅಧ್ವಾನಗಳ ಸರಮಾಲೆಯೇ ಕಂಡು ಬಂದಿದೆ. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದದ್ದೆಇದಕ್ಕೆ ಪ್ರಮುಖ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೈಸೂರಿನಲ್ಲಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಡಿದ ಅವರು, ''ದಸರೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಇದ್ದವು. ಆದರೆ ಯಾವುದಕ್ಕೂ ಸರಿಯಾದ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಸರ್ಕಾರ 35 ಕೋಟಿ ರೂಪಾಯಿ ನೀಡಿದ್ದರೂ ಅನುದಾನ ಕೊರತೆ ಆಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಅನುದಾನ ಇಲ್ಲದೆ ಸೊರಗಿವೆ. ಗ್ರಾಮೀಣ ದಸರಾಗೆ ಒಂದೂವರೆ ಲಕ್ಷ ರೂಪಾಯಿ ನೀಡಿದ್ದರಿಂದ ವ್ಯವಸ್ಥಿತವಾಗಿ ನಡೆಯಲಿಲ್ಲ. ಕ್ರೀಡಾ ದಸರಾದಲ್ಲಿ ಉತ್ಸಾಹ ಕಾಣಲಿಲ್ಲ. ಮ್ಯಾರಥಾನ್ ಕೂಡ ನಡೆಯಲಿಲ್ಲ,'' ಎಂದು ಬೇಸರ ವ್ಯಕ್ತಪಡಿಸಿದರು.
ದಸರಾ ಮುಗಿದರೂ ಮೈಸೂರಿನತ್ತ ಪ್ರವಾಸಿಗರ ದಂಡು; ಬೆಟ್ಟಕ್ಕೆ ಆಗಮಿಸಿದ ಜನಸಾಗರ
"ದಸರಾದಲ್ಲಿ ಆದ ಖರ್ಚಿನ ಲೆಕ್ಕ ಕೊಡಿ"
''ಪ್ರತಿ ಬಾರಿ ದಸರೆಯಲ್ಲಿ ಸ್ಥಳೀಯ ನಾಯಕರು, ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಸಾಹಿತಿಗಳನ್ನೂ ಕಡೆಗಣಿಸಲಾಯಿತು. ಬಿಜೆಪಿ ಸರ್ಕಾರ ಬಂದರೆ ನಮ್ಮವರಿಗೆ ದಸರಾ ನಡೆಸುವ ಜವಾಬ್ದಾರಿ ಸಿಗುವುದಿಲ್ಲ. ದಸರಾ ಮಹೋತ್ಸವದ ವೆಚ್ಚದ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು. ಲೆಕ್ಕ ಕೊಡುವುದು ಅಷ್ಟೇ ಅಲ್ಲ. ದಸರಾ ಬಗ್ಗೆ ಪುನರ್ ವಿಮರ್ಶೆ ಆಗಬೇಕಿದ್ದು, ಕೆಲ ತಿದ್ದುಪಡಿಯಾಗಬೇಕು. ಜೊತೆಗೆ ದಸರಾ ಪ್ರಾಧಿಕಾರ ಕಡ್ಡಾಯವಾಗಿ ರಚನೆ ಆಗಬೇಕು'' ಎಂದು ಒತ್ತಾಯಿಸಿದರು.
ಸೋಮಶೇಖರ್‌ಗೆ ಅನುಭವದ ಕೊರತೆ
''ನಾನು ಜಿಲ್ಲಾ ಉಸ್ತುವಾರಿ ಸಚಿವನ್ನಾಗಿದ್ದಾಗ ಹಲವು ಹೊಸತನಕ್ಕೆ ಆದ್ಯತೆ ನೀಡಿದ್ದೆ. ಹುಣಸೂರಿನ ವೀರನ ಹೊಸಳ್ಳಿಯಿಂದ ಗಜಪಯಣ ಆರಂಭಿಸಿದ್ದೆ. ಆದರೆ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಮೈಸೂರಿನವರು ಜಿಲ್ಲಾ ಮಂತ್ರಿ ಆಗದಿರುವುದು ಅಧ್ವಾನದ ದಸರಾ ಆಗಲು ಕಾರಣ'' ಎಂದು ಸ್ವಪಕ್ಷದವರ ವಿರುದ್ಧವೇ ದೂರಿದರು.
ಮೈಸೂರು ದಸರಾ; ಆನೆಗಳಿಗೆ ಬೀಳ್ಕೊಡುಗೆ, ಲಾರಿ ಹತ್ತಲು ಶ್ರೀರಾಮ ನಕಾರ

ಯುವ ದಸರಾಗೆ ದುಂದುವೆಚ್ಚ
'' ನಾನು ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಆಗಿದ್ದೇನೆ. ನನಗೆ ದಸರಾ ಮಾಡಿದ ಅನುಭವ ಇತ್ತು. ನನ್ನ ಬಳಿ ಅವರು ಯಾವ ಸಲಹೆಯನ್ನು ಕೇಳಲಿಲ್ಲ. ದಸರಾ ಕವಿಗೋಷ್ಠಿಯಲ್ಲಿ ಸತ್ತವರ ಹೆಸರು ಹಾಕಿದ್ದರು. ಯುವ ದಸರಾದಲ್ಲಿ 40 ಲಕ್ಷ ರೂಪಾಯಿಗಳನ್ನು ಗಾಯಕ ಸೋನು ನಿಗಮ್ ಅವರಿಗೆ ಕೊಟ್ಟಿದ್ದಾರೆ. ಸ್ಥಳೀಯರಿಗೆ ಅವಕಾಶ ನೀಡಲಿಲ್ಲ. ಪುನೀತ್ ರಾಜ್‌ಕುಮಾರ್ ಕುಟುಂಬ ಬಂದಾಗ ಎಷ್ಟು ಜನಸಾಗರ ಬಂದಿತ್ತು. ನಟ ಯಶ್ ನಮ್ಮೂರ ಹುಡುಗ. ಅವರಿಗೇಕೆ ಅವಕಾಶ ಕೊಡಲಿಲ್ಲ? ಯುವ ದಸರಾಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ'' ಎಂದು ಹರಿಹಾಯ್ದರು.