ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಹಾ! ಘಮಘಮಿಸುವ ಸೊಪ್ಪಿನ ದೋಸೆ ಸವಿಯಲು ಮೈಸೂರಿನ ಜಿಟಿಆರ್ ಗೆ ಬನ್ನಿ

|
Google Oneindia Kannada News

ಮೈಸೂರು, ಅಕ್ಟೋಬರ್.05: ಮೈಸೂರಿನಲ್ಲಿ ಎಲ್ಲವೂ ಇದೇ. ತಿಂಡಿ, ಊಟ, ಕಣ್ಮನ ಸೆಳೆಯುವ ಪ್ರವಾಸಿತಾಣಗಳ ನೋಟ... ಇತ್ಯಾದಿ. ಅಂದಹಾಗೆ ಮೈಸೂರಿನೊಂದಿಗೆ ಥಳುಕು ಹಾಕಿಕೊಂಡಿರುವ ಹೆಸರು ಮಸಾಲೆ ದೋಸೆ. ಇಲ್ಲಿ ಬಂದು ಹೋಗುವವರು ದೋಸೆಯ ಸವಿಯನ್ನು ಟೆಸ್ಟ್ ಮಾಡದೆ ಹೋಗಲಾರರು.

ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಸ್ಥಳೀಯರು ಇಷ್ಟಪಡುವ ತಿಂಡಿ ಕೂಡ ಇದೇ. ಹೇಳೋದೆ ಆಯ್ತು...ಮೈಸೂರಿನ ಬೆಸ್ಟ್ ಮಸಾಲೆ ದೋಸೆ ಎಲ್ಲಿ ಸಿಗುತ್ತದೆ ಎಂದು ಕೇಳುತ್ತಿದ್ದೀರಾ? ಹೇಳ್ತೇವೆ ಕೇಳಿ ಬಾಯಲ್ಲಿ ನೀರೂರಿಸುವ ಗರಿಗರಿಯಾದ ಮಸಾಲೆ ದೋಸೆ ತಿನ್ನಲು ನೀವು ಬರಲೇಬೇಕಾದ ಹೋಟೆಲ್‌ ಮೈಸೂರಿನ ಗಾಯತ್ರಿ ಟಿಫಿನ್ ರೂಂ ಅರ್ಥಾತ್ ಜಿಟಿಆರ್.

ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?

ಮೈಸೂರಿನ ಚಾಮುಂಡಿಪುರಂ ಮುಖ್ಯರಸ್ತೆಯಲ್ಲಿರುವ ಗಾಯತ್ರಿ ಹೋಟೆಲ್‌ಗೆ 54 ವರುಷದ ದೀರ್ಘ ಇತಿಹಾಸವೇ ಇದೆ. ಇಲ್ಲಿನ ರುಚಿ ಹೇಗಿರುತ್ತಿತ್ತು ಎಂದರೆ 1960ರ ದಶಕದಲ್ಲಿ ಮೈಲಿಗಟ್ಟಲೆ ನಡೆದು ಬಂದು ಇಲ್ಲಿ ತಿಂಡಿ ತಿಂದು, ಕಾಫಿ ಕುಡಿದು ಹೋಗುತ್ತಿದ್ದರಂತೆ.

ಈಗ ಮೈಸೂರು ಸಾಕಷ್ಟು ಬೆಳೆದು, ಕಣ್ಣು ಹಾಯಿಸಿದ್ದಲ್ಲೆಲ್ಲಾ ಹೋಟೆಲ್‌ಗ‌ಳು ಕಾಣಸಿಕ್ಕರೂ ಜಿಟಿಆರ್ ನ ರುಚಿಗೆ ಮಾರು ಹೋಗಿರುವ ಗ್ರಾಹಕರು ನಾಲಗೆ ರುಚಿ ತಣಿಸಲು ಈ ಹೋಟೆಲ್‌ ಅನ್ನು ಹುಡುಕಿಕೊಂಡು ಬರುವುದುಂಟು. ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕೆಂದರೆ ಈ ಲೇಖನ ಓದಲೇಬೇಕು...

 ಎರಡೂ ಹೊತ್ತು ದೋಸೆ ಲಭ್ಯ

ಎರಡೂ ಹೊತ್ತು ದೋಸೆ ಲಭ್ಯ

ಜಿಟಿಆರ್ ಹೋಟೆಲ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಘಮ ಘಮ ಮಸಾಲೆ ದೋಸೆ ಲಭ್ಯ. ಇದರ ಜೊತೆಗೆ ಇಡ್ಲಿ-ಚಟ್ನಿ, ಇಡ್ಲಿ-ಸಾಂಬಾರು, ಮಂಗಳೂರು ಬಜ್ಜಿ, ಫಿಲ್ಟರ್‌ ಕಾಫಿ, ಟೀ ದೊರೆಯುತ್ತದೆ. ಮಸಾಲೆ ದೋಸೆಯೊಂದಿಗೆ ಸೊಪ್ಪಿನ ದೋಸೆ ಬಾಯಲ್ಲಿ ನೀರು ತರಿಸುತ್ತದೆ.

ಜಿಟಿಆರ್ ನ ಮತ್ತೂಂದು ವಿಶೇಷ ಅಂದರೆ ಪಾಲಕ್, ಮೆಂತ್ಯ ಹಾಗೂ ಸಬ್ಬಸಿಗೆ ಸೊಪ್ಪಿನ ಮಿಶ್ರಣದಿಂದ ತಯಾರಿಸುವ ಸೊಪ್ಪಿನ ದೋಸೆ ಪ್ರತಿ ದಿನ ಸಂಜೆ ಮಾತ್ರ ದೊರೆಯುತ್ತದೆ.

 ಕೆಲವೇ ವರ್ಷಗಳಲ್ಲಿ ಜನಪ್ರಿಯ

ಕೆಲವೇ ವರ್ಷಗಳಲ್ಲಿ ಜನಪ್ರಿಯ

1960ರಲ್ಲಿ ಉಡುಪಿಯಿಂದ ಮೈಸೂರಿಗೆ ವಲಸೆ ಬಂದ ಸುಬ್ರಾಯ ಭಟ್‌ ಅವರು ಚಾಮುಂಡಿಪುರಂನಲ್ಲಿ ಸಣ್ಣದಾಗಿ ಬ್ರಾಹ್ಮಣರ ಫ‌ಲಹಾರ ಮಂದಿರ ಹೆಸರಿನಲ್ಲಿ ಈ ಹೋಟೆಲ್‌ ಆರಂಭಿಸಿದರು. ನೆಲದ ಮೇಲೆ ಮಣೆ ಹಾಕಿ ಗ್ರಾಹಕರನ್ನು ಕೂರಿಸಿ ಬಾಳೆಎಲೆಯಲ್ಲಿ ತಿನಿಸುಗಳನ್ನು ಬಡಿಸುತ್ತಿದ್ದರು. ಗುಣಮಟ್ಟದ ಸೇವೆಗಳಿಂದಾಗಿ ಕೆಲವೇ ವರ್ಷಗಳಲ್ಲಿ ಈ ಹೋಟೆಲ್‌ ಜನಪ್ರಿಯವಾಯಿತು.

ಆ ನಂತರ ಗ್ರಾಹಕರು ಹೆಚ್ಚು ಬರತೊಡಗಿದ್ದರಿಂದ ಭಟ್ಟರು, ಈ ಕಟ್ಟಡದಲ್ಲೇ 1964ರಲ್ಲಿ ಗಾಯತ್ರಿ ಟಿಫಿನ್ ರೂಂ ಆರಂಭಿಸಿದರು. 54 ವರ್ಷಗಳಿಂದಲೂ ಹೋಟೆಲ್‌ ಜಿಟಿಆರ್, ಅದೇ ಶುಚಿ-ರುಚಿಯನ್ನು ಕಾಯ್ದುಕೊಂಡು ಗ್ರಾಹಕರನ್ನು ಸೆಳೆಯುತ್ತಿದೆ.

ಅಣ್ಣಾವ್ರು ಕೂಡ ರುಚಿ ನೋಡಿದ್ದರು ಮೈಸೂರು ಮೈಲಾರಿ ಹೋಟೆಲ್ ತಿಂಡಿಅಣ್ಣಾವ್ರು ಕೂಡ ರುಚಿ ನೋಡಿದ್ದರು ಮೈಸೂರು ಮೈಲಾರಿ ಹೋಟೆಲ್ ತಿಂಡಿ

 ಜಿಟಿಆರ್ ರೆಸ್ಟೋರೆಂಟ್

ಜಿಟಿಆರ್ ರೆಸ್ಟೋರೆಂಟ್

ಜಿಟಿಆರ್ ರೆಸ್ಟೋರೆಂಟ್ ನಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 10ಗಂಟೆವರೆಗೆ ದಕ್ಷಿಣ ಭಾರತ, ಉತ್ತರ ಭಾರತ ಶೈಲಿಯ ಊಟ, ಚೈನೀಸ್‌ ಶೈಲಿಯ ತಿನಿಸು, ಐಸ್‌ಕ್ರೀಂ ಮತ್ತು ತಂಪು ಪಾನೀಯಗಳು ದೊರೆಯುತ್ತವೆ.

ನಾಲಗೆ ಮೇಲೆ ಕರಗುವ ಚಿಬ್ಬುಲು ಇಡ್ಲಿ, ಕೆಂಪು ಚಟ್ನಿ ರುಚಿ ನೋಡಿನಾಲಗೆ ಮೇಲೆ ಕರಗುವ ಚಿಬ್ಬುಲು ಇಡ್ಲಿ, ಕೆಂಪು ಚಟ್ನಿ ರುಚಿ ನೋಡಿ

 ಸೋಮವಾರ ಈ ಹೋಟೆಲ್‌ಗೆ ರಜೆ

ಸೋಮವಾರ ಈ ಹೋಟೆಲ್‌ಗೆ ರಜೆ

ಪ್ರತಿ ಸೋಮವಾರ ಈ ಹೋಟೆಲ್‌ಗೆ ರಜೆ. ವಾರದ ಇನ್ನುಳಿದ ಆರು ದಿನಗಳ ಕಾಲ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3.30ರಿಂದ 8ಗಂಟೆವರೆಗೆ ತೆರೆದಿರುತ್ತದೆ. ಹಾಗಾದ್ರೆ ಇನ್ಯಾಕೆ ತಡ ಮೊದಲು ಈ ಜಿಟಿಆರ್ ಗೆ ತೆರಳಿ ದೋಸೆ ಟೇಸ್ಟ್ ಮಾಡಿ.

ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?

English summary
Gayatri Hotel, located at Chamundipuram Main Road, Mysore, has a long history of 54 years. Here is the Soppu dosa very famous.Read a short article about this hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X