• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ವಿಶ್ವವಿದ್ಯಾಲಯ ವಿಸಿಗೆ ಕ್ಲಾಸ್ ತೆಗೆದುಕೊಂಡ ಜಿಟಿ ದೇವೇಗೌಡ

|

ಮೈಸೂರು, ನವೆಂಬರ್.12: ಕೇಂದ್ರ ಸಚಿವ ಅನಂತಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಿಸಿದ್ದರೂ ಹಂಪಿ ವಿವಿಯಿಂದ ಪದವಿ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಉನ್ನತ ಶಿಕ್ಷಣ ಸಚಿವರು ಫುಲ್ ಗರಂ ಆಗಿದ್ದಾರೆ.

ಪರೀಕ್ಷೆ ಮುಂದೂಡುವಂತೆ ಆದೇಶ ಹೊರಡಿಸಿದ್ದರೂ ಕ್ಯಾರೇ ಎನ್ನದೆ ಪರೀಕ್ಷೆ ನಡೆಸಲು ಚಿಂತನೆ ನಡೆಸಿದ್ದರಿಂದ ಬಳ್ಳಾರಿ ವಿಶ್ವವಿದ್ಯಾನಿಲಯ ವಿಸಿಗೆ ಸಚಿವ ಜಿ.ಟಿ ದೇವೇಗೌಡ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ?

"ಪರೀಕ್ಷೆ ಮುಂದೂಡಿ ಅಂತ ಆದೇಶ ಹೊರಡಿಸಿದ್ರೂ ಪರೀಕ್ಷೆ ನಡೆಸ್ತೀನಿ ಅಂತಾ ಹೇಳ್ತೀರಾ?. ಕೇವಲ ಮೌನಾಚರಣೆ ಮಾಡಿ. ಪರೀಕ್ಷೆ ನಡೆಸಬಾರದು ಅಷ್ಟೇ" ಎಂದು ಬಳ್ಳಾರಿ ವಿವಿಯ ಪ್ರೊ. ಸುಭಾಷ್ ಅವರಿಗೆ ಸಚಿವ ಜಿಟಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ್ ನಿಧನ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಣೆ ಪ್ರಯುಕ್ತ ರಾಜ್ಯದ ಎಲ್ಲಾ ವಿವಿ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.

English summary
Hampi University decided to conduct a graduate examination today. Higher education minister GT Devegowda was angered by this decision of the university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X