• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ ಕೈತಪ್ಪಿದ್ದಕ್ಕೆ ಜಿ.ಟಿ.ದೇವೇಗೌಡ ಬೇಸರ

|
   ಸಿದ್ದರಾಮಯ್ಯನವರ ಮೇಲೆ ಜಿ ಟಿ ದೇವೇಗೌಡ ಅಸಮಾಧಾನ | Oneindia Kannada

   ಮೈಸೂರು, ನವೆಂಬರ್ 17: ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ ಕೈತಪ್ಪಿದ್ದಕ್ಕೆ ಸಚಿವ ಜಿ.ಟಿ.ದೇವೇಗೌಡ ಅವರು ಬೇಸರಗೊಂಡಿದ್ದಾರೆ.

   'ಮೈಸೂರಿನಲ್ಲಿ ನಮ್ಮದೇನೂ ನಡೆಯುವುದಿಲ್ಲ, ಎಲ್ಲಾ ಹೈಕಮಾಂಡ್ ಹೇಳಿದಂತೆಯೇ ಆಗಬೇಕು' ಎಂದು ಮಾಧ್ಯಮಗಳ ಮುಂದೆ ಅವರು ಅಸಮಾಧಾನ ಹೊರಹಾಕಿದ್ದಾರೆ.

   ಮೈಸೂರು ಮೇಯರ್ ಗಾದಿ ಬಹುತೇಕ ಕಾಂಗ್ರೆಸ್‌ ವಶ

   ಹೈಕಮಾಂಡ್ ಹೇಳಿದಂತೆ ಕೇಳಲೇಬೇಕು, ದೊಡ್ಡವರ ಮಾತಿಗೆ ತಲೆ ಬಾಗುತ್ತೇವೆ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. ಅವರ ಮಾತಿನಲ್ಲಿ ಸ್ಪಷ್ಟ ಅಸಮಾಧಾನ ಇತ್ತೆಂಬುದು ಖಾತ್ರಿ.

   ಮೇಯರ್ ಸ್ಥಾನ ಜೆಡಿಎಸ್‌ಗೆ ಬೇಕು ಎಂದು ಜಿ.ಟಿ.ದೇವೇಗೌಡ ಅವರು ಪಟ್ಟು ಹಿಡಿದಿದ್ದರು. ಅವರೊಂದಿಗೆ ಸಾ.ರಾ.ಮಹೇಶ್ ಸಹ ಮೇಯರ್ ಸ್ಥಾನ ಜೆಡಿಎಸ್‌ಗೆ ಬೇಕೆಂದು ಹಠ ತೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರು ಎಚ್‌ಡಿ.ದೇವೇಗೌಡ ಅವರೊಂದಿಗೆ ಮಾತನಾಡಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ

   ಸಿದ್ದರಾಮಯ್ಯ ಅವರ ಹಠಕ್ಕೆ ಜಯವಾಗಿರುವುದು ಜಿ.ಟಿ.ದೇವೇಗೌಡ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಎರಡು ಸಚಿವ ಸ್ಥಾನವನ್ನು ಮೈಸೂರಿನಲ್ಲಿ ಜೆಡಿಎಸ್‌ಗೆ ನೀಡಲಾಗಿದೆ ಹಾಗಾಗಿ ಮೇಯರ್ ಕಾಂಗ್ರೆಸ್‌ಗೆ ನೀಡಿರೆಂದು ಸಿದ್ದರಾಮಯ್ಯ ವಾದ ಮಂಡಿಸಿದ್ದರು.

   ಮೈಸೂರು ಮೇಯರ್ ಗಾದಿಗಾಗಿ ಸಿದ್ದು-ಜಿಟಿಡಿ ನಡುವೆ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ

   ಮೊದಲ ಹಂತದಲ್ಲಿ ಕಾಂಗ್ರೆಸ್‌ ಸದಸ್ಯರು ಮೇಯರ್ ಆಗಲಿದ್ದಾರೆ. ಎರಡನೇ ಹಂತಕ್ಕೆ ಜೆಡಿಎಸ್‌ಗೆ ಮೇಯರ್ ಪಟ್ಟ ಒಲಿಯಲಿದೆ. ಹೀಗೆ ಅಧಿಕಾರವನ್ನು ಎರಡೂ ಪಕ್ಷದವರು ಹಂಚಿಕೊಳ್ಳಲಿದ್ದಾರೆ.

   English summary
   JDS minister GT Deve Gowda unhappy with JDS highcommand for giving Mysuru mayor post to congress. He said we can not do anything we wish in Mysuru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X