ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಜಿ.ಟಿ.ದೇವೇಗೌಡ

By Manjunatha
|
Google Oneindia Kannada News

Recommended Video

ಮತ್ತೆ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಜಿ.ಟಿ.ದೇವೇಗೌಡ | Oneindia Kannada

ಮೈಸೂರು, ಜುಲೈ 28: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್‌ನ ಉನ್ನತ ಶಿಕ್ಷಣ ಮಂತ್ರಿ ಜಿ.ಟಿ.ದೇವೇಗೌಡ ಬಗಲ ಮುಳ್ಳಾಗಿ ಕಾಡುತ್ತಿದ್ದಾರೆ.

ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಹೀನಾಯವಾಗಿ ಸೋಲಿಸಿ ರಾಜಕೀಯದಲ್ಲಿ ಅವರ ಪ್ರಭಾವ ಕಡಿಮೆ ಮಾಡಿರುವ ಜಿ.ಟಿ.ದೇವೇಗೌಡ ಅವರು ಮಂತ್ರಿಯಾದ ಮೇಲೆ ಸಹ ಸಿದ್ದರಾಮಯ್ಯ ಅವರನ್ನು ಕಾಡುತ್ತಿದ್ದಾರೆ.

ಮೈಸೂರು: ಸಿದ್ದರಾಮಯ್ಯ ಮಾತನ್ನು ಮೀರಿದ ಸಚಿವ ಜಿ.ಟಿ. ದೇವೇಗೌಡಮೈಸೂರು: ಸಿದ್ದರಾಮಯ್ಯ ಮಾತನ್ನು ಮೀರಿದ ಸಚಿವ ಜಿ.ಟಿ. ದೇವೇಗೌಡ

ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ನೇಮಕವಾಗಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಜಿಟಿಡಿ ಈಗ ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದು, ಸಿದ್ದರಾಮಯ್ಯ ಅವರು ಅನರ್ಹರನ್ನು ವಿವಿಗಳ ಸಿಂಡಿಕೇಟ್‌ಗೆ ನೇಮ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

ತಮಗೆ ಬೇಕಾದವರನ್ನು ಆರಿಸಿದ್ದ ಸಿದ್ದರಾಮಯ್ಯ!

ತಮಗೆ ಬೇಕಾದವರನ್ನು ಆರಿಸಿದ್ದ ಸಿದ್ದರಾಮಯ್ಯ!

ಬಿಜೆಪಿ ಅವಧಿಯಲ್ಲಿ ವಿಶ್ವವಿದ್ಯಾಲಯಗಳಿಗೆ ನೇಮಿಸಲಾಗಿದ್ದ ಸಿಂಡಿಕೇಟ್‌ಗಳನ್ನು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ರದ್ದು ಮಾಡಿ ಹೊಸಬರನ್ನು ನೇಮಿಸಿದರು. ಶಿಕ್ಷಣ ಕ್ಷೇತ್ರದ ತಜ್ಞರನ್ನು ಮಾತ್ರವೇ ಸಿಂಡಿಕೇಟ್‌ಗೆ ನೇಮಿಸಬೇಕು ಎಂಬ ನಿಯಮ ಇದೆ ಆದರೆ ಸಿದ್ದರಾಮಯ್ಯ ಇದನ್ನು ಪಾಲಿಸಿಲ್ಲ' ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ಚಾಮುಂಡೇಶ್ವರಿ ಜನತೆಗೆ ಕೃತಜ್ಞತೆ ಸಲ್ಲಿಸಲಿರುವ ಜಿಟಿಡಿ: ಕಾರ್ಯಕರ್ತರಿಗೆ ಭರ್ಜರಿ ಬಾಡೂಟಚಾಮುಂಡೇಶ್ವರಿ ಜನತೆಗೆ ಕೃತಜ್ಞತೆ ಸಲ್ಲಿಸಲಿರುವ ಜಿಟಿಡಿ: ಕಾರ್ಯಕರ್ತರಿಗೆ ಭರ್ಜರಿ ಬಾಡೂಟ

ಮುಂಚೆಯೇ ಪತ್ರ ಬರೆದಿದ್ದ ಸಿದ್ದರಾಮಯ್ಯ

ಮುಂಚೆಯೇ ಪತ್ರ ಬರೆದಿದ್ದ ಸಿದ್ದರಾಮಯ್ಯ

ತಮ್ಮ ಅವಧಿಯಲ್ಲಿ ನೇಮಕವಾದ ಸದಸ್ಯರನ್ನು ನೇಮಕಾತಿ ರದ್ದು ಮಾಡಲಾಗುತ್ತದೆ ಎಂಬುದನ್ನು ಅರಿತಿದ್ದ ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ತಮ್ಮ ಅವಧಿಯಲ್ಲಿ ನೇಮಕವಾದ ಸದಸ್ಯರನ್ನು ರದ್ದು ಮಾಡದಂತೆ ಮನವಿ ಮಾಡಿದ್ದರು. ಆದರೂ ಸಹ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಅವಧಿಯ ನಾಮನಿರ್ದೇಶಿತ ಸದಸ್ಯರನ್ನು ಸದಸ್ಯತ್ವ ರದ್ದು ಮಾಡಿದ್ದಾರೆ.

ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಕೊನೆಯ ಬೆಂಚ್‌ನಲ್ಲಿ, ಯಾಕೆ ಗೊತ್ತಾ?ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಕೊನೆಯ ಬೆಂಚ್‌ನಲ್ಲಿ, ಯಾಕೆ ಗೊತ್ತಾ?

ಸಿದ್ದರಾಮಯ್ಯ ಪತ್ರದ ಬಗ್ಗೆ ವ್ಯಂಗ್ಯ

ಸಿದ್ದರಾಮಯ್ಯ ಪತ್ರದ ಬಗ್ಗೆ ವ್ಯಂಗ್ಯ

ಸಿದ್ದರಾಮಯ್ಯ ಅವರ ಪತ್ರಕ್ಕೆ ವ್ಯಂಗ್ಯದಿಂದ ಪ್ರತಿಕ್ರಿಯಿಸಿರುವ ಜಿ.ಟಿ.ದೇವೇಗೌಡ ಅವರು, ಸರ್ಕಾರ ಬದಲಾದಂತೆ ನಾಮನಿರ್ದೇಶಿತ ಸದಸ್ಯರೂ ಬದಲಾಗುತ್ತಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೆ ಎಂದು ವ್ಯಂಗ್ಯವಾಡಿದ್ದಾರೆ. ದೇವೇಗೌಡ ಅವರು ಸಿದ್ದರಾಮಯ್ಯ ಅವಧಿಯಲ್ಲಿ ನೇಮಕವಾದ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಕೂಡಾ.

ಸಮನ್ವಯ ಸಮಿತಿ ಒಪ್ಪಿಗೆ ಇಲ್ಲ

ಸಮನ್ವಯ ಸಮಿತಿ ಒಪ್ಪಿಗೆ ಇಲ್ಲ

ಯಾವುದೇ ನಾಮನಿರ್ದೇಶಿತ ಸದಸ್ಯರನ್ನು ಬದಲಾಯಿಸುವ ಮುನ್ನಾ ಸಮನ್ವಯ ಸಮಿತಿಯ ಒಪ್ಪಿಗೆ ಪಡೆಯಬೇಕು ಎಂದು ಒಡಂಬಡಿಕೆ ಆಗಿದೆ. ಆದರೆ ಜಿ.ಟಿ.ಡಿ ಅವರು ಸಮನ್ವಯ ಸಮಿತಿಯ ಸಲಹೆ ಪಡೆಯದೇ ಸದಸ್ಯರನ್ನು ಬದಲಾಯಿಸಿದ್ದಾರೆ ಹಾಗಾಗಿ ಮುಂದೆ ನಡೆಯುವ ಸಮಿತಿಯ ಸಭೆಯಲ್ಲಿ ಸಿದ್ದರಾಮಯ್ಯ ಅವರು ಈ ವಿಷಯ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಯಾವ ಯಾವ ವಿವಿಗಳಲ್ಲಿ ಬದಲಾವಣೆ

ಯಾವ ಯಾವ ವಿವಿಗಳಲ್ಲಿ ಬದಲಾವಣೆ

ಬೆಂಗಳೂರು ವಿವಿ, ಗುಲ್ಬರ್ಗ, ಮಂಗಳೂರು, ತುಮಕೂರು, ದಾವಣಗೆರೆ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ರಾಣಿ ಚೆನ್ನಮ್ಮ, ಕುವೆಂಪು ವಿವಿ, ಮಹಿಳಾ ವಿವಿ, ಕರ್ನಾಟಕ ವಿವಿಗಳಿಗೆ ನೇಮಿಸಲಾಗಿದ್ದ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಸದಸ್ಯತ್ವವನ್ನು ರದ್ದು ಮಾಡಿಲಾಗಿದೆ. ಜನಪದ ವಿವಿ, ಕನ್ನಡ ವಿವಿ, ಮುಕ್ತ ವಿವಿ, ವಿಟಿಯು ಆಡಳಿತ ಮಂಡಳಿಗೆ ನೇಮಿಸಲಾಗಿದ್ದ ಆಮನಿರ್ದೇಶಕ ಸದಸ್ಯರ ನೇಮಕಾತಿಯನ್ನೂ ರದ್ದು ಮಾಡಲಾಗಿದೆ.

English summary
Higher education Minister GT Deve Gowda canceled nominee members membership of universities Syndicate who were all appointed in Siddaramaiah's administration period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X