ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಮೈಸೂರಿನ ವಾಹನ ಸವಾರರ ಗಮನಕ್ಕೆ

ಮೈಸೂರು, ಆಗಸ್ಟ್ 29; ಕರ್ನಾಟಕದ ಕಾಂಗ್ರೆಸ್‌ ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಗೆ ಆಗಸ್ಟ್ 30ರ ಬುಧವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮಿ ಯೋಜನೆಯ ಚಾಲನೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ಮೈಸೂರು ನಗರ ಪೊಲೀಸರು ವಾಹನಗಳ ಸಂಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದ್ದಾರೆ. ಬಿ. ರಮೇಶ್ ಪೊಲೀಸ್ ಆಯುಕ್ತರು, ಮೈಸೂರು ನಗರ ನಗರದ ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 115 ಹಾಗೂ ಸೆಕ್ಷನ್(3) ಆಫ್ ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಕಾಯ್ದೆ 1960 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದ್ದಾರೆ.

Gruhalakshmi Scheme Inaugural Event On August 30 Traffic Diversion In Mysuru

ಗೃಹಲಕ್ಷ್ಮಿ ಯೋಜನೆಯ ಚಾಲನೆ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಫಲಾನುಭವಿಗಳು ಬಸ್‌ಗಳಲ್ಲಿ ಆಗಮಿಸಲಿದ್ದು, ಕಾರ್ಯಕ್ರಮದ ಸುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಆದ್ದರಿಂದ ವಾಹನಗಳ ಸುಗಮ ಸಂಚಾರಕ್ಕಾಗಿ ಮಹಾರಾಜ ಕಾಲೇಜು ಮೈದಾನದ ಸುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ಮತ್ತು ವಾಹನಗಳ ನಿಲುಗಡೆಗೆ ನಿರ್ಬಂಧವನ್ನು ಹೇರಲಾಗಿದೆ.

ದಿನಾಂಕ 30/8/2023ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಬೇಕಾದ ಮಾರ್ಗ. ಹುಣಸೂರು ಮಾರ್ಗದಿಂದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾರ್ಗ. ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ನಗರಕ್ಕೆ ಬರುವ ಬಸ್‌ಗಳು ಹಿನಕಲ್ ಫ್ಲೈ ಓವರ್ ಜಂಕ್ಷನ್- ಎಡತಿರುವು- ರಿಂಗ್ ರಸ್ತೆ- ರಾಯಲ್ ಇನ್ ಜಂಕ್ಷನ್ ಬಲ ತಿರುವು- ಕೆ.ಆರ್.ಎಸ್. ರಸ್ತೆ- ವಿ.ವಿ.ಪುರಂ ವೃತ್ತ- ಆಕಾಶವಾಣಿ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಮೆಟ್ರೋಪೋಲ್ ವೃತ್ತ- ಮೂಡಾ ವೃತ್ತ ಎಡ ತಿರುವು- ರಮಾವಿಲಾಸ ರಸ್ತೆ- ಬನುಮಯ್ಯ ಜಂಕ್ಷನ್- ಬಲ ತಿರುವು- ಬಿ.ರಾಚಯ್ಯ ವೃತ್ತ ಎಡ ತಿರುವು- ಪುರಂದರ ರಸ್ತೆ- ಕುಸ್ತಿ ಅಖಾಡ ಜಂಕ್ಷನ್- ಹಾರ್ಡಿಂಜ್ ವೃತ್ತ- ಮೂಲಕ ಬಸ್ ನಿಲ್ದಾಣ ತಲುಪುವುದು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹುಣಸೂರು ರಸ್ತೆಗೆ ಮಾರ್ಗ. ಬಸ್‌ಗಳು ಬಸ್ ನಿಲ್ದಾಣದ ಬಳಿ ಎಡ ತಿರುವು ಪಡೆದು ಇರ್ವಿನ್ ರಸ್ತೆ- ನೆಹರು ವೃತ್ತ- ಆಯುರ್ವೇದಿಕ್ ವೃತ್ತ- ರೈಲ್ವೇ ನಿಲ್ದಾಣ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಕೆ.ಆರ್.ಎಸ್ ರಸ್ತೆ- ವಿ.ವಿ.ಪುರಂ ವೃತ್ತ- ರಾಯಲ್ ಇನ್ ಜಂಕ್ಷನ್- ಎಡ ತಿರುವು- ರಿಂಗ್ ರಸ್ತೆ- ಹಿನಕಲ್ ಫ್ಲೈ ಓವರ್ ಜಂಕ್ಷನ್- ಬಲ ತಿರುವು ಪಡೆದು ಹುಣಸೂರು ರಸ್ತೆಯಲ್ಲಿ ಮುಂದುವರೆಯುವುದು.

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರು ರಸ್ತೆಗೆ ಮಾರ್ಗ: ಬಸ್‌ಗಳು ಬಸ್ ನಿಲ್ದಾಣದ ಬಳಿ ಎಡ ತಿರುವು- ಫೈವ್ ಲೈಟ್ ವೃತ್ತ- ಡಾ. ರಾಜಕುಮಾರ್ ವೃತ್ತ ಟಿಪ್ಪು ವೃತ್ತ ಬಲ ತಿರುವು- ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್- ಕೆಂಪೇಗೌಡ ಜಂಕ್ಷನ್ ಮೂಲಕ ಮುಂದುವರೆಯುವುದು.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆಗಳು

* ಡಿ.ಸಿ ಕಛೇರಿ ಆರ್ಚ್ ಗೇಟ್ ಜಂಕ್ಷನ್‌ನಿಂದ ಕೋರ್ಟ್ ಜಂಕ್ಷನ್‌ವರೆಗಿನ ಕೆ.ಆರ್.ಬಿ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ಸೇಂಟ್ ಜೋಸೆಫ್ ಜಂಕ್ಷನ್‌ನಿಂದ ಮೆಟ್ರೋಪೋಲ್ ವೃತ್ತದವರೆಗಿನ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ಮೂಡಾ ಜಂಕ್ಷನ್‌ನಿಂದ ವಿ.ಎಂ.ಡಿ ಜಂಕ್ಷನ್ ವರೆಗೆ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ರೋಟರಿ ಜಂಕ್ಷನ್ ನಿಂದ ಕೆ.ಆರ್.ಬಿ ರಸ್ತೆ ಜಂಕ್ಷನ್ ವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ಜೆ.ಎಲ್.ಬಿ ಜಂಕ್ಷನ್‌ನಿಂದ ಕೆ.ಆರ್.ಬಿ ರಸ್ತೆ ಜಂಕ್ಷನ್ ವರೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳನ್ನು ಹೊರತುಪಡಿಸಿ)

* ರಾಮಸ್ವಾಮಿ ವೃತ್ತದಿಂದ ಅಗ್ನಿಶಾಮಕ ಠಾಣೆ ಜಂಕ್ಷನ್ ವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ಕಲಾಮಂದಿರ ಜಂಕ್ಷನ್‌ನಿಂದ ರೈಲ್ವೆ ಗೇಟ್ ಜಂಕ್ಷನ್‌ವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ಡಾ, ಪದ್ಮ ವೃತ್ತದಿಂದ ಚಂದ್ರಮೌಳೇಶ್ವರ ದೇವಸ್ಥಾನ ಜಂಕ್ಷನ್ ವರೆಗಿನ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ಸರಸ್ವತಿಪುರಂ 5ನೇ ಕ್ರಾಸ್ ಜಂಕ್ಷನ್‌ನಿಂದ (ಟಿ.ಟಿ.ಎಲ್ ಕಾಲೇಜು ಜಂಕ್ಷನ್) ಬೇಕ್ ಪಾಯಿಂಟ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ರಮ್ಯ ಹೋಟೆಲ್ ಜಂಕ್ಷನ್‌ನಿಂದ ಕುಕ್ಕರಹಳ್ಳಿ ಗ್ರಾಮ ಅರಳಿಕಟ್ಟೆ ಜಂಕ್ಷನ್ ವರೆಗಿನ ಸ್ವಿಮಿಂಗ್ ಫೂಲ್ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. (ಕಾರ್ಯಕ್ರಮಕ್ಕೆ ಆಗಮಿಸುವ ಸರ್ಕಾರಿ ಬಸ್‌ಗಳನ್ನು ಹೊರತುಪಡಿಸಿ)

* ವಿಜಯ ಬ್ಯಾಂಕ್ ವೃತ್ತದಿಂದ ವಿ.ಎಂ.ಡಿ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.

ಬದಲಿ ಮಾರ್ಗಗಳು

* ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಸೇಂಟ್ ಜೋಸೆಫ್‌ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಟೆಂಪಲ್ ರಸ್ತೆ- ಬಿ.ಸಿ ಅಂಗಯ್ಯ ವೃತ್ತ- ಕೆ.ಆರ್.ಎಸ್ ರಸ್ತೆ ಮೂಲಕ ಮುಂದೆ ಸಾಗುವುದು.

* ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಚದುರಂಗ ವೃತ್ತದ ಬಳಿ ಬಲ ತಿರುವು ಪಡೆದು ಚದರಂಗ ರಸ್ತೆ ಮೂಲಕ ಮುಂದೆ ಸಾಗುವುದು.

* ಚಾಮರಾಜ ಜೋಡಿ ರಸ್ತೆಯಿಂದ ಆಗಮಿಸುವ ವಾಹನಗಳು ಆರ್.ಟಿ.ಓ ವೃತ್ತದ ಮೂಲಕ ಮುಂದೆ ಸಾಗುವುದು

* ಜೆ.ಎಲ್.ಬಿ ರಸ್ತೆಯಿಂದ ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ್ತ- ಕೆ.ಆರ್.ಎಸ್ ರಸ್ತೆ- ವಿ.ವಿ.ಪುರಂ ವೃತ್ತದ ಮೂಲಕ ಮುಂದೆ ಸಾಗುವುದು

* ಬೋಗಾದಿ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ವಿ.ಎಂ.ಡಿ ಜಂಕ್ಷನ್ ಬಳ ಬಲ ತಿರುವು ಪಡೆದು ಮುಂದೆ ಸಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+