ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ನಡುವೆ 2 ಹೊಸ ಮೆಮು ರೈಲಿಗೆ ಗ್ರೀನ್ ಸಿಗ್ನಲ್

|
Google Oneindia Kannada News

Recommended Video

ಬೆಂಗಳೂರು-ಮೈಸೂರು ನಡುವೆ 2 ಹೊಸ ಮೆಮು ರೈಲಿಗೆ ಗ್ರೀನ್ ಸಿಗ್ನಲ್ | Oneindia Kannada

ಮೈಸೂರು, ಆಗಸ್ಟ್ 29: ರೈಲ್ವೆ ಇಲಾಖೆ ಬೆಂಗಳೂರು - ಮೈಸೂರು ನಡುವೆ ಬೆಳಿಗ್ಗೆ, ಮಧ್ಯಾಹ್ನ ಸಂಚರಿಸುತ್ತಿದ್ದ ಪುಷ್ಪುಲ್ ರೈಲನ್ನು ರದ್ದುಗೊಳಿಸಿ ಮೆಮು ರೈಲನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರಲ್ಲಿ ಸಂತಸ ವ್ಯಕ್ತವಾಗಿದೆ.

ಪ್ರೇಮಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಭಾರತೀಯ ರೈಲ್ವೆ!ಪ್ರೇಮಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಭಾರತೀಯ ರೈಲ್ವೆ!

ಈ ಹಿಂದೆ ಇದ್ದ ಪುಷ್ಪುಲ್ ರೈಲುಗಳಲ್ಲಿ ಇದ್ದ 16 ಬೋಗಿಗಳಲ್ಲಿ 1700ರಷ್ಟು ಪ್ರಯಾಣಿಕರು ಸಂಚರಿಸಬಹುದಾಗಿತ್ತು. ಅಲ್ಲದೇ ಈ ರೈಲಿನಲ್ಲಿ ಬೆಂಗಳೂರು ಸಮೀಪಿಸಿದಂತೆ ಮಂಡ್ಯ, ರಾಮನಗರ, ಚನ್ನಪಟ್ಟಣ ರೈಲ್ವೆ ನಿಲ್ದಾಣಗಳಲ್ಲಿ ರೈಲು ಹತ್ತಲೂ ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಜನಸಂದಣಿಯಿಂದ ರೈಲು ತುಂಬಿರುತ್ತಿತ್ತು. ಆದರೆ ಮೆಮು ರೈಲಿನಲ್ಲಿ ವಿಶೇಷ ವಿನ್ಯಾಸದ ಬೋಗಿಗಳಿಂದಾಗಿ ಏಕಕಾಲಕ್ಕೆ 6 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಬಹುದಾಗಿದೆ.

Green signal for Bangalore-Mysuru two new MEMU train

ಬೆಳಿಗ್ಗೆ 6.10ಕ್ಕೆ ಮೈಸೂರಿನಿಂದ ಹೊರಡುವ, ಸಂಜೆ 7.30ಕ್ಕೆ ಬೆಂಗಳೂರಿನಿಂದ ಇಲ್ಲಿಗೆ ಬರುವ ಮೆಮೊ ರೈಲು ಉದ್ಯೋಗಿಗಳಿಗೆ, ಕಾರ್ಮಿಕರಿಗೆ ವರದಾನವಾಗಿದೆ. ಅದರೊಟ್ಟಿಗೆ ಬೆಳಿಗ್ಗೆ 9.15ಕ್ಕೆ ಬೆಂಗಳೂರು ಬಿಡುವ, ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ ರಾಜಧಾನಿಗೆ ತೆರಳುವ ಮೆಮು ರೈಲು ಪ್ರಯಾಣಿಕಸ್ನೇಹಿಯಾಗಿದೆ. ಕೇವಲ 30 ರೂಪಾಯಿಯಲ್ಲಿ ಬೆಂಗಳೂರು-ಮೈಸೂರಿಗೆ ಸಂಚರಿಸಬಹುದಾಗಿದೆ.

English summary
Railway Department has canceled the Push Pull train which runs between Bangalore and Mysuru in the morning and afternoon. They added that time two new MEMU trains. This makes the passenger's happy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X