ವೈರಲ್ ವಿಡಿಯೋ: ಮೈಸೂರಿನಲ್ಲಿ ಹಾಡಹಗಲೇ ಗ್ಯಾಂಗ್ ವಾರ್

ಮೈಸೂರು, ಜುಲೈ.25: ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಗ್ಯಾಂಗ್ ವಾರ್ ನಡೆದಿದ್ದು, ಮೈಸೂರಿನ ಜನರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯನ್ನು ನೋಡಿದ ಜನತೆ ಪುಂಡರಿಗೆ ಖಾಕಿ ಭಯವೇ ಇಲ್ಲವೇ ಎಂದು ಪ್ರಶ್ನಿಸುತ್ತಿದೆ.

ಹಾಕಿ ಸ್ಟಿಕ್, ವೀಕೆಟ್ ಸೇರಿದಂತೆ ಮಾರಕ ಅಸ್ತ್ರಗಳಿಂದ ಆಟೋದಲ್ಲಿ ಕುಳಿತಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ್ದು, ನೋಡ ನೋಡುತ್ತಿದ್ದಂತೆ ಹಲ್ಲೆ ಮಾಡಿ, ಪುಂಡರು ಎಸ್ಕೇಪ್ ಆಗಿದ್ದಾರೆ.

ಪುಂಡರು ಹಲ್ಲೆ ಮಾಡಿ ಎಸ್ಕೇಪ್ ಆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದ ಸ್ಥಳೀಯರು ಕಾನೂನು ಸುವ್ಯವಸ್ಥೆ ಹದಗೆಟ್ಟಿತಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Gang War was held in Laxmipuram police station limits in Mysuru

ಬೇರೆಡೆಯಿಂದ ಬಂದು ಲಕ್ಷ್ಮೀಪುರಂ ಏರಿಯಾಗೆ ನುಗ್ಗಿದ ಪುಂಡರು ಹಲ್ಲೆ ಮಾಡಿ ಎಸ್ಕೇಪ್ ಆಗಿರುವುದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

ಹಲ್ಲೆ ಮಾಡಿದ್ದು ಯಾರು? ಹಲ್ಲೆಗೊಳಗಾದ ವ್ಯಕ್ತಿ ಏನಾದ? ಮುಂತಾದ ಮಾಹಿತಿ ಸದ್ಯದಲ್ಲೇ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+