ಪ್ರವಾಹ ಪೀಡಿತರಿಗೆ ಗಣಪತಿ ಸಚ್ಚಿದಾನಂದ ಆಶ್ರಮದಿಂದ 10 ಲಕ್ಷ ದೇಣಿಗೆ
ಮೈಸೂರು, ಆಗಸ್ಟ್ 24 : ಕೊಡಗು ಪ್ರವಾಹ ಪೀಡಿತರ ನೆರವಿಗೆ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಲಾಯಿತು.
ಗಣಪತಿ ಸಚ್ಚಿದಾನಂದ ಅವಧೂತ ದತ್ತ ಪೀಠ ಟ್ರಸ್ಟ್ ನಿಂದ 5 ಲಕ್ಷ ರೂ. ಮತ್ತು ಮಂಗಳಾರತಿ, ಪೂಜೆಗಳಿಂದ ಸಂಗ್ರಹವಾದ 5 ಲಕ್ಷ ರೂ. ಸೇರಿ ಒಟ್ಟು 10 ಲಕ್ಷ ರೂ.ಗಳನ್ನು ನೀಡಲಾಗಿದೆ.
ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರಿಗೆ ಪರಿಹಾರದ ಚೆಕ್ ನೀಡಿದರು. ಈ ವೇಳೆ ಮಾತನಾಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಭೂಮಿ ಅಪಾಯದಲ್ಲಿದೆ.

ಭೂಕಂಪ, ಸುನಾಮಿ, ಪ್ರವಾಹ, ಅತಿವೃಷ್ಟಿಗಳಿಂದ ಮನುಕುಲ ತತ್ತರಿಸುತ್ತಿದೆ. ಕೊಡಗಿನಲ್ಲಿ ಅತಿವೃಷ್ಟಿಗೆ ಅಪಾರ ಬೆಳೆನಷ್ಟ, ಪ್ರಾಣ ನಷ್ಟವಾಗಿದೆ. ಎಲ್ಲಾ ನಾಗರಿಕರು ಕೊಡಗಿನ ಜನತೆಯ ಪರವಾಗಿ ನಿಲ್ಲುವುದು ಅವಶ್ಯವಾಗಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಕೊಡಗು ಜಿಲ್ಲೆ ಮೊದಲಿನಂತೆ ಸಮೃದ್ಧಿಯಾಗಿ ಬೆಳೆಯಲಿ. ಕೊಡಗಿನ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವುದು ಭಾತೃತ್ವದ ಸಂಕೇತವನ್ನು ಸಾರುತ್ತಿದೆ ಎಂದರು.












Click it and Unblock the Notifications