ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಸಾದದ ಬದಲು ಭಕ್ತರಿಗೆ ಮಾಸ್ಕ್ ನೀಡಿದ ಸಚ್ಚಿದಾನಂದ ಶ್ರೀ

|
Google Oneindia Kannada News

ಮೈಸೂರು, ಮಾರ್ಚ್ 18: ಕೊರೊನಾ ವೈರಸ್‌ ಭೀತಿಯಿಂದ ಜನರು ದೇವಸ್ಥಾನದ ಪ್ರಸಾದ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಬಂದಿದೆ. ಜನರಿಗೆ ಪ್ರಸಾದಕ್ಕಿಂತ ಕೊರೊನಾ ತಡೆಯಲು ಬೇಕಾದ ಮಾಸ್ಕ್ ಅಗತ್ಯವಾಗಿದೆ ಎಂದು, ಮೈಸೂರಿನ ಶ್ರೀಗಳೊಬ್ಬರು ಮಾಸ್ಕ್ ನೀಡುತ್ತಿದ್ದಾರೆ.

ಮೈಸೂರಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಶ್ರೀಗಳು ಭಕ್ತಾಧಿಗಳಿಗೆ ಪ್ರಸಾದದ ಬದಲಿಗೆ ಮಾಸ್ಕ್ ನೀಡುತ್ತಿದ್ದಾರೆ. ಈ ರೀತಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ಮುಂಜಾಗ್ರತೆ ವಹಿಸುವಂತೆ ತಿಳಿಸುತ್ತಿದ್ದಾರೆ. ನೂರಾರೂ ಸಂಖ್ಯೆಯ ಭಕ್ತಾದಿಗಳು ಸಾಲಿನಲ್ಲಿ ನಿಂತು ಮಾಸ್ಕ್ ಪಡೆಯುತ್ತಿದ್ದಾರೆ.

ಕಲಬುರಗಿ; ಬೆಂಗಳೂರು, ಹೊರ ರಾಜ್ಯಕ್ಕೆ ಖಾಸಗಿ ಬಸ್ ಇಲ್ಲಕಲಬುರಗಿ; ಬೆಂಗಳೂರು, ಹೊರ ರಾಜ್ಯಕ್ಕೆ ಖಾಸಗಿ ಬಸ್ ಇಲ್ಲ

ತಾವೇ ಮಾಸ್ಕ್ ಧರಿಸಿ ಬಂದ ಭಕ್ತಾಧಿಗಳಿಗೆ ತಮ್ಮ ಕೈಯಾರೆ ಮಾಸ್ಕ್ ನೀಡಿ, ಆಶೀರ್ವಾದ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಹಕ್ಕಿ ಜ್ವರವೂ ಶುರು ಆಗಿದ್ದು, ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕೊರೊನಾ ದಿಂದ ಭಯಪಟ್ಟು ತಮ್ಮ ಬಳಿ ಬರುವ ಭಕ್ತಾಧಿಗಳಿಗೆ ಅವರ ಬಗ್ಗೆ ಸರಿಯಾದ ಮಾಹಿತಿ ನೀಡಲಾಗುತ್ತಿದೆ. ಶ್ರೀಗಳ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮೆಚ್ಚಿಗೆ ಸೂಚಿಸಿದ್ದಾರೆ.

Ganapathi Sachchidananda Swamiji Distributing Mask To His Devotees

ಪಟ್ಟಣಗಳು ಖಾಲಿ ಖಾಲಿ.. ಯುವಕರನ್ನು ಹಳ್ಳಿಗೆ ಕರೆತಂದ ಕೊರೊನಾಪಟ್ಟಣಗಳು ಖಾಲಿ ಖಾಲಿ.. ಯುವಕರನ್ನು ಹಳ್ಳಿಗೆ ಕರೆತಂದ ಕೊರೊನಾ

ಅಂದಹಾಗೆ, ಕರ್ನಾಟಕದಲ್ಲಿ ಈಗಾಗಲೇ 13 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ಇಂದು 2 ಪ್ರಕರಣಗಳು ಬೆಳಕಿಗೆ ಬಂದಿದೆ. ಕಲಬುರ್ಗಿಯ ವೃದ್ಧ ಕೊರೊನಾದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದೆ. ಹೀಗಾಗಿ, ಈ ತಿಂಗಳ 31ರ ವರೆಗೆ ಕರ್ನಾಟಕ ಬಂದ್ ವಿಸ್ತಾರಣೆ ಮಾಡಲಾಗಿದೆ.

English summary
Coronavirus in Karnataka: Mysore Ganapathi Sachchidananda Swamiji distributing mask to his devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X