ಮೈಸೂರು ಮಹಾನಗರ ಪಾಲಿಕೆ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಉಚಿತ

ಮೈಸೂರು, ನವೆಂಬರ್ 28 : ವಾಹನ ಮಾಲೀಕರಿಗೊಂದು ಸಂತಸದ ಸುದ್ದಿ. ಇನ್ನು ಮುಂದೆ ನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

ವಾಹನ ನಿಲುಗಡೆ ಪೂರ್ಣ ಉಚಿತವಾಗಿರಲಿದೆ. ಇಂತಹ ಮಹತ್ತರವಾದ ನಿರ್ಣಯವೊಂದನ್ನು ಮಹಾನಗರ ಪಾಲಿಕೆ ತೆಗೆದುಕೊಂಡಿದ್ದು, ನಿಯಮ ಮೀರಿದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ.

Free parking space at MCC commercial buildings

ನಗರಪಾಲಿಕೆಯ ನವೀಕೃತ ಸಭಾಂಗಣದಲ್ಲಿ ನಡೆದ ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿನ ಸ್ಥಾಯಿ ಸಮಿತಿ ಸಭೆಯಲ್ಲಿ ಇಂಥದೊಂದು ನಿರ್ಣಯ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಯಾವುದೇ ವಾಣಿಜ್ಯ ಕಟ್ಟಡ, ನೆಲಮಹಡಿಯಲ್ಲಿ ಉಚಿತವಾಗಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕಿದೆ.

Recommended Video

      ಹಸಿರು ಉಳಿಸುತ್ತಿರೋ ಹೆಚ್.ಎಸ್.ಆರ್ ಮಂದಿ | Oneindia Kannada

      ನಗರ ವ್ಯಾಪ್ತಿಯ ಮಾಲ್‍ಗಳು, ಚಿತ್ರಮಂದಿರಗಳು, ಬಾರ್ ಅಂಡ್ ರೆಸ್ಟೋರೆಂಟ್ ಗಳು, ಅಪಾರ್ಟ್ ಮೆಂಟ್ ಗಳು, ಸರ್ಕಾರಿ ಕಟ್ಟಡಗಳು, ಬಸ್ ನಿಲ್ದಾಣಗಳು, ಲಾಡ್ಜ್ ಗಳು, ಹೋಟೆಲ್‍ಗಳು ಹಾಗೂ ಇನ್ನಿತರ ವ್ಯಾಪಾರಿ ಹಾಗೂ ವಾಣಿಜ್ಯ ಮಳಿಗೆಗಳ ನೆಲ ಮಹಡಿಗಳಲ್ಲಿ ಇನ್ನು ಮುಂದೆ ವಾಹನ ನಿಲುಗಡೆಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ನಗರಪಾಲಿಕೆ ನಿರ್ಣಯ ಕೈಗೊಂಡಿದೆ.

      ಸಮಿತಿ ಅಧ್ಯಕ್ಷ ಎಚ್.ಎಸ್.ನಂದೀಶ್ ಪ್ರೀತಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಯಿತು. ಪಾಲಿಕೆಯ ನಿಯಮ ಮೀರಿ ವಾಹನ ನಿಲುಗಡೆ ಶುಲ್ಕ ವಿಧಿಸಿದಲ್ಲಿ ಕಠಿಣ ಕ್ರಮ ಜರುಗಿಸುವುದಕ್ಕೂ ಒಪ್ಪಿಗೆ ಸೂಚಿಸಲಾಯಿತು.

      Free parking space at MCC commercial buildings

      ಕಾರಣವೇನು..?:
      ನಗರಪಾಲಿಕೆ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣದ ವೇಳೆ ನೆಲ ಮಹಡಿಯನ್ನು ವಾಹನ ನಿಲುಗಡೆ ಪ್ರದೇಶ ಎಂದು ನಕ್ಷೆಯಲ್ಲಿ ನಮೂದಿಸಿ ಅನುಮತಿ ಪಡೆದುಕೊಳ್ಳಲಾಗುತ್ತಿದೆ. ಆದರೆ, ನಂತರದ ದಿನಗಳಲ್ಲಿ ಕೆಳ ಮಹಡಿಯನ್ನು ವಾಹನ ನಿಲುಗಡೆಗೆ ಬದಲಾಗಿ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುವ ಮೂಲಕ ಮಾಲೀಕರು ಹಣ ಮಾಡುವ ದಂಧೆಗಿಳಿಯುತ್ತಿದ್ದಾರೆ.

      ಇದು ಸಮಿತಿಯ ಗಮನಕ್ಕೆ ಬಂದಿದ್ದು, ಕೆಲ ವಾಣಿಜ್ಯ ಕಟ್ಟಡಗಳಲ್ಲಿ ನೆಲ ಮಹಡಿಯನ್ನು ಮಳಿಗೆಗಳ ನ್ನಾಗಿ ಪರಿವರ್ತಿಸಿ ಲಕ್ಷಾಂತರ ರೂ. ಬಾಡಿಗೆಯನ್ನು ಮಾಲೀಕರು ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಗರಪಾಲಿಕೆಯಲ್ಲಿ ತೆರಿಗೆ ಪಾವತಿಸಿಕೊಳ್ಳುವ ಅವಕಾಶವೂ ಇರುವುದಿಲ್ಲ

      . ಏಕೆಂದರೆ, ಕೆಳ ಮಹಡಿಯನ್ನು ಅನ್ಯ ಕಾರಣಕ್ಕೆ ಬಳಸುವಂತಿಲ್ಲ ಎಂದು ಸ್ಪಷ್ಟ ನಿಯಮವಿದೆ. ಇದರಿಂದ ಯಾವುದೇ ತೆರಿಗೆ ಪಾವತಿಸದೆ ಕಟ್ಟಡ ಮಾಲೀಕರು ನಗರಪಾಲಿಕೆಗೆ ನಷ್ಟವುಂಟುಮಾಡುತ್ತಿದ್ದಾರೆ.

      ಇನ್ನು ಕೆಲ ಮಹಡಿಯ ಸ್ಥಳವನ್ನು ವಾಣಿಜ್ಯಕ್ಕೆ ಬಳಸುವುದರಿಂದ ಅಲ್ಲಿಗೆ ಬರುವ ಗ್ರಾಹಕರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವ ಪವೃತ್ತಿ ಹೆಚ್ಚುತ್ತಿದೆ. ಇದರಿಂದಾಗಿ ವಾಣಿಜ್ಯ ಕಟ್ಟಡಗಳ ಮುಂಭಾಗ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಇದನ್ನು ಮನಗಂಡ ನಗರಪಾಲಿಕೆ ಈ ತೀರ್ಮಾನ ತೆಗೆದುಕೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+