ಮೈಸೂರು; ಆರೋಗ್ಯ ಇಲಾಖೆ ಸೂಚನೆ ಪಾಲಿಸದ ಔಷಧಿ ಅಂಗಡಿಗಳ ಅಮಾನತು

ಮೈಸೂರು, ಜುಲೈ 7: ಕೊರೊನಾ ಸೋಂಕಿನ ಸಂಬಂಧ ಆರೋಗ್ಯ ಇಲಾಖೆಯ ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ನಗರದ ನಾಲ್ಕು ಮೆಡಿಕಲ್ ಶಾಪ್ ಗಳ ಪರವಾನಗಿಯನ್ನು ಅನಿರ್ದಿಷ್ಟ ಅವಧಿಗೆ ಅಮಾನತುಪಡಿಸಲಾಗಿದೆ.

ಕೊರೊನಾ ಸೋಂಕಿನ ಪ್ರಾಥಮಿಕ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇನ್ನಿತರ ಸಮಸ್ಯೆಗಳಿಗೆ ಔಷಧಿ ಖರೀದಿಸುವವರ ವಿವರವನ್ನು ಫಾರ್ಮ್ ಪೋರ್ಟ್ ವೆಬ್ ಸೈಟಿನಲ್ಲಿ ದಾಖಲಿಸುವಂತೆ ಆರೋಗ್ಯ ಇಲಾಖೆ ಸೂಚಿಸಿತ್ತು. ಇದರಿಂದ ಐಎಲ್ ಐ ಹಾಗೂ ಸರಿ ಪ್ರಕರಣಗಳ ಪತ್ತೆಗೆ ಸಹಾಯವಾಗಲಿದೆ ಎಂದು ಎಲ್ಲಾ ಔಷಧ ಮಾರಾಟಗಾರರೂ ಕಡ್ಡಾಯವಾಗಿ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿತ್ತು.

Four Medical Shops Permit Suspended For Negligence On Coronavirus In Mysuru

ಅಲ್ಲದೆ ಔಷಧ ನಿಯಂತ್ರಣ ಇಲಾಖಾಧಿಕಾರಿಗಳು ರಾಜ್ಯದ ಎಲ್ಲ ಔಷಧ ಅಂಗಡಿಗಳಿಗೂ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ನೀಡಿ ಮಾರ್ಗದರ್ಶನ ನೀಡಿದ್ದರು. ಆದರೆ ಔಷಧ ನಿಯಂತ್ರಣ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ನಿಯಮ ಪಾಲಿಸದ ಔಷಧ ಅಂಗಡಿಗಳನ್ನು ಪತ್ತೆ ಹಚ್ಚಿದ್ದು, ಜ್ವರ, ನೆಗಡಿ, ಕೆಮ್ಮು ಇನ್ನಿತರ ಸಮಸ್ಯೆಗಳಿಗೆ ಔಷಧಿ ಕೊಂಡುಕೊಂಡವರ ಹೆಸರು ಹಾಗೂ ಮೊಬೈಲ್ ನಂಬರ್ ಅನ್ನು ವೆಬ್ ಅಪ್ಲಿಕೇಷನ್ ನಲ್ಲಿ ದಾಖಲಿಸದ ನಾಲ್ಕು ಔಷಧ ಅಂಗಡಿಗಳ ಪರವಾನಗಿಯನ್ನು ನಿರ್ದಿಷ್ಟ ಅವಧಿಯವರೆಗೆ ಅಮಾನತುಗೊಳಿಸಿರುವುದಾಗಿ ಅಪರ ಔಷಧ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 110 ಔಷಧ ಅಂಗಡಿಗಳ ಪರವಾನಗಿಯನ್ನು ಅನಿರ್ದಿಷ್ಟ ಅವಧಿಯವರೆಗೆ ಅಮಾನತುಗೊಳಿಸಲಾಗಿದೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+