ಪಾನಮತ್ತಳಾಗಿದ್ದ ಮೈಸೂರು ಮಹಿಳೆ ಬೆಂಕಿ ತಗುಲಿ ಸಾವು

ಮೈಸೂರು, ಜುಲೈ 10 : ಕಂಠ ಪೂರ್ತಿ ಕುಡಿದು ಅಡುಗೆ ಮಾಡಲು ಹೋದ‌ ಪೌರಕಾಮಿ೯ಕ ಮಹಿಳೆಗೆ ಆಕಸ್ಮಿಕವಾಗಿ ಬೆಂಕಿ‌ ತಗುಲಿ ಸಾವಿಗೀಡಾಗಿರುವ ಘಟನೆನಗರದ ಜೆಪಿನಗರದ ನೆಲ್ಲೂರ್ ಶೆಡ್ ಪೌರಕಾಮಿ೯ಕರ ಕಾಲೋನಿಯಲ್ಲಿ ನಡೆದಿದೆ.

ಎಚ್ ಡಿ ಕೋಟೆಯಲ್ಲಿ ರೈತ ಮಹಿಳೆ ಆತ್ಮಹತ್ಯೆ

ರೇಣುಕಾ (38) ಬೆಂಕಿಗೆ ಬಲಿಯಾದ ಮಹಿಳೆ. ತೀವ್ರ ಪಾನಮತ್ತಳಾಗಿದ್ದ ಈಕೆ ಜುಲೈ 7 ರಂದು ಅಡುಗೆ ಮಾಡಲು‌ ಅಡುಗೆ ಮನೆಗೆ ತೆರಳಿದಾಗ ಸೀಮೆಎಣ್ಣೆ ಸ್ಟೌವ್ ಹಚ್ಚಿಸಬೇಕಾದರೆ ಸ್ಟೌವ್ ನಿಂದ ಸೀಮೆಎಣ್ಣೆ ಸೋರುತ್ತಿದ್ದರು ಬೆಂಕಿ ಹಚ್ಚಲು ಮುಂದಾಗಿದ್ದಾಳೆ.

Fire kills drunken woman in Mysuru

ಈ ವೇಳೆ ಬೆಂಕಿ ಆಕೆಯ‌ ಮೇಲೆಲ್ಲಾ ಆವರಿಸಿದೆ. ಈ ವೇಳೆ ಆಕೆಯ ಚೀರಾಟ ಕೇಳಿದ ಅಕ್ಕಪಕ್ಕದವರು ತಕ್ಷಣ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಭಾನುವಾರ ಮೃತಪಟ್ಟಿದ್ದಾಳೆ. ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಂಕಿತ ಡೆಂಗ್ಯೂಗೆ ಬಾಲಕ ಬಲಿ
ಮೈಸೂರು ಡೆಂಗ್ಯೂ ರುದ್ರನರ್ತನ ತಾಂಡವಡವಾಡುತ್ತಿದೆ. ಇಂದು ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕನೋರ್ವ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಸೋಸಲೆ ಹೋಬಳಿಯ ಎಸ್.ದೊಡ್ಡಪುರ ಗ್ರಾಮದಲ್ಲಿ ನಡೆದಿದೆ.

Fire kills drunken woman in Mysuru

ಮನೀಶ್ ರಾಜ್ ಅರಸ್ (6) ಮೃತ ಬಾಲಕ. ಕಳೆದ ವಾರ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆ ಮೈಸೂರಿನ ಕಾವೇರಿ ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+