ಮೈಸೂರು: ಪ್ರೊ.ಕೆ.ಎಸ್.ಭಗವಾನ್ ವಿರುದ್ಧ FIR
ಮೈಸೂರು, ಅಕ್ಟೋಬರ್, 21: ನಗರದ ಪುರ ವನದಲ್ಲಿ ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಗಂಗಾಧರ್ ಅವರು ನೀಡಿದ ದೂರಿನ ಆಧಾರದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಹಾಗೂ 153 ಎ ಅಡಿಯಲ್ಲಿ ಪ್ರೊ.ಭಗವಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಏನಿದು ಘಟನೆ?
ಮಹಿಷ ದಸರಾ ದಿನ ಪ್ರೊ.ಕೆ.ಎಸ್. ಭಗವಾನ್ ಅವರು ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಕುವೆಂಪು ಹೇಳಿದ ಮಾತನ್ನು ಉಲ್ಲೇಖಿಸಿ ಒಕ್ಕಲಿಗರು ಸಂಸ್ಕೃತಿಹೀನರು ಎಂದಿದ್ದರು. ಇದು ದೊಡ್ಡ ವಿವಾದವನ್ನೇ ಹುಟ್ಟು ಹಾಕಿತ್ತು. ಬಳಿಕ ಒಕ್ಕಲಿಗ ಸಂಘಟನೆಗಳು ಭಗವಾನ್ ವಿರುದ್ಧ ಸಾಲು ಸಾಲು ಪ್ರತಿಟನೆ ನಡೆಸಿದ್ದವು.
ರೈತ ದಸರಾದ ಪ್ರಮುಖ ಆಕರ್ಷಣೆಗಳೇನು?
ಬಂಡೂರಿ ಕುರಿ, ಹಳ್ಳಿಕಾರ್ ಹಸು, ಮಲೆನಾಡ ಗಿಡ್ಡ ಹಸು ನೋಡಬೇಕಾದರೆ ನೀವು ಒಮ್ಮೆ ರೈತ ದಸರಾಗೆ ಬರಲೇಬೇಕು. ನಗರದ ಜೆಕೆ ಗ್ರೌಂಡ್ ಮೈದಾನದಲ್ಲಿ ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನದಲ್ಲಿ ಬರದ ನಡುವೆಯೂ ರೈತರು ಪಾಲ್ಗೊಂಡು ತಮ್ಮ ನೋವನ್ನು ಮರೆತರು.
ಒಂದೆಡೆ ವಿವಿಧ ತೋಟಗಾರಿಕೆಯ ಬೆಳೆಗಳು, ಮತ್ತೊಂದೆಡೆ ಬಂಡೂರು ಕುರಿಯ ಪ್ರದರ್ಶನ, ನಾಟಿಕೋಳಿಗಳ ಸಾಕಣೆ. ಆಂಧ್ರ ಮೂಲದ ಒಂಗೋಲ್, ಗಿರ್ ತಳಿ, ಹಳ್ಳಿಕಾರ್ ಹಸು ನೋಡುಗರ ಗಮನ ಸೆಳೆದರೆ, ಸಮಗ್ರ ಮೀನು ಕೃಷಿ, ಕೃಷಿ ಬಳಕೆ ಸಲಕರಣೆಗಳು, ಪ್ರಗತಿಪರ ರೈತರು ಬೆಳೆದ ಸಾವಯವ ಪದಾರ್ಥಗಳು ಮಳಿಗೆಗಳು ಮಾಹಿತಿ ಪೂರ್ಣವಾಗಿದ್ದವು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಚಂದವಳ್ಳಿಯ ರೈತರು ಬಂಡೂರು ಕುರಿಯ ಪ್ರದರ್ಶನ ಮಾಡಿದರು. ಈ ಕುರಿಗಳು ಮೊಲದ ಮರಿಗಳ ರೀತಿ ಇದ್ದು, 6 ತಿಂಗಳಿಗೆ 14 ಕೆ.ಜಿ., ಒಂದು ವರ್ಷಕ್ಕೆ 22 ಕೆ.ಜಿ ತೂಕ ಬರಲಿದೆ. ಈ ಕುರಿಗಳು ಪ್ರದರ್ಶನ ವಿಶೇಷವಾಗಿತ್ತು. ಬಂಡೂರಿ ಕುರಿ ಮಾಂಸದ ರುಚಿ ಮತ್ತು ಲಾಭಾಂಶದಿಂದ ಇಂದು ಸಾಕಣೆ ಹೆಚ್ಚುತ್ತಿರುವುದು ಗಮನಾರ್ಹ ಸಂಗತಿ.
ನಾಟಿಕೋಳಿ ಸಾಕಣೆ ಬಗ್ಗೆ ಮಾಹಿತಿ
ಯುವ ಕುಕ್ಕುಟೋದ್ಯಮಿ ಸಾಗರ್ ಅರಸ್ ಅವರು ಸುಧಾರಿತ ಹಿತ್ತಲ ನಾಟಿಕೋಳಿಗಳ ಸಾಕಣೆ ಬಗ್ಗೆ ಯುವಜನತೆಗೆ ಮಾಹಿತಿ ನೀಡುವ ಸಲುವಾಗಿ ಮಳಿಗೆ ತೆರೆದಿದ್ದಾರೆ. ಇಲ್ಲಿ ಸ್ಥಳೀಯ ನಾಟಿಕೋಳಿ, ಅಸೀಲ್, ಟರ್ಕಿ, ಗಿರಿರಾಜ ಹಾಗೂ ಸ್ವರ್ಣದಾರ ಕೋಳಿಗಳ ಬಗ್ಗೆ ತಿಳಿದುಕೊಳ್ಳಬಹುದು. ಜೊತೆಗೆ ಆಂಧ್ರ ಮೂಲದ ಒಂಗೋಲ್, ಗುಜರಾತಿನ ಗಿರ್, ಹಸುಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದಾರೆ.
ಇದರೊಂದಿಗೆ ಹಳ್ಳಿಕಾರ್ ಎತ್ತು ವಸ್ತು ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಅಲ್ಲದೆ, ಸುಮುಧ ಸಾವಯವ ತೋಟದ ಮಲೆನಾಡು ಗಿಡ್ಡ ಹಸು ಗಮನ ಸೆಳೆಯುತ್ತಿದೆ. ಉದ್ದ ಕುರಿ ಮೇಕೆ, ಇಯರ್ ಮೇಕೆ ತಳಿಗಳು ಪ್ರದರ್ಶನ ಸೊಬಗನ್ನು ಹೆಚ್ಚಿಸಿದವು.
ಗಮನ ಸೆಳೆದ ಮೆರವಣಿಗೆ
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದ ಬಳಿ ನಗಾರಿ ಬಾರಿಸುವ ಮೂಲಕ ರೈತ ದಸರೆಗೆ ಕೃಷಿ ಸಚಿವ ಚೆಲುವನಾರಾಯಣಸ್ವಾಮಿ ಚಾಲನೆ ನೀಡಿದರು. ಅಲಂಕೃತ ಜೋಡಿ ಎತ್ತಿನ ಗಾಡಿ ಏರಿದ ಕೃಷಿ ಸಚಿವರು ಮೆರವಣಿಗೆಯಲ್ಲಿ ಸಾಗಿ ಬಂದರು. ಧಾನ್ಯಗಳಿಗೆ ಪೂಜೆ ಸಲ್ಲಿಸಿ ಕೃಷಿಯಲ್ಲಿ ಸಾಧನೆ ತೋರಿದ ಹಲವು ಸಾವಯವ ಕೃಷಿಕರಿಗೆ ಸನ್ಮಾನ, ಗುಣಮಟ್ಟದ ಬೆಳೆಗಳ ಪ್ರದರ್ಶನ, ಸಾವಯವ ಉತ್ಪನ್ನಗಳ ಮಾರಾಟ ರೈತ ದಸರಾ ಯಶಸ್ಸಿಗೆ ಎಲ್ಲವೂ ಸಾಕ್ಷಿಯಾದವು.
ಅಷ್ಟೇ ಅಲ್ಲದೆ ವೀರಗಾಸೆ, ಕೋಲಾಟ, ಪೂಜಾ ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ಹುಲಿ ವೇಷ, ಪಾಳೇಗಾರ, ಮರಗಾಲು ಕುಣಿತ ಇನ್ನಿತರ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಣೆ ತುಂಬಿದವು. ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದಲ್ಲಿ ದೊಡ್ಡ ಬರಗಾಲ ಇದೆ. 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಮೂರು ಬಾರಿ ಪ್ರಧಾನಿಗೆ ಪತ್ರ ಬರೆದರೂ ಭೇಟಿ ಅವಕಾಶ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಗರದ ಜೆಕೆ ಗ್ರೌಂಡ್ ಬಳಿ ಇರುವ ಮೈಸೂರು ವೈದ್ಯಕೀಯ ಕಾಲೇಜಿನ ಅಲ್ಯೂಮಿನಿ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಳೆ ಕೈಕೊಟ್ಟ ಕಾರಣ ರಾಜ್ಯದಲ್ಲಿ ಬರ ತಾಂಡವ ಆಡುತ್ತಿದೆ. ಮೊದಲ ಹಂತದಲ್ಲಿ 195 ತಾಲೂಕು ಹಾಗೂ ಎರಡನೇ ಹಂತದಲ್ಲಿ 21 ತಾಲೂಕುಗಳನ್ನು ಬರ ಪೀಡಿತ ತಾಲೂಕಾಗಿ ಸರ್ಕಾರ ಘೋಷಣೆ ಮಾಡಿದೆ. ಕೇಂದ್ರ ಬರ ಅಧ್ಯಯನ ತಂಡವೂ ಭೇಟಿ ನೀಡಿ ಹೋಗಿದೆ ಅಷ್ಟೇ ಎಂದು ತಿಳಿಸಿದರು.
ಮೋದಿ ಭೇಟಿಗೆ ಸಿಕ್ಕಿಲ್ಲ ಅವಕಾಶ
ಬರ ಪರಿಹಾರವಾಗಿ 5 ಸಾವಿರದ 21 ಕೋಟಿ ರೂಪಾಯಿ ನೀಡುವಂತೆ ಕೇಂದ್ರವನ್ನು ಕೋರಿದ್ದೇವೆ. ಆದರೂ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಲು ಇಂದಿಗೂ ನಮಗೆ ಅವಕಾಶ ಸಿಕ್ಕಿಲ್ಲ. ಇದು ರಾಜ್ಯದ ಬಗ್ಗೆ ಕೇಂದ್ರದ ನಡವಳಿಕೆ ಹಾಗೂ ತಾತ್ಸಾರವನ್ನು ತೋರಿಸುತ್ತದೆ. ಕಾವೇರಿ ಗಲಾಟೆಯಾದಾಗ ಮೂರು ಬಾರಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್‌ನ 27 ಸಂಸದರು ಮೋದಿ ಭೇಟಿಗೆ ಯಾಕೆ ಹೋಗಲಿಲ್ಲ, ನಮ್ಮ ನೆರವಿಗೂ ಬರಲಿಲ್ಲ? ಎಂದು ಪ್ರಶ್ನಿಸಿದರು.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications