• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ನಕಲಿ ಪತ್ರಕರ್ತನ ವಿರುದ್ಧ ಎಫ್‌ಐಆರ್

By ಮೈಸೂರು ಪ್ರತಿನಿಧಿ
|

ಮೈಸೂರು, ಏಪ್ರಿಲ್ 07: ಮೈಸೂರಿನಲ್ಲಿ ನಕಲಿ ಪತ್ರಕರ್ತನ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಲಾಗಿದೆ. ಇರ್ಫಾನ್ ಪಾಷಾ ಬಂಧಿತ ಆರೋಪಿಯಾಗಿದ್ದಾನೆ.

ಬೇರೆ ಬೇರೆ ಸಂಸ್ಥೆಯ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ ಗಳನ್ನು ಬಂಧಿತ ಆರೋಪಿ ಹೊಂದಿದ್ದನು. "ಹ್ಯುಮನ್ ರೈಟ್ಸ್ ಇಂಡಿಯಾ' ಫೌಂಡೇಷನ್, ಲೇಬರ್ ಲಿಬರಲ್ ನವ ನಿರ್ಮಾಣ್ ಸೇನೆ, ಇಂಡಿಯಾನ್ ಹ್ಯೂಮನ್ ರೈಟ್ಸ್ ನ್ಯೂಸ್ ಹೆಸರಿನ ಗುರುತಿನ ಪತ್ರವನ್ನು ಇರ್ಫಾನ್ ಪಾಷಾ ಹೊಂದಿದ್ದಾನೆ.

ವಾಹನ ತಪಾಸಣೆ ಮಾಡುವ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರಿಗೆ ನಕಲಿಯ ಐಡಿ ಕಾರ್ಡ್ ತೋರಿಸಿ ಎಸ್ಕೇಪ್ ಆಗಲು ಮುಂದಾದಾಗ, ಕೂಡಲೇ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
An FIR has been filed against a fake journalist in Mysuru. Irfan Pasha is a detained convict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X