ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಕೆ.ಆರ್.ನಗರದಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ

By Vanitha
|
Google Oneindia Kannada News

ಹೊಸೂರು, ಅಕ್ಟೋಬರ್, 19 : ರೈತರ ಅತ್ಮಹತ್ಯೆ ಮಂದುವರಿದಿದ್ದು ಸಾಲಭಾದೆ ತಾಳಲಾರದೆ ವಿಷದ ಮಾತ್ರೆ ನುಂಗಿ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿಯ ದೊಡ್ದಕೊಪ್ಪಲು ಗ್ರಾಮದಲ್ಲಿ ಅಕ್ಟೋಬರ್ 18ರ ಭಾನುವಾರದಂದು ನಡೆದಿದೆ.

ಗ್ರಾಮದ ನಿವಾಸಿ ಲೇಟ್ ಸಣ್ಣಸ್ವಾಮೇಗೌಡ ಅವರ ಪುತ್ರ ಮಹದೇವ್ (46) ಎಂಬ ರೈತನೇ ಆತ್ಮಹತ್ಯೆಗೆ ಶರಣಾಗಿರುವ ರ್ದುದೈವಿ. ಆತ್ಮಹತ್ಯೆಗೆ ಯತ್ನಿಸಿದ ಈತನನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ 18ರ ಭಾನುವಾರ ಕೊನೆಯುಸಿರೆಳೆದಿದ್ದಾನೆ.[ಹಾವೇರಿ ರೈತ ಸಮಾವೇಶದಲ್ಲಿ ರಾಹುಲ್ ಹೇಳಿದ್ದೇನು?]

Farmer committed suicide at K.R Nagar, Mysuru

ರೈತ ಸಣ್ಣಸ್ವಾಮೇಗೌಡ ಅನ್ನಪೂರ್ಣೇಶ್ವರಿ ಮಹಿಳಾ ಸಂಘದಲ್ಲಿ 41 ಸಾವಿರ, ಬಿಎಸ್ಎಸ್ ಫೈನಾಸ್ಸ್ ನಿಂದ 40,000, ಎಸ್‍ಕೆಎಸ್ ಫೈನಾಸ್ಸ್ ನಿಂದ 13,000, ಗ್ರಾಮೀಣ ಒಕ್ಕೂಟದಿಂದ 26,000, ಧರ್ಮಸ್ಥಳ ಸಂಘದಿಂದ 10,000 ಮತ್ತು ಕೈ ಸಾಲ ಸೇರಿದಂತೆ ಒಟ್ಟು 2ಲಕ್ಷದವರೆಗೆ ಸಾಲಮಾಡಿಕೊಂಡಿದ್ದ ಎಂದು ಮೃತನ ಕುಟುಂಬದ ಮೂಲಗಳು ತಿಳಿಸಿವೆ.

ರೈತನ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಶಾಸಕ ಸಾ.ರಾ.ಮಹೇಶ್.ಜಿಪಂ ಸದಸ್ಸ ಚಿಕ್ಕಕೊಪ್ಪಲು ಸಿ.ಜೆ.ದ್ವಾರಕೀಶ್ ಆಸ್ವತ್ರೆಗೆ ಭೇಟಿನೀಡಿ ಮೃತ ರೈತನ ಕುಟುಂಬಕ್ಕೆ ಸ್ವಾಂತನ ಹೇಳಿ ತಮ್ಮ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸವಲತ್ತನ್ನು ಒದಗಿಸಿಕೊಡುವ ಭರವಸೆ ನೀಡಿದರು.[ರಾಹುಲ್ ಗಾಂಧಿ ಸಮ್ಮುಖದಲ್ಲಿ ರೈತರಿಗೆ ಪ್ಯಾಕೇಜ್ ಘೋಷಣೆ]

ರೈತನ ಮೃತದೇಹವನ್ನು ದೊಡ್ದಕೊಪ್ಪಲು ಗ್ರಾಮಕ್ಕೆ ತರುತ್ತಿದ್ದಂತೆಯೇ ಕೆಆರ್.ನಗರ ಪೋಲಿಸ್ ಠಾಣೆಯ ಪಿಎಸ್ಐ ಪೂಣಚ್ಚ, ಕೆಆರ್.ನಗರ ಕೃಷಿ ಅಧಿಕಾರಿ ನವೀನ್ , ಚುಂಚನಕಟ್ಟೆ ನಾಡ ಕಚೇರಿಯ ರಾಜಸ್ವ ನೀರಿಕ್ಷಕ ಕೋಟೆಗೌಡ ಗ್ರಾಮಲೆಕ್ಕಿಗ ವಿಜಿಕುಮಾರ್, ಗ್ರಾಮಕ್ಕೆ ಆಗಮಿಸಿ ಮೃತ ರೈತನ ಅಂತಿಮ ದರ್ಶನ ಪಡೆದು ರೈತನ ಕುಟುಂಬಕ್ಕೆ ಸ್ವಾಂತನ ಹೇಳಿ ಮಹಜರು ನಡೆಸಿದರು.

ಮೃತ ರೈತ ಮಹದೇವ್ ಅವರಿಗೆ ತಾಯಿ,ಪತ್ನಿ, ಒಂದು ಹೆಣ್ಣು ಮತ್ತು ಗಂಡು ಮಗುವಿದ್ದು ಮೃತನ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಮೃತನ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಘಟನೆಯ ಸಂಬಂದ ಕೆಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Farmer Sannaswamegowda has committed suicide at K.R Nagar(Krishnarajanagara),Mysuru, on Sunday, October 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X