ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿಗೆ ವಿಶೇಷ ಮೈಸೂರು ಪೇಟ, ಚಿನ್ನಲೇಪಿತ ಫೋಟೋ ಗಿಫ್ಟ್‌

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 20: ಸಾಂಸ್ಕೃತಿಕ ನಗರಿ ಮೈಸೂರು ಐತಿಹಾಸಿಕ ವಿಶ್ವಯೋಗ ದಿನಾಚಾರಣೆಗೆ ಸಿದ್ಧವಾಗಿದೆ. ಅದರಲ್ಲೂ ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಯೋಗ ಕಾರ್ಯಕ್ರಮ ನಡೆಯುತ್ತಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಕಾರಣ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.

ಯೋಗ ದಿನಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ನೀಡಲು ಸಾಕಷ್ಟು ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತಿವೆ. ಸ್ವರ್ಣಾಕ್ಷರಗಳಲ್ಲಿ ಬರೆದಿರುವ ವಿಶೇಷ ಫೋಟೋ ಉಡುಗೊರೆ ನೀಡಲು ಆಭರಣ ವ್ಯಾಪಾರಿಗಳು ಉತ್ಸುಕತೆ ತೋರಿದ್ದಾರೆ. ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೋದಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮೂಲಕ ವಿಶೇಷ ಉಡುಗೊರೆ ನೀಡಲಾಗುತ್ತದೆ.

ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿರುವ ಮೊದಲ ಪ್ರಧಾನಿ ಮೋದಿ!ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿರುವ ಮೊದಲ ಪ್ರಧಾನಿ ಮೋದಿ!

ಮೋದಿಗಾಗಿ ಮೈಸೂರು ಪೇಟ
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಫಲಾನುವಿಗಳ ಸಂವಾದದಲ್ಲಿ ಪಾಲ್ಗೊಳ್ಳಿರುವ ಪ್ರಧಾನಿ ನರೇಂದ್ರ ಮೋದಿಗಾಗಿ ರಾಜಮನೆತನದಿಂದ ವಿಶೇಷ ಮೈಸೂರು ಪೇಟವನ್ನು ತೊಡಿಸಿ ಗೌರವಿಸಲು ತೀರ್ಮಾನಿಸಲಾಗಿದೆ. ಮೈಸೂರಿನ ಕಲಾವಿದ ನಂದನ್ ಎನ್ನುವವರು ತಯಾರಿಸಿದ್ದಾರೆ. ಇದು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಇದು ಮೈಸೂರು ರೇಷ್ಮೆ ನೂಲು, ಬನಾರಸ್‌ ಮುತ್ತುಗಳಿಂದ ಕೂಡಿದ ಕೆಂಪು ಹಾಗೂ ಚಿನ್ನದ ಬಣ್ಣದಿಂದ ಕೂಡಿದ ಮೈಸೂರಿನ ಸಾಂಪ್ರದಾಯಿಕ ಶೈಲಿಯ ಪೇಟವಾಗಿದೆ.

Famous Mysuru Peta and Gold coated Photo gift to PM Modi

ಸ್ವರ್ಣಲೇಪಿತ ಅಕ್ಷರಗಳ ಫೋಟೋ
ಪ್ರಧಾನ ಮಂತ್ರಿಗಳಿಗೆ ಮೈಸೂರಿನ ನೆನಪನ್ನು ಹಚ್ಚ ಹಸಿರಾಗಿ ಉಳಿಸಿಕೊಳ್ಳಲಿ ಎಂಬ ಉದ್ದೇಶದಿಂದ ನವರತ್ನ ಜ್ಯುವೆಲರ್ಸ್ ಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗೂ ಪ್ರಧಾನಿ ಮೋದಿ ಭಾವಚಿತ್ರವನ್ನು ಬಂಗಾರದ ಅಕ್ಷರಗಳಿಂದ ಸಿದ್ಧಪಡಿಸಲಾಗಿದೆ. ಬಂಗಾರ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕಗಳನ್ನು ಅಳವಡಿಕೆ ಮಾಡಲಾಗಿದೆ. ಮೈಸೂರಿಗರ ಪರವಾಗಿ ಯೋಗ ದಿನಾಚರಣೆಗಾಗಿ ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ. ಈ ನೆನಪಿನ ಕಾಣಿಕೆಯನ್ನು ಥೈಲ್ಯಾಂಡ್ ನಲ್ಲಿ ಮಾಡಿಸಿರುವುದು ಮತ್ತೊಂದು ವಿಶೇಷವಾಗಿದೆ. ಆದರೆ ಈ ಉಡುಗೊರೆಗಳನ್ನು ಮೋದಿಗೆ ನೀಡುವುದಕ್ಕೆ ಇನ್ನೂ ಎಸ್‌ಪಿಜಿಯಿಂದ ಕ್ಲಿಯರೆನ್ಸ್ ದೊರೆತಿಲ್ಲ ಎಂದು ತಿಳಿದುಬಂದಿದೆ.

Famous Mysuru Peta and Gold coated Photo gift to PM Modi

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿರುವ ಮೊದಲ ಪ್ರಧಾನಿ
"ಸೋಮವಾರ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದುಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಮೈಸೂರಿಗೆ ಆಗಮಿಸಿದವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಶಕ್ತಿದೇವತೆ ಚಾಮುಂಡೇಶ್ವರಿಯ ದರ್ಶನ ಮಾಡದೆ ತೆರಳುವುದು ಅಪರೂಪ. ಈಗಾಗಲೇ ಹಲವು ರಾಜ್ಯ ಮತ್ತು ಹೊರ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ರಾಜ್ಯಪಾಲರು, ಕೇಂದ್ರ ಸಚಿವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಾಮುಂಡೇಶ್ವರಿಯ ದರ್ಶನ ಪಡೆದಿರುವುದು ಮಾತ್ರವಲ್ಲದೆ ಹರಕೆಯನ್ನು ಸಲ್ಲಿಸಿ ಹೋಗಿದ್ದಾರೆ. ಆದರೆ ಇದುವರೆಗೆ ಪ್ರಧಾನ ಮಂತ್ರಿಗಳು ತಮ್ಮ ಅಧಿಕಾರದ ಅವಧಿಯಲ್ಲಿ ಇಲ್ಲಿಗೆ ಆಗಮಿಸಿಲ್ಲ ಎನ್ನಲಾಗಿದ್ದು, ಮೋದಿಯವರೇ ಪ್ರಥಮವಾಗಿ ಭೇಟಿ ನೀಡುತ್ತಿರುವ ಪ್ರಧಾನಿ," ಎಂಬುದಾಗಿ ದೇಗುಲದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

English summary
Prime minister Narendra modi to visit Mysuru on June 20 and 21st for attend various event. Mysuru People gave famous Mysuru Peta and gold coated photo as gift through MP Pratap Simha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X