ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್ ಓಯು ನಕಲಿ ಅಂಕಪಟ್ಟಿ ಹಗರಣ : 850 ವಿದ್ಯಾರ್ಥಿ ಸ್ಥಿತಿ ಅಧೋಗತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 23 : ಮೈಸೂರು ಮುಕ್ತ ವಿವಿ ವಿದ್ಯಾರ್ಥಿಗಳ ಜೀವನ ಮೂರಾಬಟ್ಟೆಯಾದಂತಿದೆ. ಇತ್ತ ಮಾನ್ಯತೆಯೂ ಸಿಗದೇ ಅತ್ತ ನಕಲಿ ಅಂಕಪಟ್ಟಿ ಹಗರಣದಲ್ಲಿಯೂ ಸಿಲುಕಿರುವ 850 ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ.

ಮೈಸೂರು ಮುಕ್ತವಿವಿಯಲ್ಲಿ ಬಹಿರಂಗಯಾಯ್ತು ನಕಲಿ ಅಂಕಪಟ್ಟಿ ಜಾಲಮೈಸೂರು ಮುಕ್ತವಿವಿಯಲ್ಲಿ ಬಹಿರಂಗಯಾಯ್ತು ನಕಲಿ ಅಂಕಪಟ್ಟಿ ಜಾಲ

ಬ್ರಿಡ್ಜ್ ಕೋರ್ಸ್ ಪಡೆದ ವಿದ್ಯಾರ್ಥಿಗಳು ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ. ಜಿಸಿಎಂಸಿ ಕಾಲೇಜು, ಶ್ರೀಮೇಧಾ ಕಾಲೇಜು, ಇಂಡೋ ಅಮೇರಿಕನ್ ಕಾಲೇಜು ಸೇರಿದಂತೆ ಧಾರವಾಡದ ನೂರಾರು ವಿದ್ಯಾರ್ಥಿಗಳು ಸದ್ಯ ದಿನನಿತ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಸದ್ಯ ಅಂಕಪಟ್ಟಿಗಳ ನೈಜತೆ ಕುರಿತು ಪರಿಶೀಲನೆಗೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆ ಇವರೆಲ್ಲರಿಗೂ ನಾಲ್ಕು ಸೆಮ್ ಓದಿದ ವಿದ್ಯಾರ್ಥಿಗಳಿಗೆ 5 ನೇ ಸೆಮ್ ಗೆ ಪ್ರವೇಶಾತಿಗೆ ನಿರಾಕರಿಸಲಾಗಿದೆ.

Fake marks card issue: Mysuru KSOU students in trouble

ಇದೇ ಬೆನ್ನಲ್ಲೇ ಕೆ‌ಎಸ್ ಓಯು ಅಂಕಪಟ್ಟಿಗೆ ಮಾನ್ಯತೆ ಇಲ್ಲದ ಕಾರಣ ಪ್ರವೇಶಾತಿ ಸಾಧ್ಯವಿಲ್ಲ ಎಂದು ಕಾಲೇಜುಗಳು ತಿಳಿಸಿವೆ. ಅಂತಿಮ ಬಿಕಾಂ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಎರಡು ವರ್ಷ ಇಲ್ಲದ ಸಮಸ್ಯೆ ಮೂರನೇ ವರ್ಷ ಉದ್ಭವವಾಗಿದೆ. ಮಾನ್ಯತೆ ಕಳೆದುಕೊಂಡಿರುವ ಕಾರಣ ಪ್ರವೇಶಾತಿ ಇಲ್ಲವಾಗಿದೆ. ಪ್ರವೇಶಾತಿ ನೀಡುವಂತೆ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಅಂಕಪಟ್ಟಿಯ ನೈಜತೆ, ಸತ್ಯಾಸತ್ಯತೆಗೆ ಕೋರ್ಟ್ ಆದೇಶಿಸಿದೆ. ಬ್ರಿಡ್ಜ್ ಕೋರ್ಸ್ ಆಧಾರದ ಮೇಲೆ ಪ್ರವೇಶಾತಿ ಸಾಧ್ಯವಿಲ್ಲ ಎಂದು ಸಂಸ್ಥೆಗಳು ತಿಳಿಸಿವೆ.

ಹಿಂದಿನ ಕುಲಪತಿಗಳ ನಡೆಗೆ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ವಾಗಿದೆ. ನ್ಯಾಯಾಲಯ ಆದೇಶಿಸಿದರೂ ನ್ಯಾಯ ಸಿಗುತ್ತಿಲ್ಲ. ಬ್ರಿಡ್ಜ್ ಕೋರ್ಸ್ ಮಾನ್ಯತೆ ಇಲ್ಲದಿರುವುದು ಒಂದೆಡೆಯಾದರೆ, ಕೆ ಎಸ್ ಓಯುಗೆ ಮಾನ್ಯತೆ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ನಕಲಿ ಅಂಕಪಟ್ಟಿ ಹಗರಣ : ಸಿಸಿಬಿಯಿಂದ ತನಿಖೆ ಚುರುಕು
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅಂಕಪಟ್ಟಿ ಹಗರಣ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಮೈಸೂರಿನ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಮುಂದಾಗಿದ್ದಾರೆ. ಹರ್ಷಾ, ಪ್ರಶಾಂತ್, ಲೋಕೇಶ್ ಹಾಗೂ ಚಂದ್ರಶೇಖರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಚಂದ್ರಶೇಖರ್, ಕೆಎಸ್ಓಯು ನಿವೃತ್ತ ನೌಕರನಾಗಿದ್ದು, ಮುಕ್ತ ವಿವಿಯ ಪರೀಕ್ಷಾಂಗ ವಿಭಾಗದಲ್ಲಿ ಕೋ ಆರ್ಡಿನೇಟರ್ ಆಗಿದ್ದರು. ಉಳಿದ ಮೂವರು ಕೂಡ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ‌ ಕೆಲಸ ಮಾಡುತ್ತಿರುವ ನೌಕರರು ಎಂದು ತಿಳಿದು ಬಂದಿದೆ

English summary
More than 850 students of Karnataka State Open University (KSOU) are in trouble, due to fake marks card issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X