ಕುಮಾರಸ್ವಾಮಿ ಸಿಎಂ ಎಂಬುದನ್ನು ಮರೆತಂತಿದೆ: ಸುರೇಶ್ ಕುಮಾರ್
Recommended Video

ಮೈಸೂರು, ಏಪ್ರಿಲ್ 4:ಸಿಎಂ ಕುಮಾರಸ್ವಾಮಿ ತಾವು ಮುಖ್ಯಮಂತ್ರಿ ಎಂಬುದನ್ನು ಮರೆತು, ಕೇವಲ ಮಗನ ಗೆಲುವಿಗಾಗಿ ಪ್ರಚಾರದಲ್ಲಿಯೇ ಮುಳುಗಿ ಹೋಗಿರುವುದು ಬೇಸರ ಸಂಗತಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೈಸೂರು- ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಮೈಸೂರಿನಲ್ಲಿ ಪ್ರಚಾರ ನಡೆಸುವ ವೇಳೆ ಮಾತನಾಡಿದ ಅವರು,ರಾಜ್ಯದಲ್ಲಿ ಮುಖ್ಯಮಂತ್ರಿ ಎಂಬುವವರು ಕಾಣೆಯಾಗಿದ್ದಾರೆ. ನಿಖಿಲ್ ತಂದೆಯಾಗಿರುವ ಕುಮಾರಸ್ವಾಮಿ ಸಿಎಂ ಎಂಬುದನ್ನು ಮರೆತಂತಿದೆ. ಕೇವಲ ನಿಖಿಲ್ ತಂದೆಯಾಗಿ ಮಂಡ್ಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.
ಸುಮಲತಾ ಎಂಬ ಮಹಿಳೆಯ ಬಗ್ಗೆ ಉಪಯೋಗಿಸುತ್ತಿರುವ ಪದಗಳು, ವ್ಯಕ್ತಪಡಿಸುತ್ತಿರುವ ಭಾವನೆಗಳು ರಾಜಕೀಯ ಕ್ಷೇತ್ರಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸುರೇಶ್ ಕುಮಾರ್, ಚಿತ್ರನಟರು ನಮ್ಮ ಜೊತೆ ಇದ್ದರೆ ಜೋಡೆತ್ತುಗಳು. ನಮ್ಮ ಜೊತೆಯಲ್ಲಿ ಇಲ್ಲದಿದ್ದರೆ ಕಳ್ಳೆತ್ತುಗಳು ಎಂಬುದು ಸರಿ ಇಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ ಪ್ರತಿಯೊಬ್ಬರನ್ನು ಗೌರವಿಸುವುದನ್ನು ಕಲಿಯಬೇಕು. ತಮ್ಮ ಜವಬ್ದಾರಿಯನ್ನು ಅವರು ಮರೆತಿದ್ದಾರೆ. ಜಾತ್ಯಾತೀತ ಜನತಾದಳ ಎಂಬ ಪಕ್ಷದ ಹೆಸರಿಟ್ಟುಕೊಂಡು ಜಾತಿ ಆಧಾರಿತ ಚಿಂತನೆ ನಡೆಸುತ್ತಿರುವುದನ್ನು ಜನ ನೋಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ತಂದೆ ಆಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಕೂಡ ಕೆಲಸ ಮಾಡಿ. ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಆ ಕಡೆ ಗಮನ ಕೊಡಿ ಎಂದು ಸುರೇಶ್ ಕುಮಾರ್ ಆಗ್ರಹಿಸಿದರು.
ಬಿಜೆಪಿ ಪಕ್ಷ ಕಂಡರೆ ಮೈತ್ರಿ ಸರ್ಕಾರಕ್ಕೆ ಭಯ ಎಂದ ಸುರೇಶ್ ಕುಮಾರ್, ಮೈತ್ರಿ ಎಫೆಕ್ಟ್ ಅವರಿಗೆ ತೊಂದರೆ ಆಗುತ್ತಿದೆ. ಆದರೆ ನಮಗೆ ಮೈತ್ರಿ ಎಫೆಕ್ಟ್ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ರಿಗೆ ಸಮನ್ವಯ ಸಾಧಿಸಲಿಕ್ಕೆ ಆಗ್ತಿಲ್ಲ ಎಂದು ಟೀಕಿಸಿದರು. ಬೆಂಗಳೂರು ದಕ್ಷಿಣದಲ್ಲಿ ಯಾವುದೇ ಗೊಂದಲವಿಲ್ಲ. ತೇಜಸ್ವಿ ಸೂರ್ಯ ಒಬ್ಬ ಯುವ ನಾಯಕ ಅವರಿಗೆ ಜನ ಬೆಂಬಲವಿದೆ ಎಂದರು.












Click it and Unblock the Notifications