• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯ ಕಾಂಗ್ರೆಸ್‌ ನಾಯಕರು ಸೈಲೆಂಟ್ ಆಗಿರಲು ಕಾರಣವೇನು ಗೊತ್ತಾ?

|
   ಎಚ್ ಡಿ ಕುಮಾರಸ್ವಾಮಿಯವರ ಮೈತ್ರಿ ಸರ್ಕಾರದಿಂದ ಕಾಂಗ್ರೆಸ್ ಆಟ ನಡೀತಿಲ್ಲ | Oneindia Kannada

   ಮೈಸೂರು, ಅಕ್ಟೋಬರ್.12: ರಾಜಕೀಯ ಎನ್ನುವುದು ನಿಂತ ನೀರಲ್ಲ. ಹೀಗಾಗಿ ರಾಜಕೀಯದಲ್ಲಿ ಇರುವವರು ಸದಾ ಚಟುವಟಿಕೆಯಲ್ಲಿರಬೇಕು. ಬಹಳಷ್ಟು ಬಾರಿ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆ ಕಳೆದ ನಂತರ ಮ್ಯಾಜಿಕ್ ನಂಬರ್ ಪಡೆದವರು ಸರ್ಕಾರ ರಚಿಸಿ ಆಡಳಿತ ನಡೆಸಿದರೆ, ಕಡಿಮೆ ಸ್ಥಾನ ಪಡೆದವರು ವಿರೋಧಪಕ್ಷದಲ್ಲಿ ಕುಳಿತು ಅವರ ಕೆಲಸ ಏನಿದೆಯೋ ಅದನ್ನು ಮಾಡಿಕೊಂಡು ಹೋಗುತ್ತಿದ್ದರು.

   ಆದರೆ ಇತ್ತೀಚೆಗಿನ ಬೆಳವಣಿಗೆಗಳು ವಿಚಿತ್ರವಾಗಿದ್ದು, ಒಂದಲ್ಲ ಒಂದು ಕಾರಣಕ್ಕೆ ರಾಜಕೀಯ ಚಟುವಟಿಕೆಗಳು ಆಗಾಗ್ಗೆ ಗರಿಬಿಚ್ಚುತ್ತಲೇ ಇರುತ್ತವೆ. ಅದರಲ್ಲೂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿ, ಚುನಾವಣೆ ನಡೆದು, ಫಲಿತಾಂಶ ಬಂದು ಸಮ್ಮಿಶ್ರ ಸರ್ಕಾರ ಆಡಳಿತ ಆರಂಭಿಸಿ ನಾಲ್ಕು ತಿಂಗಳಾದರೂ ರಾಜಕೀಯ ಚಟುವಟಿಕೆ ಮಾತ್ರ ಸದಾ ಹಸಿಯಾಗಿಯೇ ಇದೆ.

   ಪ್ರತಿದಿನವೂ ಒಂದಲ್ಲ ಒಂದು ರೀತಿಯ ವಿವಾದಾತ್ಮಕ ಸುದ್ದಿಗಳು ಹೊರಬರುತ್ತಿದ್ದು, ಯಾವಾಗ ಏನಾಗುತ್ತದೆಯೋ ಎಂಬ ಆತಂಕ ಆಡಳಿತ ನಡೆಸುತ್ತಿರುವ ಪಕ್ಷಗಳದ್ದಾದರೆ, ಸರ್ಕಾರ ಉರುಳಿ ಬಿದ್ದರೆ ನಾವು ಸರ್ಕಾರ ರಚಿಸಬಹುದೆಂಬ ಸಣ್ಣ ಬಯಕೆ ವಿರೋಧಪಕ್ಷದಾಗಿದೆ.

   ಅನಿತಾ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ: ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ

   ಇದರ ಮಧ್ಯೆ ಆಗಾಗ್ಗೆ ಭುಗಿಲೇಳುವ ಶಾಸಕರ ಅಸಮಾಧಾನ, ಸಚಿವನಾಗುವ ಬಯಕೆಗಳು, ಸಂಪುಟ ಪುನರಚನೆಯಾದರೆ ಎಲ್ಲಿ ತಮ್ಮ ಸ್ಥಾನಕ್ಕೆ ಕುತ್ತು ಬಂದು ಬಿಡುತ್ತದೆಯೋ ಎನ್ನುವ ಸಚಿವರ ಸಂಕಟ.. ಇದೆಲ್ಲವೂ ಶ್ರೀಸಾಮಾನ್ಯನಿಗೆ ಅಸಹ್ಯ ಹುಟ್ಟಿಸುತ್ತಿದೆ. ಮುಂದೆ ಓದಿ...

    ಚಕ್ರಾಧಿಪತ್ಯ ಸಾಧಿಸುತ್ತಿರುವ ನಾಯಕರು

   ಚಕ್ರಾಧಿಪತ್ಯ ಸಾಧಿಸುತ್ತಿರುವ ನಾಯಕರು

   ಮೈತ್ರಿ ಸರ್ಕಾರದಲ್ಲಿನ ಭಿನ್ನಮತಗಳು ಆಗಾಗ್ಗೆ ಭುಗಿಲೇಳುವುದು. ಮತ್ತೆ ತಣ್ಣಗಾಗುವುದು ಮಾಮೂಲಿಯಾಗಿದೆ. ಕಾಂಗ್ರೆಸ್ ಈಗಾಗಲೇ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿದ ಕಾರಣ ಏನೂ ಮಾತನಾಡುವಂತಿಲ್ಲ. ಜತೆಗೆ ಜೆಡಿಎಸ್ ನಾಯಕರು ಏನೇ ಮಾಡಿದರೂ ಅದನ್ನು ಸಹಿಸಿಕೊಂಡು ತೆಪ್ಪಗೆ ಇರಬೇಕಾದ ಪರಿಸ್ಥಿತಿ ಬಂದೊದಗಿದೆ.

   ರಾಜ್ಯ ನಾಯಕರು ಏನೇ ಮಾಡಬೇಕಾದರೂ ಹೈಕಮಾಂಡ್ ನ ಆಶ್ರಯಿಸಬೇಕಾಗಿದ್ದು, ಹೈಕಮಾಂಡ್ ಸದ್ಯ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಮಣೆಹಾಕುತ್ತಿರುವ ಕಾರಣ ರಾಜ್ಯ ಕಾಂಗ್ರೆಸ್ ನಾಯಕರ ಆಟ ನಡೆಯುವಂತೆ ಕಾಣುತ್ತಿಲ್ಲ.

   ಇವತ್ತು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕಾದರೆ ಕಾಂಗ್ರೆಸ್ ನಾಯಕರೇ ಕಾರಣ. ಹೀಗಾಗಿ ಬೆಂಬಲ ಪಡೆದು ಮೈತ್ರಿ ಆಡಳಿತ ನಡೆಸುತ್ತಿರುವ ಸಿಎಂ ಮತ್ತು ಅವರ ಸಂಪುಟದ ಸಚಿವರು ಕಾಂಗ್ರೆಸ್ ಶಾಸಕರು ಸೇರಿದಂತೆ ನಾಯಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾಗುತ್ತದೆ.

   ಆದರೆ ಇಲ್ಲಿ ಅದ್ಯಾವುದೂ ಆಗುತ್ತಿಲ್ಲ. ಜೆಡಿಎಸ್ ಪ್ರಾಬಲ್ಯ ಇರುವಲ್ಲಿ ಕಾಂಗ್ರೆಸ್‌ನ್ನೂ, ಕಾಂಗ್ರೆಸ್ ಪ್ರಾಬಲ್ಯ ಇರುವಲ್ಲಿ ಜೆಡಿಎಸ್ ನಾಯಕರನ್ನು ತುಳಿದು ತಾವೇ ಚಕ್ರಾಧಿಪತ್ಯ ಸಾಧಿಸುತ್ತಿರುವುದು ಕಂಡು ಬರುತ್ತಿದೆ.

   ಸ್ವಾಮೀಜಿಗಳ ಭವಿಷ್ಯ ಸುಳ್ಳಾಗಿದೆ: ಸಚಿವ ಸಾ.ರಾ.ಮಹೇಶ್

    ದಸರಾದಿಂದ ದೂರವಿರುವ ಶಾಸಕರು

   ದಸರಾದಿಂದ ದೂರವಿರುವ ಶಾಸಕರು

   ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದು, ಬೇರೆಯವರ ಮರ್ಜಿಯಲ್ಲಿದ್ದೇನೆ. ಹೀಗಾಗಿ ಉತ್ತಮ ಆಡಳಿತ ನಡೆಸಲಾಗುತ್ತಿಲ್ಲ. ನಾನೊಬ್ಬನೇ ಯಾವುದೇ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ ನಾನು ಸಾಂದರ್ಭಿಕ ಶಿಶು ಎಂಬಂತಹ ಹೇಳಿಕೆಗಳನ್ನು ನೀಡುತ್ತಾ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

   ಇಷ್ಟಕ್ಕೂ ಜೆಡಿಎಸ್ ನ ಸಚಿವರು ಕಾಂಗ್ರೆಸ್ ಶಾಸಕರನ್ನು ಮೂಲೆ ಗುಂಪು ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಮೈಸೂರು ದಸರಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿಯಾಗಿವೆ.

   ಕಾಂಗ್ರೆಸ್ ಶಾಸಕರು, ಸೇರಿದಂತೆ ನಾಯಕರನ್ನು ಬದಿಗೆ ಸರಿಸಲಾಗಿದ್ದು, ಜೆಡಿಎಸ್ ನಾಯಕರಿಗೆ ಮಣೆ ಹಾಕಲಾಗುತ್ತಿದೆ. ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರು ದಸರಾದಿಂದ ದೂರವಿದ್ದಾರೆ. ಸದ್ಯ ಜೆಡಿಎಸ್ ನಾಯಕರು ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.

   ಜೆಡಿಎಸ್ -ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ

    ಮನೆಯ ಸದಸ್ಯರು ಕಣದಲ್ಲಿ

   ಮನೆಯ ಸದಸ್ಯರು ಕಣದಲ್ಲಿ

   ಇನ್ನು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಕಳೆಯುವ ವೇಳೆಗೆ ಮೈತ್ರಿ ಸರ್ಕಾರದ ನಿಜ ಬಣ್ಣ ಬಯಲಾದರೂ ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಅಸಮಾಧಾನಗಳು ಭುಗಿಲೆದ್ದಿವೆ. ಜತೆಗೆ ಸಂಪುಟ ವಿಸ್ತರಣೆ ಮಾಡದೆ ಮುನ್ನಡೆಯುತ್ತಿರುವುದು ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳನ್ನು ಕೆರಳುವಂತೆ ಮಾಡಿದೆ.

   ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಜೆಡಿಎಸ್ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಗುಂಗಿನಲ್ಲಿದೆ. ಜತೆಗೆ ಬಹಳಷ್ಟು ಕ್ಷೇತ್ರಗಳಿಗೆ ತಮ್ಮ ಮನೆಯ ಸದಸ್ಯರನ್ನು ಕಣಕ್ಕಿಳಿಸುವ ಆಲೋಚನೆಯಲ್ಲಿದೆ.

    ಏನೂ ಮಾಡಲು ಸಾಧ್ಯವಿಲ್ಲ

   ಏನೂ ಮಾಡಲು ಸಾಧ್ಯವಿಲ್ಲ

   ಒಂದು ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆದು ಪರಸ್ಪರ ಕ್ಷೇತ್ರ ಹಂಚಿಕೆಯ ಮೂಲಕ ಚುನಾವಣೆ ಎದುರಿಸಿದರೆ ಕಾಂಗ್ರೆಸ್‌ಗಿಂತ ಹೆಚ್ಚಿನ ಲಾಭ ಜೆಡಿಎಸ್ ಗೆ ಆಗುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಮನಗಂಡ ಕೆಲವು ಕಾಂಗ್ರೆಸ್ ಶಾಸಕರು ಇದೀಗ ಅಸಮಾಧಾನಗೊಂಡಿದ್ದಾರೆ.

   ಆದರೆ ಕಾಂಗ್ರೆಸ್‌ನ ಹೈಕಮಾಂಡ್ ಅಭಯ ಜೆಡಿಎಸ್ ಮೇಲಿರುವ ತನಕ ರಾಜ್ಯ ನಾಯಕರು ತಿಪ್ಪರಲಾಗ ಹಾಕಿದರೂ ಏನೂ ಮಾಡಲು ಸಾಧ್ಯವಿಲ್ಲ ಎಂಬುವುದಂತು ಸತ್ಯ.

   English summary
   Recent developments in the state government are strange. It is also known in the Dasara program. Read the detailed article on this.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X