ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಎಸ್ ವಿವೈಎಂ ನಿಂದ ಇಟಿ-17 ಎಂಬ ವಿಶಿಷ್ಟ ಕಾರ್ಯಕ್ರಮ

ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮೇ 11 ಮತ್ತು 12 ರಂದು ಎಸ್.ವಿ.ವೈ.ಎಂ "ಇಟಿ-17" ಹೆಸರಿನಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನವನ್ನು ಎಸ್ ವಿ ವೈ ಎಂ ಆಯೋಜಿಸಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 10: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಅಭಿಲಾಷೆಯೊಂದಿಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಾದರಿಗಳನ್ನು ಹಂಚಿಕೊಳ್ಳಲು ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ (ಎಸ್ ವಿ ವೈ ಎಂ) ವೇದಿಕೆ ಕಲ್ಪಿಸಿದೆ.
ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮೇ 11 ಮತ್ತು 12 ರಂದು ಎಸ್.ವಿ.ವೈ.ಎಂ "ಇಟಿ-17" ಹೆಸರಿನಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನವನ್ನು ಎಸ್ ವಿ ವೈ ಎಂ ಆಯೋಜಿಸಿದೆ.

ET 17: A different programme in Mysuru

ಕರ್ನಾಟಕ ಸರ್ಕಾರ, ವಿಜ್ಞಾನ ಪ್ರಸಾರ್, ವಿಜ್ಞಾನ ಭಾರತಿ, ಇಸ್ರೋ ಮತ್ತು ಎಕ್ಸೆಲ್ ಸಾಫ್ಟ್ ಟೆಕ್ನಲಾಜಿಸ್ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮ "ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ, ಆಚರಣೆಗಳು ಮತ್ತು ಸಾಧ್ಯತೆ"ಗಳ ಕುರಿತದ್ದಾಗಿದೆ.

ಈ ಸಮ್ಮೇಳನವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಉದ್ಘಾಟಿಸಲಿದ್ದು, ರಾಷ್ಟ್ರಮಟ್ಟದ 50ಕ್ಕಿಂತ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಡಾ ಕಸ್ತೂರಿರಂಗನ್, ಹಾಗೂ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ ಸುಭಾಷ್ ಚಂದ್ರ ಕುಂಟಿಯಾ ಭಾಗವಹಿಸಲಿದ್ದಾರೆ.

ಎಸ್ ವಿ ವೈ ಎಂ ಒಂದು ಅಭಿವೃದ್ಧಿ ಪರ ಸಂಸ್ಥೆ. ಇದು ಕಳೆದ 33 ವರ್ಷಗಳಿಂದ ಆರೋಗ್ಯ, ಶಿಕ್ಷಣ, ಸಾಮಾಜಿಕ, ಆರ್ಥಿಕ ಸಬಲೀಕರಣ ಹಾಗೂ ತರಬೇತಿ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯದ ಸಹಭಾಗಿತ್ವದೊಂದಿಗೆ ಹೊಸ ನಾಗರಿಕ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

English summary
Swamy Vivekananda Youth Movement of Mysuru is oraganising a programme called, ET 17 on May 11th and 12th in Mysuru University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X