ಬಂಡೀಪುರ ಉದ್ಯಾನದಲ್ಲಿ ಆನೆ ಸಾವು... ಹುಲಿಗೆ ಗಾಯ..!

ಮೈಸೂರು, ಜನವರಿ 13: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಅನಾರೋಗ್ಯದಿಂದ ಹೆಣ್ಣಾನೆಯೊಂದು ಮೃತಪಟ್ಟರೆ, ಹುಲಿಯೊಂದು ಕಾಡೆಮ್ಮೆಯೊಂದಿಗೆ ಕಾದಾಡಿ ಗಂಭೀರ ಗಾಯಗೊಂಡಿರುವ ಘಟನೆ ಜರುಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಅರಣ್ಯ ವಲಯದಲ್ಲಿ ಹೆಣ್ಣಾನೆಯ ಕಳೇಬರ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ದೊರೆತಿದ್ದು, ತಕ್ಷಣ ಅವರು ಆರ್‍ಎಫ್‍ಓ ಪರಮೇಶ್ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ವೈದ್ಯರಾದ ನಾಗರಾಜು ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.[ಸುಳ್ಯದ ಸಂಪಾಜೆ ಅರಣ್ಯದಲ್ಲಿ ಇಪ್ಪತ್ತು ವರ್ಷದ ಗಂಡಾನೆ ಸಾವು]

ಸುಮಾರು 25 ವರ್ಷ ವಯಸ್ಸಿನ ಹೆಣ್ಣಾನೆ 3 ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಅಲ್ಲದೆ ಸಾವಿಗೆ ಅನಾರೋಗ್ಯ ಕಾರಣವಾಗಿದ್ದು, ಅಸಹಜ ಸಾವು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕಳೇಬರದ ಅಂತ್ಯಕ್ರಿಯೆ ನಡೆಸಲಾಗಿದೆ.

elephant was found dead and tiger injured in Bandipur National Park

ಹುಲಿಗೆ ಗಾಯ
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೊಳೆಯೂರು ಅರಣ್ಯ ವಲಯದ ಎಂ.ಸಿ. ತಳಲು ಬೀಟಿನ ನುಗು ಜಲಾಶಯದ ಹಿನ್ನೀರಿನಲ್ಲಿ ಗಾಯಗೊಂಡ ಏಳು ವರ್ಷದ ಗಂಡು ಹುಲಿ ಪತ್ತೆಯಾಗಿದೆ. ಇದನ್ನು ಅರವಳಿಕೆ ಮದ್ದು ನೀಡಿ ಸೆರೆಹಿಡಿಯಲಾಗಿದ್ದು, ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದು ಕಾಡೆಮ್ಮೆಯೊಂದಿಗೆ ಕಾದಾಡಿ ಬಲಗಾಲಿನ ಮೂಳೆಯನ್ನು ಮುರಿದುಕೊಂಡು ನುಗು ಜಲಾಶಯದ ಹಿನ್ನೀರಿನಲ್ಲಿ ಒದ್ದಾಡುತ್ತಿತ್ತು. ಇದನ್ನು ನೋಡಿದ ಗಸ್ತಿನಲ್ಲಿದ್ದ ಆರ್.ಎಫ್.ಓ ಹರೀಶ್ ಅವರು ನೀರು ಕುಡಿಯಲು ಬಂದ ಹುಲಿ ಆಟವಾಡುತ್ತಿರಬಹುದೆಂದು ಭಾವಿಸಿದ್ದರು. ಆದರೆ ಅದು ನರಳಾಡುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಎಸಿಎಫ್ ಪರಮೇಶ್ ಮತ್ತು ವೈದ್ಯ ಡಾ. ನಾಗರಾಜು, ಆರ್.ಎಫ್.ಓ ಸಂದೀಪ್ ಮತ್ತು ಸಿಬ್ಬಂದಿ ತೆರಳಿ ಹುಲಿಗೆ ಅರವಳಿಕೆ ಮದ್ದು ನೀಡಿ ಪರೀಕ್ಷಿಸಿದಾಗ ಮುಂದಿನ ಬಲಗಾಲಿನ ಮೂಳೆ ಮುರಿರುವುದು ಕಂಡು ಬಂದಿದೆ. ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬನ್ನೇರುಘಟ್ಟಕ್ಕೆ ಕೊಂಡೊಯ್ಯಲು ತೀರ್ಮಾನಿಸಲಾಗಿದ್ದು, ಮೈಸೂರಿನಲ್ಲಿ ಸೂಕ್ತ ಚಿಕಿತ್ಸೆ ನೀಡಿದ ನಂತರವಷ್ಟೆ ಬನ್ನೇರುಘಟ್ಟಕ್ಕೆ ಬಿಡಲಾಗುವುದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+