ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಇನ್ನು ಸಿಗೋದು 3 ಆನೆಗಳು ಮಾತ್ರ!

|
Google Oneindia Kannada News

ಮೈಸೂರು, ಫೆ.17 : ಆನೆಗಳನ್ನು ನೋಡಲು ಮೈಸೂರು ಮೃಗಾಲಯಕ್ಕೆ ಹೋಗುವ ಪ್ರವಾಸಿಗರ ಇನ್ನುಮುಂದೆ ನಿರಾಸೆ ಕಾದಿದೆ. ಹೌದು, ಮೃಗಾಲಯದಲ್ಲಿನ ಆನೆಗಳ ಸಂಖ್ಯೆಯನ್ನು ಕಡಿತಗೊಳಿಸಲು ಮೃಗಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ. ಇದರಿಂದಾಗಿ ಮೃಗಾಲಯದಲ್ಲಿ ಮೂರು ಆನೆಗಳ ದರ್ಶನ ಭಾಗ್ಯ ಮಾತ್ರ ದೊರೆಯಲಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರ 2009ರಲ್ಲಿ ಹೊರಡಿಸಿದ್ದ ಆದೇಶವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಮೈಸೂರು ಮೃಗಾಲಯ ಆಡಳಿತ ಮಂಡಳಿ ಸಜ್ಜಾಗಿದೆ. ಸದ್ಯ ಝೂನಲ್ಲಿ ಏಷ್ಯಾದ ಆರು ಮತ್ತು ಆಫ್ರಿಕಾದ 2 ಆನೆಗಳಿವೆ. ಇವುಗಳಲ್ಲಿ ಎರಡರಿಂದ ಮೂರು ಆನೆಗಳನ್ನು ಮಾತ್ರ ಮೃಗಾಲಯದಲ್ಲಿ ಇಟ್ಟುಕೊಳ್ಳಲು ನಿರ್ಧರಿಸಲಾಗಿದ್ದು, ಉಳಿದವುಗಳನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಲು ಸಿದ್ಧತೆ ನಡೆಸಿದೆ. [ಮೃಗಾಲಯದಲ್ಲಿ ಇನ್ನು ವಾಲಿ ಇಲ್ಲ]

Elephant

ಮೃಗಾಲಯದ ಆನೆಗಳ ಉಪಚಾರಕ್ಕಾಗಿ ಮೈಸೂರು ಹೊರವಲಯದ ಕೂರ್ಗಳ್ಳಿ ಬಳಿ ಪುನರ್ವಸತಿ ಕೇಂದ್ರವೊಂದನ್ನು ತೆರೆಯಲಾಗಿದೆ. ಮೃಗಾಲಯದಲ್ಲಿ ಎರಡು ಅಥವ ಮೂರು ಆನೆಗಳನ್ನು ಇಟ್ಟುಕೊಂಡು ಉಳಿದ ಆನೆಗಳ ಈ ಕೇಂದ್ರದಲ್ಲಿ ನೋಡಿಕೊಳ್ಳಲಾಗುತ್ತದೆ. ಐದು ತಿಂಗಳಿಗೊಮ್ಮೆ ಮೃಗಾಲಯದಲ್ಲಿ ಆನೆಗಳನ್ನು ಕೇಂದ್ರಕ್ಕೆ, ಕೇಂದ್ರದ ಆನೆಗಳನ್ನು ಮೃಗಾಲಯಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. [ಮೈಸೂರು ಝೂ ವೆಬ್ ಸೈಟ್ ನೋಡಿ]

ಕೇಂದ್ರ ಮೃಗಾಲಯ ಪ್ರಾಧಿಕಾರ 2009ರಲ್ಲಿ ಮೃಗಾಲಯದಲ್ಲಿ ಆನೆಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಮೈಸೂರು ಮೃಗಾಲಯ, ಆನೆಗಳ ಸಂಖ್ಯೆಯಲ್ಲಿ ಕಡಿಮೆ ಮಾಡುತ್ತೇವೆ. ಜನರನ್ನು ಆಕರ್ಷಿಸಲು ಮೃಗಾಲಯದಲ್ಲಿ ಆನೆಗಳು ಅಗತ್ಯವಾಗಿವೆ ಎಂದು ತಿಳಿಸಿತ್ತು.

ಈ ನಿಯಮವನ್ನು ಜಾರಿಗೆ ತರಲು ಮೃಗಾಲಯದ ಆಡಳಿತ ಮಂಡಳಿ ಕೂರ್ಗಳ್ಳಿ ಬಳಿ ಪುನರ್ವಸತಿ ಕೇಂದ್ರವೊಂದನ್ನು ತೆರೆದಿದೆ. ಮೃಗಾಲಯದಲ್ಲಿ ಎರಡು ಅಥವ ಮೂರು ಆನೆಗಳನ್ನು ಇಟ್ಟುಕೊಂಡು ಉಳಿದ ಆನೆಗಳನ್ನು ಕೂರ್ಗಳ್ಳಿಗೆ ಸ್ಥಳಾಂತರಿಸಲಾಗುವುದು ಎಂದು ಮೃಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಹೇಳಿದ್ದಾರೆ. ಕೂರ್ಗಳ್ಳಿ ಕೇಂದ್ರ ಉತ್ತಮವಾಗಿದ್ದು, ಆನೆಗಳಿಗೆ ಅಲ್ಲಿ ಸಂಚರಿಸಲು ಹೆಚ್ಚಿನ ಸ್ಥಳಾವಕಾಶವಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಕ್ರಿಯೆ ಈ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ನಂತರ ನೀವು ಮೃಗಾಲಯಕ್ಕೆ ಮಕ್ಕಳೊಂದಿಗೆ ಹೋದಾಗ ಅಲ್ಲಿ ಮೂರು ಆನೆಗಳು ಮಾತ್ರ ಕಾಣಿಸಲಿವೆ. ಉಳಿದ ಆನೆಗಳು ಪುನರ್ವಸತಿ ಕೇಂದ್ರದಲ್ಲಿರುತ್ತವೆ.

English summary
The number of elephants displayed at Mysore zoo is likely to reduce in the coming months with the zoo management planning to set up an elephant care center at Koorgalli near Mysore city. Mysore zoo, which decided to display around three elephants at the zoo and shift the remaining to the elephant care center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X