ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಂಬೂಸವಾರಿ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿ ಅರ್ಜುನ ಅಂಡ್ ಟೀಂ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಅಕ್ಟೋಬರ್ 20 : ಒಂಬತ್ತು ದಿನಗಳ ವೈಭವದ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಯಶಸ್ವಿಯಾಗಿ ತೆರೆಬಿದ್ದಿದೆ. ಇನ್ನು ಜಂಬೂ ಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಲಕ್ಷಾಂತರ ಮಂದಿ ಪ್ರವಾಸಿಗರ ಕೇಂದ್ರ ಬಿಂದುವಾಗಿದ್ದ ಕ್ಯಾಪ್ಟನ್ ಅರ್ಜುನ ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾನೆ.

ದಸರೆಯೇನೋ ಮುಗಿಯಿತು, ಕಸಮಯವಾಯ್ತು ಅಂಬಾವಿಲಾಸ ಅರಮನೆ ದಸರೆಯೇನೋ ಮುಗಿಯಿತು, ಕಸಮಯವಾಯ್ತು ಅಂಬಾವಿಲಾಸ ಅರಮನೆ

ಕಳೆದ ಒಂದು ತಿಂಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ನಾಳೆ ಬೆಳಿಗ್ಗೆ 9:30ಕ್ಕೆ ಅರಮನೆಯಿಂದ ಕಾಡಿನೆಡೆಗೆ ಪ್ರಯಾಣ ಆರಂಭಿಸಲಿದೆ.

ಬಲರಾಮದ್ವಾರದಿಂದಲೇ ಸಾಗುತ್ತದೆ ಜಂಬೂಸವಾರಿ..! ಬಲರಾಮದ್ವಾರದಿಂದಲೇ ಸಾಗುತ್ತದೆ ಜಂಬೂಸವಾರಿ..!

ಹೀಗಾಗಿ ಇಂದು ಎಲ್ಲಾ ಆನೆಗಳಿಗೂ ನೀರಿನ ಮಜ್ಜನ ಸ್ನಾನ ಮಾಡಿಸಲಾಯಿತು. ಸ್ವಚ್ಛಂದವಾಗಿ ನೀರಿನಲ್ಲಿ ಆಟವಾಡುವ ಮೂಲಕ ಕ್ಯಾಪ್ಟನ್ ಅರ್ಜುನ ಪುಲ್ ಕೂಲ್ ಕೂಲ್ ಆಗಿದ್ದಾನೆ.

ಅಂಬಾರಿ ಹೊರುವ ಅರ್ಜುನನ ಸಂಪೂರ್ಣ ವಿವರ ಇಲ್ಲಿದೆ ಓದಿ... ಅಂಬಾರಿ ಹೊರುವ ಅರ್ಜುನನ ಸಂಪೂರ್ಣ ವಿವರ ಇಲ್ಲಿದೆ ಓದಿ...

Elephant Arjuna and Team In Relaxing Mood After Jambu Savari in Mysuru

ಗಜಪಡೆಗಳಿಗೆ ಅಲಂಕರಿಸಿದ್ದ ವಸ್ತುಗಳನ್ನು ತೆಗೆದು ಜೋಡಿಸಿ ಭದ್ರವಾಗಿ ಇಡಲಾಯಿತು. ಇನ್ನು ಕಾವಾಡಿ, ಮಾವುತರ ಕುಟುಂಬದವರು ತಮ್ಮ ಬಟ್ಟೆ ಬರೆಗಳನ್ನು ಒಗೆದು, ಸ್ವಚ್ಛಗೊಳಿಸಿದರು. ತಮ್ಮ ಸಾಮಾನು ಸರಂಜಾಮನ್ನು ಸಿದ್ಧಪಡಿಸಿಕೊಂಡು ಹೊರಡಲು ಅನುವಾದರು.

Elephant Arjuna and Team In Relaxing Mood After Jambu Savari in Mysuru


ಕೃತಜ್ಞತೆ ಸಲ್ಲಿಸಿದ ಮಾವುತ ವಿನು :
ಇತ್ತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿದ್ದಕ್ಕೆ ಅರ್ಜುನನ ಸಾರಥಿ ವಿನು ತಾಯಿ ಚಾಮುಂಡೇಶ್ವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಾನು ಅರ್ಜುನನಿಗೆ ಎರಡನೇ ಬಾರಿ ಸಾರಥಿಯಾಗಿ ಅಂಬಾರಿ ಮುನ್ನಡೆಸಿದ್ದು ಖುಷಿಯಾಗಿದೆ. ಇದಕ್ಕೆಲ್ಲಕ್ಕೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಕಾರಣ. ನಿಗದಿತ ಸಮಯಕ್ಕೆ ನಾವು ಗುರಿ ತಲುಪಿದ್ದೇವೆ. ಅಂಬಾರಿ ನಡೆಸುವ ವೇಳೆ ಯಾವುದೇ ತೊಂದರೆಯಾಗಿಲ್ಲ. ಅಂಬಾರಿ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ಅರ್ಜುನನ ಸಾರಥಿ ವಿನು ತಿಳಿಸಿದರು.

English summary
Mysuru dasara ends with Jambu savari. After that elephants, Mahouts, Kaavadis in relaxing mood on Wednesday. Family members of Mahouts and Kaavadis cleaned their dresses, made all arrangements to leave Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X