• search
For mysuru Updates
Allow Notification  

  ನಿದ್ದೆಗೆಟ್ಟು ಸಿದ್ದರಾಮಯ್ಯ ಮೈಸೂರಲ್ಲಿ ಪ್ರಚಾರಗಿಳಿದಿರುವುದೇಕೆ?

  By ಎಲ್ಕೆ ಮೈಸೂರು
  |
    ಮೈಸೂರಿನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಗಲು ರಾತ್ರಿ ಎನ್ನದೇ ಪ್ರಚಾರಕ್ಕೆ ಇಳಿದಿರುವುದ್ಯಾಕೆ? | Oneindia Kannada

    ಮೈಸೂರು, ಏಪ್ರಿಲ್ 01: ರಾಜಧಾನಿ ಬೆಂಗಳೂರಿನಿಂದ ವಿಶ್ರಾಂತಿಗೆಂದು ತವರು ಜಿಲ್ಲೆ ಮೈಸೂರಿನತ್ತ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿಶ್ರಾಂತಿ ಪಡೆದಿರುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಾರಣ ಅವರನ್ನು ಈ ಬಾರಿಯ ಚುನಾವಣೆ ಇನ್ನಿಲ್ಲದಂತೆ ಕಾಡತೊಡಗಿದೆ.

    ಸಿದ್ದರಾಮಯ್ಯ ಅವರು ಕಣಕ್ಕಿಳಿಯುತ್ತಿರುವ ಚಾಮುಂಡೇಶ್ವರಿ ಕ್ಷೇತ್ರ ಇದೀಗ ರಾಜ್ಯಮಟ್ಟದಲ್ಲಿ ಎಲ್ಲರ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನಿದ್ದೆಗೆಡಿಸಿದೆ.

    ರಮ್ಯಾ ಹೋಟೆಲಿನಲ್ಲಿ ಇಡ್ಲಿ, ಸಾಂಬಾರ್ ತಿಂದ ಸಿದ್ದರಾಮಯ್ಯ

    ತಾವು ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯೂ ಆದ ವರುಣ ಕ್ಷೇತ್ರವನ್ನು ಮಗ ಡಾ.ಯತೀಂದ್ರ ಅವರಿಗೆ ಬಿಟ್ಟು ಕೊಟ್ಟು, ಆತನಿಗೂ ರಾಜಕೀಯ ಭವಿಷ್ಯ ಕಲ್ಪಿಸುವ ಮೂಲಕ ತಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸುಲಭವಾಗಿ ಗೆದ್ದುಬಿಡಬಹುದೆಂದು ಆಲೋಚಿಸಿದ ಅವರಿಗೆ ಚುನಾವಣೆ ಬರುತ್ತಿದ್ದಂತೆಲ್ಲ ಗೆಲುವು ಸುಲಭವಲ್ಲ ಎಂಬ ಕಹಿ ಸತ್ಯ ಅರಿವಾಗುತ್ತಿದೆ.

    ಹೀಗಾಗಿಯೇ ಅವರು ಖುದ್ದು ತಾವೇ ಕ್ಷೇತ್ರಕ್ಕೆ ಹೋಗಿ ಮತದಾರರ ಮುಂದೆ ಕೈಕಟ್ಟಿ, ಕೈಮುಗಿದು ನಿಲ್ಲುತ್ತಿದ್ದಾರೆ. ಇದೊಂದು ಸಾರಿ ನನ್ನನ್ನು ಗೆಲ್ಲಿಸಿಬಿಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.

    ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಪ್ರಚಾರಕ್ಕೆ ಹೋಗುತ್ತಾರೆ ಎಂದರೆ ಅವರ ಸುತ್ತಮುತ್ತ ರಾಜ್ಯದ ಪ್ರಭಾವಿ ಸಚಿವರು ಇದ್ದೇ ಇರುತ್ತಾರೆ. ಆದರೆ ಯಾವ ಪ್ರಭಾವಿ ನಾಯಕರನ್ನು ಹತ್ತಿರ ಬಿಟ್ಟುಕೊಳ್ಳದೆ ಕೇವಲ ಸ್ಥಳೀಯ ನಾಯಕರನ್ನಷ್ಟೆ ತಮ್ಮೊಂದಿಗಿಟ್ಟುಕೊಂಡು ಪ್ರಚಾರ ನಡೆಸುತ್ತಿರುವುದರ ಹಿಂದೆ ಮತದಾರರ ಅನುಕಂಪ ಗಿಟ್ಟಿಸುವ ಗಿಮಿಕ್ ಕೂಡ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

    ಮೈಕೊಡವಿಕೊಂಡು ಎದ್ದ ಸಿದ್ದರಾಮಯ್ಯ

    ಮೈಕೊಡವಿಕೊಂಡು ಎದ್ದ ಸಿದ್ದರಾಮಯ್ಯ

    ಎಲ್ಲ ಜಂಜಾಟವನ್ನು ಬದಿಗೊತ್ತಿ ಕೆಲವೇ ಕೆಲವು ದಿನವನ್ನಾದರೂ ನೆಮ್ಮದಿಯಾಗಿ ಕಳೆಯೋಣ ಎಂದು ಮೈಸೂರಿಗೆ ಬಂದಿದ್ದ ಅವರು ಬಂಡೀಪುರದ ಸೆರಾಯ್ ರೆಸಾರ್ಟ್‍ಗೆ ತೆರಳಿದ್ದರು.

    ಆದರೆ, ಅದೇ ವೇಳೆಗೆ ಮೈಸೂರಿಗೆ ರಾಜಕೀಯ ಚಾಣಕ್ಯ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಬಂದಿಳಿದಿದ್ದು ಮತ್ತು ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದು, ಅರಮನೆಯ ರಾಜವಂಶಸ್ಥರನ್ನು ಮಾತನಾಡಿಸಿದ್ದು, ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ರಾಜು ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ದಲಿತರೊಂದಿಗೆ ಸಂವಾದ ನಡೆಸಿದ್ದು, ಚಾಮರಾಜನಗರದಲ್ಲಿ ಸಮಾವೇಶ ಮಾಡಿದ್ದು, ಮಂಡ್ಯದಲ್ಲಿ ಸಾವಿಗೀಡಾದ ರೈತರ ಮನೆಗೆ ತೆರಳಿದ್ದು ಹೀಗೆ ಅವರು ಮಿಂಚಿನ ಸಂಚಾರ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರು ಮೈಕೊಡವಿಕೊಂಡು ಎದ್ದು ಚಾಮುಂಡೇಶ್ವರಿ ಕ್ಷೇತ್ರದತ್ತ ಹೆಜ್ಜೆ ಹಾಕುವಂತೆ ಮಾಡಿದೆ.

    ಚುನಾವಣಾ ಪ್ರಚಾರದ ರೋಡ್ ಶೋ

    ಚುನಾವಣಾ ಪ್ರಚಾರದ ರೋಡ್ ಶೋ

    ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ ಹೋಬಳಿಯ ಮೈದನಹಳ್ಳಿ, ಮೇಗಳಾಪುರ, ಮಲ್ಲೇಗೌಡನ ಕೊಪ್ಪಲು, ಉಂಡವಾಡಿ, ಚಿಕ್ಕನಹಳ್ಳಿ, ಆನಂದೂರು, ಕಲ್ಲೂರು, ನಾಗನಹಳ್ಳಿ, ಯಡಹಳ್ಳಿ, ರಾಮನಹಳ್ಳಿ, ಸಾಗರಕಟ್ಟೆ, ಹೊಸಕೋಟೆ, ಯಾಚೇಗೌಡನಹಳ್ಳಿ, ದಡದಕಲ್ಲಹಳ್ಳಿ, ಗುಂಗ್ರಾಲ್ ಛತ್ರ, ಯೆಲಚಹಳ್ಳಿ, ಕರಕನಹಳ್ಳಿ, ಈರಪ್ಪನಕೊಪ್ಪಲು, ಹಳೆಕಾಮನಕೊಪ್ಪಲು, ನಾಗವಾಲ, ಇಲಾವಾಲ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದ ರೋಡ್ ಶೋ ನಡೆಸಿದರು.

    ನನ್ನ ಕೊನೆಯ ಚುನಾವಣೆ ಎಂಬ ಹಳೆರಾಗ

    ನನ್ನ ಕೊನೆಯ ಚುನಾವಣೆ ಎಂಬ ಹಳೆರಾಗ

    ಸಭೆಗಳಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಈ ಕ್ಷೇತ್ರದಿಂದಲೇ ನನ್ನ ಕೊನೆಯ ಚುನಾವಣೆ ಎದುರಿಸಿ ಗೆದ್ದು ಬಂದು ನಿಮ್ಮ ಋಣ ತೀರಿಸುತ್ತೇನೆ. ನಾನು ನಂಬಿರುವ ಚಾಮುಂಡೇಶ್ವರಿ ಕ್ಷೇತ್ರದ ಜನರಾದ ನೀವು ನನ್ನ ಕೈ ಬಿಡುವುದಿಲ್ಲ.

    ಇದುವರೆಗೆ ಮುಖ್ಯಮಂತ್ರಿಗಳಾಗಿದ್ದವರಾರು ಕೆಂಪೇಗೌಡ ದಿನಾಚರಣೆ ಮಾಡಲಿಲ್ಲ. ನಾವು ಮಾಡಿದೆವು. ಕೆಂಪೇಗೌಡ ಪ್ರಾಧಿಕಾರ ರಚನೆ. ಕೆಂಪೇಗೌಡ ವಿಮಾನನಿಲ್ದಾಣವೆಂದು ಹೆಸರಿಟ್ಟೆವು ಎಂದು ಹೇಳುವ ಮೂಲಕ ಒಕ್ಕಲಿಗರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

    ನನ್ನ ಸೋಲಿಸಲು ವೈರಿಗಳು ಒಂದಾಗಿದ್ದಾರೆ

    ನನ್ನ ಸೋಲಿಸಲು ವೈರಿಗಳು ಒಂದಾಗಿದ್ದಾರೆ

    ಜತೆಗೆ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿ ಜೆಡಿಎಸ್, ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಬಂದಿದೆ. ನನ್ನನ್ನು ಸೋಲಿಸಲು ಎರಡು ಪಕ್ಷಗಳವರು ಪ್ರಯತ್ನಿಸುತ್ತಿದ್ದಾರೆ.


    ಬಿಜೆಪಿಯವರ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ. ನಾನು 5 ಬಾರಿ ಈ ಕ್ಷೇತ್ರದ ಶಾಸಕನಾಗಿ, ಮಂತ್ರಿಯಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನ ನಂತರ ಎಂ. ಸತ್ಯನಾರಾಯಣ ಮಾಡಿದ್ದಾರೆ. ಈಗಲೂ ಸುಮಾರು 400 ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿದ್ದು ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

    ಈ ಜನರ ಋಣವನ್ನು ತೀರಿಸಬೇಕಾಗಿದೆ

    ಈ ಜನರ ಋಣವನ್ನು ತೀರಿಸಬೇಕಾಗಿದೆ

    ಇಲ್ಲಿನ ಜನ ನಾನು ಗೆದ್ದಾಗಲೂ ಲೀಡ್ ಕೊಟ್ಟಿದ್ದಾರೆ. ಸೋತಾಗಲೂ ಲೀಡ್ ಕೊಟ್ಟಿದ್ದಾರೆ. ಈ ಜನರ ಋಣವನ್ನು ತೀರಿಸಬೇಕಾಗಿದೆ. ಆದ್ದರಿಂದ ದೊಡ್ಡಮನಸ್ಸು ಮಾಡಿ ಈ ಬಾರಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ನನ್ನನ್ನು ಆಶೀರ್ವದಿಸಿ ಎಂದು ಗೋಗರೆಯುತ್ತಿದ್ದಾರೆ.
    ಹಾಗೆ ನೋಡಿದರೆ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ದೂರವಾಗಿ ದಶಕಗಳೇ ಕಳೆದಿವೆ. ಆ ಬಳಿಕ ಕಾಂಗ್ರೆಸ್‍ನ ಸತ್ಯನಾರಾಯಣ ಹಾಗೂ ಕಳೆದ ಬಾರಿ ಜೆಡಿಎಸ್‍ನ ಜಿ.ಟಿ.ದೇವೇಗೌಡರನ್ನು ಜನ ಆರಿಸಿ ಕಳುಹಿಸಿದ್ದಾರೆ.

    ಒಕ್ಕಲಿಗರ ಪ್ರಾಬಲ್ಯ ಈ ಕ್ಷೇತ್ರದಲ್ಲಿ ಜಾಸ್ತಿ

    ಒಕ್ಕಲಿಗರ ಪ್ರಾಬಲ್ಯ ಈ ಕ್ಷೇತ್ರದಲ್ಲಿ ಜಾಸ್ತಿ

    ಒಕ್ಕಲಿಗರ ಪ್ರಾಬಲ್ಯ ಈ ಕ್ಷೇತ್ರದಲ್ಲಿ ಜಾಸ್ತಿಯಿದೆ. ಹೀಗಾಗಿ ಜಿ.ಟಿ.ದೇವೇಗೌಡರಿಗೆ ತಮ್ಮ ಸಮುದಾಯದವರು ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆಯಲ್ಲಿದ್ದಾರೆ. ಇನ್ನು ನಾಯಕ ಸಮುದಾಯವೂ ಇಲ್ಲಿ ಗಮನಾರ್ಹ. ಅವರ ಪೈಕಿ ಬಹಳಷ್ಟು ಬಂದಿ ಜಿ.ಟಿ.ದೇವೇಗೌಡರತ್ತ ಒಲವು ಹೊಂದಿದ್ದಾರೆ.
    ಇನ್ನು ಇಲ್ಲಿ ಬಿಜೆಪಿ ಅಬ್ಬರಿಸದೆ ಮೌನವಾಗಿರುವುದನ್ನು ಗಮನಿಸಿದರೆ ಅದರ ಲಾಭ ಜೆಡಿಎಸ್‍ಗೆ ಆಗುವ ಲಕ್ಷಣಗಳಿವೆ. ಇತ್ತೀಚೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗುತ್ತಿರುವ ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಸಿದ್ದರಾಮಯ್ಯ ಅವರು ಸುಮ್ಮನಿದ್ದರೆ ಆಗುವುದಿಲ್ಲ ಎನ್ನುತ್ತಾ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ಇನ್ನಷ್ಟು ಮೈಸೂರು ಸುದ್ದಿಗಳುView All

    English summary
    Elections 2018: Why Siddaramaiah showing much concern on Mysuru? Is Assembly election battle is giving sleep less night to Siddaramaiah? Why he is chanting Kempe gowda Jayanti mantra during the campaign.. get to known the reason here

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more