ಸಿರಿಧಾನ್ಯ ಮೂಲಕ ಕ್ಯಾನ್ಸರ್‌ಗೆ ಔಷಧಿಕೊಡುವ ಮೈಸೂರಿನ ಡಾ.ಖಾದರ್
ಆರೋಗ್ಯಯುತ ಸಮಾಜ ನಿರ್ಮಾಣವಾಗಬೇಕೆಂಬು ಆಶಯ ಹೊಂದಿರುವ ಮೈಸೂರು ಭಾಗದ ವೈದ್ಯ ಖಾದರ್ ವಿಜ್ಞಾನ ಸಂತರಾಗಿದ್ದಾರೆ. ತಮ್ಮಲ್ಲಿರುವ ಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಂವಹನ ಮಾಡುವ ಚತುರತೆಯನ್ನು ಕರಗತ ಮಾಡಿಕೊಂಡಿರುವ ಅವರು ದೇಶಿ ಆಹಾರವಾದ ಸಿರಿಧಾನ್ಯದಿಂದ ಹಲವು ರೋಗಗಳಿಗೆ ರಾಮಬಾಣ ಎಂಬುದನ್ನು ತಿಳಿದು, ಅದರಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದಾರೆ. ನಾರಿನಾಂಶ ಇರುವ ನವಣೆ, ಸಾಮೆ, ಅರ್ಕ, ಕೊರಲು, ಬರಗು, ಊದಲು, ರಾಗಿ.. ಮುಂತಾದ ಸಿರಿಧಾನ್ಯಗಳಿಂದ ಹಲವು ವ್ಯಾಧಿಗಳಿಂದ ಸುಧಾರಿಸಿಕೊಳ್ಳಬಹುದು ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ.
ಮೂಲತಃ ಆಂಧ್ರಪ್ರದೇಶದವರಾದ ಖಾದರ್ , ಕಡಪ ಜಿಲ್ಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು, ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪದವಿಯನ್ನು ಕರ್ನಾಟಕದಲ್ಲಿ ಮುಗಿಸಿದರು. ಜೀವ ರಾಸಾಯನಿಕ ವಿಜ್ಞಾನದಲ್ಲಿ ಖಾದರ್ ಡಾಕ್ಟರೇಟ್ ಪಡೆದರು. ನಂತರ ಅಮೆರಿಕದ ಡುಪಾಂಟ್ ಎನ್ನುವ ಕಂಪನಿಯಲ್ಲಿ ವಿಜ್ಞಾನಿಯಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದಾರೆ.
ದೀಪಾವಳಿಗೆ ರೈಲಿನಲ್ಲಿ ಹೆಚ್ಚುವರಿ ಕೋಚ್ಗಳ ಅಳವಡಿಕೆ; ಮನೆಗೆ ಹೊಗಲು ಕನ್ಪರ್ಮ್ ಕನ್ಫರ್ಮ್ ಟಿಕೆಟ್ ಪಡೆಯುವುದು ಹೇಗೆ?
ಐದು ವರ್ಷ ಪೋರ್ಟ್ ಲ್ಯಾಂಡ್‌ನಲ್ಲೂ ಸಂಶೋಧನೆ ನಡೆಸಿದ ಅವರು ಅಮೆರಿಕದಲ್ಲಿ ದೊಡ್ಡ ಹುದ್ದೆ, ಕೈತುಂಬಾ ಸಂಬಳ ಇದ್ದರೂ ಖಾದರ್ ಮನಸ್ಸು ಚಡಪಡಿಸಿದ್ದು ಮಾತ್ರ ಜನರ ಸಾಮಾನ್ಯರ ಸೇವೆ ಮಾಡುವುದರ ಕಡೆಗೆ. ಅಲ್ಲಿಂದ ತಮ್ಮ ಶ್ರೀಮಂತ ಜೀವನಕ್ಕೆ ತಿಲಾಂಜಲಿ ಹಾಡಿ ಮೈಸೂರಿನ ತೊಣಚಿಕೊಪ್ಪಲಿನಲ್ಲಿ ಬಂದು ನೆಲೆಸಿದರು. ಕಾಡುಕೃಷಿ ವಿಧಾನದ ಮೂಲಕ ಅಧ್ಯಯನ ನಡೆಸಿದರು. ಸಾವಿರಾರು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಕ್ಯಾನ್ಸರ್‌ಗೆ ಸಿರಿಧಾನ್ಯದಿಂದ ಮದ್ದು
ಹೋಮಿಯೋಪಥಿಯ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡಿರುವ ಖಾದರ್ ಸಿರಿಧಾನ್ಯದಲ್ಲಿ ಕ್ಯಾನ್ಸರ್‌ಗೆ ಮದ್ದಿದೆ ಎಂದು ಪ್ರತಿಪಾದಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಬಹುತೇಕ ಕಾಯಿಲೆಗಳನ್ನು ಗುಣಪಡಿಸುವ ವೈದ್ಯರಾಗಿ ಜನಪ್ರಿಯರಾಗಿದ್ದಾರೆ. ಬಿಳಿ ಅನ್ನ, ಬಿಳಿ ಸಕ್ಕರೆ, ಬಿಳಿ ಮೈದಾ, ಬಿಳಿ ಗೋಧಿ ಹಿಟ್ಟನ್ನು ಸಂಪೂರ್ಣ ತ್ಯಜಿಸಿ ಎನ್ನುವ ಅವರು ಅದರಿಂದಾಗುವ ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.
ಎಂಥ ವಿಷವನ್ನಾದರೂ ದೇಹದಿಂದ ಇಳಿಸುವ ಬೆಳ್ತಂಗಡಿಯ ವಿಷ ಧನ್ವಂತರಿ ಬೇಬಿ ಪಿಲ್ಯ

ಪ್ರತಿದಿನ ಕನಿಷ್ಠ 10 ಕ್ಯಾನ್ಸರ್ ಸಿಬ್ಬಂದಿ
ಇತ್ತೀಚಿನ ದಿನಗಳಲ್ಲಿ ನನ್ನ ಬಳಿ ಬರುವವರ ಪಟ್ಟಿಯಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ದಿನಕ್ಕೆ ಕನಿಷ್ಠ 10 ಕ್ಯಾನ್ಸರ್ ಸಂಬಂಧಿ ಪ್ರಕರಣಗಳಿಗೆ ನಾನು ಕಿವಿಯಾಗುವೆ. ಒಂದಿಷ್ಟು ಅನುಮಾನ ಹಾಗೂ ಆತಂಕವನ್ನು ಹೊತ್ತುಕೊಂಡೇ, ಈ ಎಲ್ಲರೂ ನನ್ನೊಂದಿಗೆ ಮಾತಿಗಿಳಿಯುತ್ತಾರೆ. ನಾನು ಸೂಚಿಸುವ ಸಿರಿಧಾನ್ಯ ಹಾಗೂ ಕಷಾಯ ಸೇವನೆಯಿಂದ ಕ್ಯಾನ್ಸರ್ ವಾಸಿಯಾಗುತ್ತೆ ಎಂದು ಯಾರಿಗೂ ನಾನು ಹೇಳಿಲ್ಲ. ಆದರೆ, ಇದನ್ನು ಸೇವಿಸಿದವರ ಅನುಭವ ಕಥನಗಳನ್ನು ವಿವರಿಸಿ, ಬಂದವರಿಗೆ ಬೇಕಾಗುವ ಸಿರಿಧಾನ್ಯ-ಕಷಾಯವನ್ನು ಸೂಚಿಸಿ ಕಳುಹಿಸುವೆ ಎನ್ನುತ್ತಾರೆ ಖಾದರ್.

ವಿಭಿನ್ನ ಕ್ಯಾನ್ಸರ್‌ಗೆ ಸಿರಿಧಾನ್ಯ ಕಷಾಯ ಪಟ್ಟಿ
ಕ್ಯಾನ್ಸರ್ ಜತೆ ಬದುಕುತ್ತಿರುವವರ ಆರೋಗ್ಯ ಸುಧಾರಿಸಲಿ ಎಂಬುದಷ್ಟೆ ನನ್ನ ಆಶಯ. ಹಾಗೆ ನೋಡಿದರೆ ನಾನು ಸೂಚಿಸುವ ಸಿರಿಧಾನ್ಯ, ಕಷಾಯಗಳ ಬಳಕೆ ಹೊಸದೇನಲ್ಲ. ಮೊದಲೆಲ್ಲಾ, ದೇಹವನ್ನು ಬಾಧಿಸುವ ಅನೇಕ ರೋಗ- ರುಜಿನಗಳಿಗೆ, ದೈಹಿಕ ತೊಂದರೆಗಳಿಗೆ ಮನೆಯಲ್ಲೆ ದೊರೆಯುವ ಮದ್ದಿಗೆ ನಮ್ಮ ಜನ ಮೊರೆ ಹೋಗುತ್ತಿದ್ದರು. ತಿನ್ನುವ ಆಹಾರ, ಕುಡಿಯುವ ನೀರು, ಅಡುಗೆಗೆ ಬಳಸುವ ಸೊಪ್ಪು, ವಿವಿಧ ರೀತಿಯ ಕಷಾಯಗಳಿಂದಲೇ ತಮ್ಮ ಸಣ್ಣ ಪುಟ್ಟ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳುತ್ತಿದ್ದರು. ಹಾಗಾಗಿ, ಈ ಪದ್ಧತಿಗೆ ಅಜ್ಜಿ ಮದ್ದು ಎಂಬ ಹೆಸರೂ ಇದೆ. ಇದನ್ನೆ ನಾನು ವೈಜ್ಞಾನಿಕವಾಗಿ ಮತ್ತಷ್ಟು ಅಧ್ಯಯನ ನಡೆಸಿ, ಯಾವ್ಯಾವ ಕ್ಯಾನ್ಸರ್ ಯಾವ್ಯಾವ ಸಿರಿಧಾನ್ಯ-ಕಷಾಯ ಸೂಕ್ತ ಎಂಬುದನ್ನು ಪಟ್ಟಿ ಮಾಡಿರುವೆ ಎಂದು ಖಾದರ್ ಮಾಹಿತಿ ನೀಡುತ್ತಾರೆ.

ಐದು ದಿನ ಮನೆಯಲ್ಲಿ, 2 ದಿನ ಬುಡುಕಟ್ಟು ಜನರಿಗೆ ಚಿಕಿತ್ಸೆ
ವಾರದಲ್ಲಿ ಐದು ದಿನಗಳ ಕಾಲ ಹೋಮಿಯೋಪತಿ ವೈದ್ಯರಾಗಿ ಮೈಸೂರಿನ ತಮ್ಮ ಸುಖಸದನ ಎಂಬ ಹೆಸರಿನ ಮನೆಯಲ್ಲಿ ಮೊದಲೇ ಅಪಾಯಿಂಟ್‍ಮೆಂಟ್ ಪಡೆದು ಬಂದವರಿಗೆ ಚಿಕಿತ್ಸೆ ನೀಡುವ ಇವರು ಉಳಿದ ಎರಡು ದಿನಗಳ ಕಾಲ ಹೆಚ್.ಡಿ. ಕೋಟೆ ತಾಲೂಕಿನ ಬಿದರಹಳ್ಳಿ ಬಳಿಯ ತಮ್ಮ ಜಮೀನಿನ ಪುಟ್ಟ ಮನೆಯಲ್ಲಿ ಅಲ್ಲಿನ ನೂರಾರು ಬುಡಕಟ್ಟು ಮತ್ತು ಕುಗ್ರಾಮಗಳ ಜನರ ಕಾಯಿಲೆಗೆ ಉಚಿತ ಪರೀಕ್ಷೆ ಮಾಡಿ ಔಷಧಿಗಳನ್ನು ಉಚಿತವಾಗಿ ನೀಡುವ ಮಹಾನ್ ಕಾರ್ಯ ಮಾಡುತ್ತಿದ್ದಾರೆ.
ಅಪಾಯಿಂಟ್ ಪಡೆಯುವುದಕ್ಕೆ ಕನಿಷ್ಠ ಎರಡು ಮೂರು ತಿಂಗಳಾದರೂ ಕಾಯಬೇಕು. ಇವರು ಮೈಸೂರಿನ ತೊಣಚಿಕೊಪ್ಪಲಿನಲ್ಲಿ ತಮ್ಮ ಮನೆಯಲ್ಲಿ ಚಿಕಿತ್ಸೆ ನೀಡುತ್ತಾರೆ. ಇವರನ್ನು ಸಂಪರ್ಕಿಸಲು ಈ ಮೊಬೈಲ್ ನಂಬರ್‌ಗೆ ಕರೆ ಮಾಡಬಹುದು: 9448561472