ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ನವವಿವಾಹಿತೆ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜೂನ್ 2 : ವರದಕ್ಷಿಣೆ ಕಿರುಕುಳಕ್ಕೆ ನವ ವಿವಾಹಿತೆ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕೆ.ಆರ್.ನಗರ ಗಂಧನಹಳ್ಳಿ ನಿವಾಸಿಯಾದ ಸುಮಿತ್ರಮ್ಮ ನಾಗರಾಜೇಗೌಡರ ಪುತ್ರಿ ಹರ್ಷಿತಾ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ನವ ವಿವಾಹಿತೆ. ಹರ್ಷಿತಾ ಎಂ.ಎ. ಬಿಇಡಿ ಪಧವಿದರೆಯಾಗಿದ್ದು ಕಳೆದ 6 ತಿಂಗಳ ಹಿಂದಷ್ಟೆ ರಾಮನಗರ ದೇವರಹಳ್ಳಿ ನಿವಾಸಿ ಬಿ.ಇ. ಪಧವಿದರ ಹರ್ಷಿತ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ವರದಕ್ಷಿಣೆ ಜೊತೆ ಕೆ.ಆರ್.ನಗರದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.

ಬೆಂಗಳೂರು: ವರದಕ್ಷಿಣೆ ಕಿರುಕುಳ: ಮಹಿಳಾ ಟೆಕ್ಕಿ ಆತ್ಮಹತ್ಯೆಬೆಂಗಳೂರು: ವರದಕ್ಷಿಣೆ ಕಿರುಕುಳ: ಮಹಿಳಾ ಟೆಕ್ಕಿ ಆತ್ಮಹತ್ಯೆ

ಈ ಮಧ್ಯೆ ಮದುವೆಯಾದ ಮೂರು ತಿಂಗಳಿಗೆ ಪತಿ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ತಡರಾತ್ರಿ ಪತಿ ಹರ್ಷಿತ್ ನಿವಾಸ ದೇವರಹಳ್ಳಿಯಲ್ಲಿ ಯುವತಿ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

Dowry harassment: Newly married woman dies

ಪತಿ ಹರ್ಷಿತ್, ಮಾವ ರಾಮಕೃಷ್ಣಯ್ಯ, ಅತ್ತೆ ಸರೋಜಮ್ಮ ಮೇಲೆ ಕೊಲೆ ಆರೋಪ ಕೇಳಿ ಬಂದಿದ್ದು ಬಲವಂತವಾಗಿ ವಿಷದ ಮಾತ್ರೆ ಕುಡಿಸಿ ಹರ್ಷಿತಾಳನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಹರ್ಷಿತಾ ಪೋಷಕರು ಕಿಡಿಕಾರಿದ್ದಾರೆ.

ಹರ್ಷಿತ ಸಾವನ್ನಪ್ಪಿದ ಬಳಿಕ ಪತಿ, ಮಾವ ಅತ್ತೆ ಎಸ್ಕೇಪ್ ಆಗಿದ್ದು, ಸ್ಥಳಕ್ಕೆ ಚನ್ನಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿ ಹರ್ಷಿತ್ ಕುಟುಂಬಸ್ಥರನ್ನ ಬಂಧಿಸುವಂತೆ ಯುವತಿ ಪೋಷಕರು ಆಗ್ರಹಿಸಿದ್ದಾರೆ.

English summary
Harshitha, a newly married woman in Mysore had found dead at her husband's house on Friday night. Parents of her accused that her husband and family members were harassed for dowry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X