• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಷ್ಟ್ರಮಟ್ಟದ ವಿಜ್ಞಾನ ಚಲನ ಚಿತ್ರೋತ್ಸವದಲ್ಲಿ ಮೈಸೂರು ಯುವಕನ ಸಾಕ್ಷ್ಯಚಿತ್ರ

By ಮೈಸೂರು ಪ್ರತಿನಿಧಿ
|

ಮೈಸೂರು, ನವೆಂಬರ್ 18: ರಾಷ್ಟ್ರಮಟ್ಟದ ವಿಜ್ಞಾನ್ ಪ್ರಸಾರ ವತಿಯಿಂದ ಆಯೋಜಿಸಿರುವ 10ನೇ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವದಲ್ಲಿ ಮೈಸೂರು ಯುವಕ ಎನ್.ಶಿವಮೂರ್ತಿ ಅವರು ನಿರ್ಮಿಸಿರುವ 'ಬಯೋ ಡೈವರ್ಸಿಟಿ ಆಫ್ ತ್ರಿಪುರ' ಕಿರು ಸಾಕ್ಷ್ಯಚಿತ್ರ ಆಯ್ಕೆಯಾಗಿದೆ.

ಪ್ರತಿಷ್ಠಿತ ವೈಲ್ಡ್‌ ಸ್ಕ್ರೀನ್ ಫೆಸ್ಟಿವಲ್ 2020: ಅಧಿಕೃತ ಆಯ್ಕೆಗೊಂಡ ಏಷ್ಯಾದ ಏಕೈಕ ಚಿತ್ರ ಫ್ಲೈಯಿಂಗ್ ಎಲಿಫೆಂಟ್ಸ್

ಮಾನಸ ಗಂಗೋತ್ರಿ ಎಂಆರ್ಇಒ ಕಿರಿಯ ಸಂಶೋಧನಾ ಅಧಿಕಾರಿ ಆ್ಯರನ್ ಅವರ ಮಾರ್ಗದರ್ಶನದಲ್ಲಿ ಶಿವಮೂರ್ತಿ ಅವರು ಕಿರು ಸಾಕ್ಷ್ಯಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದರು. 8 ನಿಮಿಷದ ಈ ಸಾಕ್ಷ್ಯಚಿತ್ರದಲ್ಲಿ ತ್ರಿಪುರದ ಜೀವ ವೈವಿಧ್ಯದ ಮೇಲೆ ಬೆಳಕು ಚೆಲ್ಲಲಾಗಿದೆ.

ವಿಜ್ಞಾನ್ ಪ್ರಸಾರ್ ಹಾಗೂ ತ್ರಿಪುರ ಸ್ಟೇಟ್ ಕೌನ್ಸಿಲ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ವರ್ಚುವಲ್ ಮೂಲಕ ನಡೆಯುವ ಈ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವದಲ್ಲಿ ಶಿವಮೂರ್ತಿ ಅವರ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಡೆಸ್ಟಿನೇಷನ್ ಆಫ್ ತ್ರಿಪುರ ಕ್ಯಾಟಗರಿ ವಿಭಾಗದ ಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿ ಮೂರು ಚಿತ್ರಗಳಲ್ಲಿ ಈ ಸಾಕ್ಷ್ಯಚಿತ್ರ ಸ್ಥಾನ ಗಳಿಸಿದೆ.

ನಾನು ಮೊದಲ ಪ್ರಯತ್ನದಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದಿದ್ದಾರೆ ಶಿವಮೂರ್ತಿ.

English summary
"Bio Diversity of Tripura" short documentary film produced by Mysuru youth N.Shivamurthy has been selected for the 10th National Science Film Festival organized by the Vignan Prasar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X